ಸಿನಿಮಾ ಅಂದರೇ ಚಾಲೆಜಿಂಗ್ ಸ್ಟಾರ್ ದರ್ಶನ್
ಡೆವಿಲ್ ಮುಗಿಲು ಮುಟ್ಟಿದ ಸಂಭ್ರಮಾಚರಣೆ
ಶಿವಮೊಗ್ಗ : ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಇಂದು ಬಿಡುಗಡೆಯಾಗಿದ್ದು ಅಭಿಮಾನಿಗಳು ಚಲನಚಿತ್ರ ಮಂದಿರದಲ್ಲಿ ಅಭಿಮಾನ ಮೆರೆದಿದ್ದಾರೆ. ಸಿನಿಮಾ ಎರಡು ವರ್ಷದ ನಂತರ ಬಿಡುಗಡೆಯಾಗುತ್ತಿದ್ದು ಡೆವಿಲ್ ಟ್ರೈಲರ್ ರಾಜ್ಯದಲ್ಲಿ ಉತ್ತಮವಾದ ಜನಮನ್ನಣೆ ಪಡೆದಿತ್ತು.
ಟ್ರೈಲರ್ ಎರಡೇ ದಿನಗಳಲ್ಲಿ 11 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. ಎರಡು ವರ್ಷಗಳ ನಂತರ ದರ್ಶನ್ ಅವರನ್ನ ತೆರೆಮೇಲೆ ನೋದಿದ ಅಭಿಮಾನಿ ಹರ್ಷ ಮುಗಿಲು ಮುಟ್ಟಿತ್ತು.
ಈ ಸಿನಿಮಾವನ್ನ ಡಿ.25 ರಂದು ರಿಲೀಸ್ ಆಗುತ್ತಿರುವ ಸುದೀಪ್ ನಟನೆಯ ಮಾರ್ಕ್ ಸಿನಿಮಾದ ಜೊತೆ ವೀವ್ಸ್ ಲೆಕ್ಕಾಚಾರದಲ್ಲಿ ತುಲನೆ ಮಾಡಲಾಗಿತ್ತು. ಇಬ್ಬರು ನಟರ ಫ್ಯಾನ್ಸ್ ಕ್ರೇಜ್ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಇದೆ.
ನಗರದಲ್ಲಿ ಎರಡು ಚಲನ ಚಿತ್ರಮಂದಿರ ಮತ್ತು ಒಂದು ಮಾಲ್ನಲ್ಲಿ ಇಂದು ಬಿಡುಗಡೆಯಾಗಿದೆ. ವರ್ಷಾಗಳ ನಂತರ ಚಿತ್ರ ಮಂದಿರ ಭರ್ತಿಯಾಗಿರುವುದು ಸಿನಿಮಾ ದವರಿಗೂ, ಮಾಲೀಕರಿಗೂ, ಅಭಿಮಾನಿ ಗಳಿಗೂ ಸಂತಸ ತಂದಿದೆ,
ಚಿತ್ರ ಮಂದಿರ ಭರ್ತಿ ಆಗಬೇಕು ಅಂದರೆ ದರ್ಶನ್ ಸಿನಿಮಾ ಬರಬೇಕು, ಅನ್ನುವ ನಾಡನುಡಿಯಂತೆ ಡೆವಿಲ್ ಸಿನಿಮಾ ಮೊದಲೇ ದಿನ ಮೊದಲೇ ಶೋ ಭರ್ಜರಿ ಓಪನಿಂಗ್ ಕಂಡಿದೆ,
ಡೆವಿಲ್ ನೂರು ದಿನ ಆಚರಿಸುವುದು ನಿಶ್ಚಿತ, ಸಿನಿಮಾ ದರ್ಶನ್ ನಟನೆ ತುಂಬಾ ಸುಂದವಾಗಿ ಮೂಡಿಬಂದಿದೆ, ಹಿರಿಯಿನ್ ಪಾತ್ರ ಜೊತೆ ಕಾಮಿಡಿ ಮತ್ತು ಅರ್ಥ ಭರಿತ ವಾದ ಸಿನಿಮಾ, ಪ್ರತಿಯೊಂದು ಹಾಡುಗಳು ಎಲ್ಲರನ್ನು ಮನಸುರೆಗೊಳಿಸುತ್ತೆ,
: ಅಭಿಮಾನಿ
ಚಲನಚಿತ್ರ ಮಂದಿರದ ಎದುರು ಕಟೌಟ್ ಹಾಕಿ ದೀಪದ ಅಲಂಕಾರ ಮುಗಿಸಲಾಗಿದೆ. ಚಲನಚಿತ್ರಮಂದಿರವನ್ನ ದರ್ಶನ್ ಬ್ಯಾನರ್ ನಲ್ಲೇ ಮುಳುಗಿಸಲಾಗಿದೆ. ದರ್ಶನ್ ಅವರ 25 ಅಡಿ ಕಟೌಟ್ ನಿರ್ಮಿಸಲಾಗಿದೆ.

ಬುಧವಾರ ಸಂಜೆ ದರ್ಶನ್ ಅಭಿಮಾನಿಗಳು ಶ್ರೀ ವೀರಭದ್ರೇಶ್ವರ ಚಲನ ಚಿತ್ರ ಮಂದಿರದಲ್ಲಿ ಸಂಭ್ರಮಾಚರಣೆ ನಡೆಸಿ ಕೇಕ್ ಕತ್ತರಿಸಿ, ಡೊಳ್ಳು ಕುಣಿತ, ಬೈಕ್ ರ್ಯಾಲಿ ನಡೆಸಿದರು ಸಿನಿಮಾ ಹಬ್ಬವೇ ನಗರದಲ್ಲಿ ಸೃಷ್ಟಿಯಾಗಿದೆ.
ಸಿನಿಮಾ ನೋಡಿದರೆ ಮತ್ತೊಮ್ಮೆ ನೋಡಬೇಕು ಅನಿಸುತ್ತದೆ, ಇಂತಹ ಕಥೆ ಇರುವ ಸಿನಿಮಾ ಇಲ್ಲಿತನಕ ಬಂದಿಲ್ಲ ಅಷ್ಟು ಚನ್ನಾಗಿ ಮೂಡಿಬಂದಿದೆ. ನನಗೆ ಮೊದಲು ಶೋ ನೋಡುವ ಭಾಗ್ಯ ಸಿಕ್ಕಿದೆ ನನ್ನ ಪುಣ್ಯ.
: ಅಭಿಮಾನಿ
