ಶಿವಮೊಗ್ಗ : ಇಂಟರ್ ನ್ಯಾಷನಲ್ ಲಿಂಗಾ ಯತ ಯುವ ಒಕ್ಕೂಟದಿಂದ ಸೆ.೨೦ ಮತ್ತು ೨೧ ರಂದು ವೈದ್ಯೋದ್ಯಮಿಗಳು ಹಾಗೂ ವೈದ್ಯಕೀ ಯ ಕ್ಷೇತ್ರದ ಚಿಂತಕರ ಶಿಬಿರವನ್ನ ನಗರದ ಕನ್ವೆಷನಲ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಸೆ೨೧ ರಂದು ಶಿಬಿರಾರ್ಥಿಗಳಿಗೆ ನೆಟ್ವರ್ಕ್ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದರು ಡಾ.ಧನಂಜಯ್ ಸರ್ಜಿ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ವೈದ್ಯಕೀಯ ಕ್ಷೇತ್ರದಲ್ಲಿ ಕಾನೂನು ಸಲಹೆ ಬಗ್ಗೆ ಹೇಗೆ ಮುನ್ನಡೆಯಬೇಕು. ಪಾರ್ಟ್ನಶಿಪ್ ಹೇಗಿರಬೇಕು. ಡಿಜಿಟಲ್ ಮಾರ್ಕೆಂಟಿಂಗ್ ನ್ನ ಬಳಕೆ ಹೇಗೆ? ಎಐ ಒಳನೋಟಗಳನ್ನ ಹಾಸ್ಪಿಟಲ್ ವಿಸ್ತರಣೆ,
ಸಂಪನ್ಮೂಲ ಕ್ರೂಢೀಕರಣ, ಸಂಪತ್ತಿನ ಸೃಷ್ಠಿ, ಮತ್ತು ನೂತನ ಡಿಜಿಟಲ್ ಹೆಲ್ತ್ ಕೇರ್ ನ ಸಾಧಕ ಬಾದಕಗಳ ಬಗ್ಗೆ ವಿಶೇಷ ಚರ್ಚೆಗಳನ್ನ ಶಿಬಿರದಲ್ಲಿ ಮಾಡಲಾಗುವುದು ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಶಿಬಿರ ಉದ್ಘಾಟಿಸಲಿದ್ದಾರೆ, ದಾವಣಗೆರೆ ಸಂಸದರಾದ ಪ್ರಭಾ ಮಲ್ಲಿಕಾರ್ಜುನ, ಶಿವಮೊ ಗ್ಗದ ಸಂಸದರು ಶಾಸಕ ಚೆನ್ನಬಸಪ್ಪ, ಚಿತ್ರದುರ್ಗದ ಎಂಲ್ ಸಿ ನವೋನ್ ಕೊಟ್ಟಿಗೆ, ಈ ಟ್ರಸ್ಟ್ ನ ಅಧ್ಯಕ್ಷ ಸಂತೋಷ ಕೆಂಚಾಂಬ ಮತ್ತಿತರರು ಭಾಗಿಯಾಗಲಿದ್ದಾರೆ.
ವೈದ್ಯರು ತಮ್ಮ ಕ್ಲಿನಿಕಲ್ ಪ್ರಾಕ್ಟಿಸ್ ಗಿಂತಲೂ ಮುಂದೆ ಹೋಗಿ ಉದ್ಯೋಮಿಗಳಾಗಲು ಹೊಸ ಕಾಲದ ವೈದ್ಯಕೀಯ ಸೇವಾ ಅಗತ್ಯಗಳು ಹಾಗೂ ಆರೋಗ್ಯ ಸೇವೆಗಳಲ್ಲಿ ಬೇಕಾದ ನೂತನ ತಂತ್ರಜ್ಞಾನಗಳನ್ನ ಸಂಶೋದನೆ ಮಾಡಿ ಹೆಚ್ಚಿನ ಜನರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನ ಒದಗಿಸುವಂತೆ ಮಾಡಲು ಹಾಗೂ ತಮ್ಮ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ಜಿಗಿಯಲು ಈ ಕಾರ್ಯಕ್ರಮ ನೆರವಾಗಲಿದೆ ಎಂದರು. 
Subscribe to Updates
Get the latest creative news from FooBar about art, design and business.