shivamoga : ರೈತ ದಸರಾದ ಎತ್ತಿನ ಗಾಡಿ ಜಾಥಾಕ್ಕೆ ನಗರದ ಸೈನ್ಸ್ ಮೈದಾನದಲ್ಲಿ ಪ್ರಗತಿಪರ ರೈತರಾದ ಕಮಲಮ್ಮ, ಟೀಕಪ್ಪ ಚಾಲನೆ ನೀಡಿದರು. ನಗರದ ಸುತ್ತಮುತ್ತ ಹಳ್ಳಿಗಳಿಂದ ಬಂದ ರೈತರು ಅಲಂಕೃತ ಎತ್ತಿನ ಗಾಡಿ, ಟ್ರಾಕ್ಟರ್ ಮತ್ತು ಟಿಲ್ಲರ್‌ಗಳ ಸೈನ್ಸ್ ಮೈದಾನದಿಂದ ವಿಜ್ರಂಭಣೆ ಮೆರವಣಿಗೆ ಹೊರಟು ಕುವೆಂಪು ರಂಗಮಂದಿರದರೆಗೆ ವಿಜ್ರಂಭಣೆಯಿಂದ ನಡೆಯಿತು. ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿ ನಾಗೇಂದ್ರ, ನೌಕರರಾದ ಗೋವಿಂದಪ್ಪ, ರೈತ ಸಮಿತಿ ಸದಸ್ಯ ಕಾರ್ಯದರ್ಶಿ ವಿಕಾಸ್, ಪಿ. ಕುಮಾರ್, ಹೆಚ್.ಡಿ. ಮಂಜಣ್ಣ, ಮಂಜುನಾಥ್, ಕಾರ್ತಿಕ್, ಸುಧಾಕರ್, ಹಾಗೂ ಕೆಳದಿ ಶಿವಪ್ಪನಾಯಕ ಕೃಷಿ ವಿವಿ ಕುಲಪತಿ ಡಾ.ಆರ್.ಸಿ. ಜಗದೀಶ್, ವೈ.ಹೆಚ್. ನಾಗರಾಜ್ ರೈತ ಮುಖಂಡರು, ರೈತ ಮಹಿಳೆಯರು, ಮಹಾನಗರ ಪಾಲಿಕೆ ಸಿಬ್ಬಂದಿಗಳು ಉಪಸ್ಥಿತರಿದ್ದರು.


