ಶಿವಮೊಗ್ಗ : ಎಲ್ಲಾ ಧರ್ಮದವರನ್ನ ಸಮಾನತೆ ಇರುವ ದೇಶ ಭಾರತವಾಗಿದೆ. ಪಾಕ್ ನಮೆಗೆ ವಿರೋಧಿ ದೇಶವಾಗಿದೆ. ವಿರೋಧಿ ದೇಶದ ಪರ ಘೋಷಣೆ ಕೂಗಿದರೆ ಅವರನ್ನ ಗುಂಡಿಕ್ಕಿ ಕೊಲ್ಲಿ ಎಂದಿದ್ದೆ. ಈಗಲೂ ಆ ಹೇಳಿಕೆಗೆ ಬದ್ಧನಾಗಿರುವೆ. ಆದರೆ ಭದ್ರಾವತಿ ಪ್ರಕರಣದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡು ಬರಬೇಕು. ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಇದರಲ್ಲಿ ಓಲೈಕೆಯಿಲ್ಲ ಎಂದು ಸಾಗರ ಶಾಸಕರಾದ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ ಬಿಜೆಪಿ ಯಾರನ್ನ ಓಲೈಸುತ್ತಿದೆ. ನೀವು ಮೊದಲಿನಿಂದಲೂ ಹಿಂದೂಗಳನ್ನ ಓಲೈಸಿದೆ. ಇವರು ಹಿಂದೂಗಳನ್ನ ಓಲೈಸುವ ಕಾರಣಕ್ಕೆ ಮುಸ್ಲೀಂರು ನಮಗೆ ಮತಹಾಕುತ್ತಿದ್ದಾರೆ. ಮದ್ದೂರಿಗೆ ಬಿಜೆಪಿ ನಿಯೋಗ ಹೋಗ್ತೀದೆ. ಧರ್ಮಸ್ಥಳದ ವಿರುದ್ಧ ಪಿತೂರಿ ನಡೆದಿದೆ ಎಂದು ಹೋಗಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ ಎಸ್ಐಟಿ ರಚನೆಯಾದ ಪರಿಣಾಮ ತಪ್ಪಿತಸ್ಥರು ಜೈಲುಪಾಲಾಗುತ್ತಿಲ್ಲವೇ? ಕೇವಲ ಬಿಜೆಪಿ ಧರ್ಮಸ್ಥಳದ ಪರವಿಲ್ಲ. ನಾವು ಇದ್ದೇವೆ. ಧರ್ಮಸ್ಥಳ ಮತ್ತು ಮದ್ದೂರಿನಲ್ಲಿ ಯಾರೇ ಕಿಡಿಗೇಡಿತನ ಮಾಡಲಿ ಅವರ ವಿರುದ್ಧ ಕಾಂಗ್ರೆಸ್ ಕ್ರಮ ಜರುಗಿಸುತ್ತಿದೆ ಎಂದರು.
ಪಾಕ್ ಪರ ಘೋಷಣೆ ತನಿಖೆ ಆಗಬೇಕು. ಪಾಕ್ ಪರ ಘೋಷಣೆ ಆದರೆ ಗುಂಡಿಕ್ಕಿ ಎಂದಿರುವೆ. ಮಂಗಳೂರಿನಲ್ಲಿ ಬಾಂಬ್ ಇಟ್ಟವನನ್ನೂ ಗುಂಡಿಕ್ಕಿ ಎಂದಿರುವೆ. ಭದ್ರಾವತಿ ಶಾಸಕರು ಒಬ್ಬರೆ ಮುಸ್ಲೀಂ ಆಗಿ ಮುಂದಿನ ಜನ್ಮದಲ್ಲಿ ಹುಟ್ಟುವೆ ಎಂದಿದ್ದನ್ನೇ ಹೆಚ್ಚಾಗಿ ಬಿಂಬಿಸುವ ಬಿಜೆಪಿ ಈ ಹಿಂದೆ ದೇವೇಗೌಡರೂ ಮುಸ್ಲೀಂ ಆಗಿ ಹುಟ್ಟುವೆ ಎಂದಿದ್ದರು. ಅವರ ಜೊತೆ ಬಿಜೆಪಿ ಈಗ ಜೊತೆಗೂಡಿ ಸರ್ಕಾರ ಮಾಡಿದ್ದಾರಲಾ ಎಂದು ಹೇಳಿದರು.
