ಶಿವಮೊಗ್ಗ : ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಲಾಗಿರುವ ಶಿವಮೊಗ್ಗ ದಸರಾ-೨೦೨೫ ರ ಅಂಗವಾಗಿ, ಕುವೆಂಪು ರಂಗಮಂದಿರದಲ್ಲಿ ನೃತ್ಯ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಚಲನಚಿತ್ರ ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿಯಾದ ಶ್ರೀಮತಿ ರೂಪ ಅಯ್ಯರ್ ನೆರವೇರಿಸಿದರು. ಮಾತನಾಡುತ್ತಾ ನೃತ್ಯ ನಮ್ಮ ಸಂಪ್ರದಾಯದ ಒಂದುಅಂಗ, ಅದನ್ನು ಅತ್ಯಂತ ಶ್ರದ್ಧೆಮ ಭಕ್ತಿ ಕಲಿತರೇ ಅದು ಎಂದು ಕೂಡ ನಮ್ಮನ್ನು ಕೈಬಿಡುವುದಿಲ್ಲಿ, ಇಂದಿನ ಅಧುನಿಕ ಯುಗದಲ್ಲಿ ಹಲವಾರು ರೀತಿ ನೃತ್ಯ ಕಾರ್ಯಕ್ರಮಕ್ಕೆ ವೇದಿಕೆಗಳು ಸೃಷ್ಟಿಯಾಗಿವೆ. ಅದನ್ನು ಸರಿಯಾಗಿ ಬಳಸಿಕೊಂಡು ನಿಮ್ಮ ಕಲೆಯನ್ನು ಉಳಿಸಿ-ಬೆಳಸುವ ಕೆಲಸವನ್ನು ಮಾಡಬೇಕು. ಆ ನಿಟ್ಟಿನಲ್ಲಿ ಶಿವಮೊಗ್ಗ ಮಹಾನಗರಪಾಲಿಕೆ ವತಿಯಿಂದ ನಡೆಯುತ್ತಿರುವುದು ನನಗೆ ಸಂತಸ ತಂದಿದೆ. ಮುಂದಿನ ಇನ್ನು ಹೆಚ್ಚಿನ ನೃತ್ಯ ಪ್ರಕಾರಗಳು ಈ ಸ್ಫರ್ದೆಯಲ್ಲಿ ಭಾಗವಹಿಸಲಿ ಎಂದರು.
ಮುಖ್ಯಅತಿಥಿಗಳಾಗಿ ಜನಪ್ರಿಯ ಶಾಸಕರಾದ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಬಲ್ಕಿಷ್ ಬಾನು, ನಿಗಮ ಮಂಡಳಿ ಅಧ್ಯಕ್ಷರಾದ ಪಲ್ಲವಿ, ಮಹಿಳಾ ದಸರಾದ ಸದಸ್ಯ ಕಾರ್ಯದರ್ಶಿಗಳಾದ ಅನುಪಮಾ, ಪಾಲಿಕೆ ಮಾಜಿ ಮೇಯರ್-ಉಪಮೇಯರ್, ಸದಸ್ಯರು, ಹಾಗೂ ಮಹಿಳಾ ದಸರ ಸಮಿತಿ ಸದಸ್ಯರು, ಹಾಗೂ ೨೬ ವಿವಿಧ ಮಹಿಳಾ ತಂಡಗಳು ಭಾಗವಹಿಸಿದ್ದರು.
ದೇಶದಲ್ಲಿ ಅತ್ಯಂತ ಪ್ರತಿಭಾನ್ವಿತ ಮತ್ತು ಗೌರವಾನ್ವಿತ ಬರಹಗಾರರಲ್ಲಿ ಒಬ್ಬರಾದ ಎಸ್.ಎಲ್ ಬೈರಪ್ಪನವರಿಗೆ ಮಹಿಳಾ ದಸರಾ ಸಮಿತಿಯಿಂದ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಕೆಲವು ನಿಮಿಷ ಮೌನ ಆಚರಣೆಯ ಮೂಲಕ ಗೌರವಪೂರ್ವಕವಾದ ಸಂತಾಪ ಸೂಚಿಸಲಾಯಿತು.
