- ಶಿವಮೊಗ್ಗ : ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಜಾತಿ ಕಾಲಂನಲ್ಲಿ ಈಡಿಗ ಎಂದು ನಮೂದಿಸಿ ಎಂದು ಈಡಿಗ ಸಮಾಜದ ಜಿಲ್ಲಾಧ್ಯಕ್ಷರಾದ ಅಜ್ಜಪ್ಪ ಕಾಸರಗೊಪ್ಪ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕೆಲವು ಗುಂಪುಗಳು ಸೇರಿಕೊಂಡು ಈಡಿಗ ಸಮುದಾಯವನ್ನು ವಿಂಗಡಿಸುವ ಹುನ್ನಾರ ಮಾಡುತ್ತಿದ್ದಾರೆ. ಅದ್ದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.
ಸಂಘ ನಿರ್ಧಾರ ಒಂದೇ ಜಾತಿ ಕಾಲಂನಲ್ಲಿ ಈಡಿಗ ಎಂದು ನಮೂದಿಸಿ, ಸರ್ಕಾರ ಯೋಜನೆಗಳನ್ನು ಪಡೆಯಲು ಅನುಕೂಲವಾಗಲಿದೆ. ಈಗಾಗಲೇ ನಾವು ಹಲವಾರು ಸರ್ಕಾರದಿಂದ ಪ್ರಯೋಜನಗಳನ್ನು ಈಡಿಗ ಎಂದೇ ಪಡೆದುಕೊಂಡಿದ್ದೇವೆ. ಅದರಲ್ಲಿ ಉದಾಹರಣೆ ಸಮುದಾಯ ಭವನಗಳು, ಈಡಿಗರ ಸಮುದಾಯ ಭವನವೆಂದು ಸರ್ಕಾರದಿಂದ ಸಹಾಯ ಧನ ಪಡೆದಿದ್ದೇವೆ ಎಂದರು.೪೦ ವರ್ಷದಿಂದ ಈಡಿಗ ಎಂದು ನಮ್ಮ ದಾಖಲಾತಿ ಗಳಲ್ಲಿ ಬರೆಯಿಸಿಕೊಂಡು ಬಂದಿದ್ದೇವೆ. ಈಗ ಈಡಿಗ ಬೇಡ ದೀವರು ಬರೆಯಿಸಿ ಎಂದು ಕರೆ ನೀಡಿದರೆ ಹೇಗೆ ಎಂದು ಪ್ರಶ್ನಿಸಿದ ಅವರು ದೀವರು ಎಂದು ಬರೆಯಿಸಲು ಕರೆಕೊಟ್ಟಿರುವುದು ಒಂದು ಗುಂಪು ಬಿಟ್ಟರೆ ಈಡಿಗ ಸಮಾಜ ಹೇಳಿಲ್ಲ. ಸಮೀಕ್ಷೆಯಲ್ಲಿ ದೀವರು ಎಂಬುದೇ ಇಲ್ಲ. ದೀವರ ಮಕ್ಕಳು ಎಂದು ಇದೆ. ಹಾಗಾಗಿ ಈಡಿಗರು ಎಂದು ಬರೆಯಿಸಿ ಎಂದರು.
ಆರ್ಯ ಈಡಿಗ ಎಂದು ಹೆಸರು ಹಾಕಿಕೊಂಡು ಅನುದಾನ ಪಡೆದು ಈಗ ದೀವರುಎಂದು ಜಿಲ್ಲಾ ಈಡಿಗ ಅಧ್ಯಕ್ಷರು ದೀವರು ಎಂದು ಬರೆಯಿಸಿ ಎಂದರೆ ಹೇಗೆ. ಯೋಗೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ರಿಪ್ಪನ್ ಪೇಟೆಯಲ್ಲಿ ಸಭೆ ನಡೆದಿದೆ. ನಮ್ಮಲ್ಲಿ ೭-೮ ಜನ ಸ್ವಾಮೀಜಿಗಳಿದ್ದಾರೆ. ಒಬ್ವರು ವೇದಿಕೆಯಲ್ಲಿ ಕರೆ ನೀಡಿದರೆ ಉಪಜಾತಿಯನ್ನ ಬರೆಯಬಹುದು ಎಂದು ಬ್ರಹ್ಮಶ್ರೀ ನಾರಾಯಣಗುರು ವಿಚಾರ ವೇದಿಕೆ ಪ್ರವೀಣ ಇರೇಗೋಡರು ಒತ್ತಾಯಸಿದ್ದಾರೆ
ಯಾವುದೇ ಗೊಂದಲ ಬೇಡ ಈಡಿಗ ಎಂದೇ ನಮೂದಿಸಿ ಎಂದು ಮನವಿ ಮಾಡಿದರು.
ಸಂದರ್ಭದಲ್ಲಿ ಪುಷ್ಪಲತಾ, ನಾಗರಾಜ್ ಕೈಸೋಡಿ, ಯೋಗೀಶ್, ಕೆ.ಪಿ. ಲಿಂಗೇಶ್, ಮೋಹನ್, ಮೋಹನ್‌ಕುಮಾರ್ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
