ಶಿವಮೊಗ್ಗ : ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್ ಕಾಲೇಜನ್ನು ಆರಂಭಿಸುತ್ತಿದ್ದೆವೆ ಎಂದು ಸಂಸ್ಥೆಯ ವ್ಯವಸ್ಥಾಪ ಪಾಲುದಾರ ಅರವಿಂದ ಪಿ.ಎ. ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ನೆಲೆಂಬೋ ವಿನ್ಯಾಸ ಕೌಶಲ್ಯಾಭಿವೃದ್ಧಿಯ ವತಿಯಿಂದ ಈ ಕಾಲೇಜನ್ನು ಆರಂಭಿಸುತ್ತಿದ್ದೇವೆ. ಈ ಕಾಲೇಜಿನಲ್ಲಿ ಫ್ಯಾಷನ್, ಇಂಟಿರಿಯರ್, ಗ್ರಾಫಿಕ್ ಡಿಸೈನ್, ಅನಿಮೇಷನ್, ಬ್ಯೂಟಿ ಅಂಡ್ ಮೇಕಪ್ಗೆ ಸಂಬಂದಿ ಸಿದಂತೆ ತರಬೇತಿಯನ್ನು ನೀಡಲಾಗುವುದು ಎಂದರು.
ರಾಜ್ಯದಲ್ಲಿ ಬೆಂಗಳೂರು ಮತ್ತು ಮೈಸೂರಿನಂತಹ ನಗರದಲ್ಲಿ ಇಂತಹ ಕಾಲೇಜು ಆರಂಬಿಸಿದ್ದರು. ಮಕ್ಕಳಿಗೆ ಅನೇಕ ರೀತಿಯಲ್ಲಿ ತೊಂದ್ರೆಯಾಗುತ್ತಿತ್ತು. ಅದನ್ನು ಮನಗೊಂಡು, ಶಿವಮೊಗ್ಗ ನಗರದಲ್ಲಿ ಮಕ್ಕಳಿಗೆ ಅನುಕೂಲವಾಗಬೇಕು ಎಂದು ಆರಂಭಿಸುತ್ತಿದ್ದೇವೆ ಎಂದರು.
ಎಸ್ಎಸ್ಎಲ್ಸಿ ನಂತರದ ಡಿಪ್ಲಮೋ ಕೋರ್ಸಿಗೆ ಇದನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ. ಪಿಯುಸಿ ಆದ ನಂತರ ಯಾವುದೇ ವಿಭಾಗದ ಮಕ್ಕಳು ನಾಲ್ಕು ವರ್ಷದ, ಮೂರು ವರ್ಷದ ಕೋರ್ಸನ್ನು ಆಯ್ಕೆಮಾಡಿಕೊಳ್ಳಬಹುದು. ಪದವಿ ಪಡೆದವರು ಕೂಡ ಎಂಡಿಇಎಸ್ ಕೋರ್ಸಿಗೆ ಸೇರಬಹುದು. ಇದು ಎರಡು ವರ್ಷದ ಕೋರ್ಸ್ ಆಗಿರುತ್ತದೆ. ಮೇಲಿನ ಎಲ್ಲಾ ಕೋರ್ಸುಗಳನ್ನು ಪ್ರತ್ಯೇಕ ಭಾಗಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ ಎಂದರು.
ವಿನೋಬನಗರದ ಕಲ್ಲಹಳ್ಳಿಯ ತಿಮ್ಮಕ್ಕ ಲೇಔಟ್ನ ಮೂರನೇ ತಿರುವಿನಲ್ಲಿರುವ ಸ್ವಯಂಭೂ ಶ್ರೀ ಸೋಮೇಶ್ವರ ಸಭಾ ಭವನದಲ್ಲಿ ಸೆ.28ರ ಬೆಳಿಗ್ಗೆ 11.30ಕ್ಕೆ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪ ಉದ್ಘಾಟಿಸಲಿದ್ದು. ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರುಗಳಾದ ಚನ್ನಬಸಪ್ಪ, ಶಾರದಾಪೂರ್ಯಾನಾಯ್ಕ, ಡಿ.ಎಸ್. ಅರುಣ್, ಧನಂಜಯ ಸರ್ಜಿ, ಬಲ್ಕೀಶ್ಬಾನು ಮುಂತಾದವರು ಭಾಗವಹಿಸಲಿದ್ದಾರೆಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ. ಬಿ.ಎಸ್. ಕುಮಾರಸ್ವಾಮಿ, ಡಾ.ಕೆ.ಎಸ್. ಪವಿತ್ರಾ ಭಾಗವಹಿಸು ವರು, ಬಳ್ಳೆಕೆರೆ ಸಂತೋಷ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಕೋರ್ಸಿಗೆ ಸಂಬಂಧಪಟ್ಟಂತೆ ವರ್ಷಕ್ಕೆ ಒಂದು ಲಕ್ಷದಿಂದ ೧.೭ ಲಕ್ಷದವರೆಗೆ ಶುಲ್ಕವಿರುತ್ತದೆ. ಇದು ಉದ್ಯೋಗ ಆಧಾರಿತ ಕೋರ್ಸುಗಳಾಗಿರುತ್ತವೆ. ಹೆಚ್ಚಿನ ವಿವರಕ್ಕೆ ಮೊ. ೭೮೯೨೬೭೩೦೩೪ನ್ನು ಸಂಪರ್ಕಿಸಬಹು ದಾಗಿದೆ ಎಂದರು.
ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರಾದ ಕೆ.ಆರ್. ರವೀಂದ್ರ ಮಾತನಾಡಿ, ಜಿ. ಪದ್ಮನಾಭ್, ರಮೇಶ್ಕುಮಾರ್ ಜೆ. ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
