Subscribe to Updates
Get the latest creative news from FooBar about art, design and business.
Author: newbietechy.blog@gmail.com
ಶಿವಮೊಗ್ಗ: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ಬೆಂಗಳೂರು ಇಲ್ಲಿ ಐಟಿಐ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿ + ಐಟಿಐ ಪಾಸಾದವರು ಫಿಟ್ಟರ್, ಟರ್ನರ್, ಮಷಿನಿಸ್ಟ್, ಎಲೆಕ್ಟ್ರೀಷಿಯನ್, ವೆಲ್ಡರ್, ಸಿಒಪಿಎ (ಅಔPಂ), ಕಾರ್ಪೆಂಟರ್, ಫೌಂಡ್ರಿಮನ್, ಶೀಟ್ ಮೆಟಲ್ ವರ್ಕರ್, ಟೂಲ್ ಆಂಡ್ ಡೈಮೇಕರ್, ಸಿಎನ್‌ಸಿ ಪ್ರೋಗ್ರಾಮರ್ ಕಂ ಆಪರೇಟರ್ ತರಬೇತಿ ಪಡೆಯಲು ಅರ್ಜಿ ಸಲ್ಲಿಸಬಹುದು. ಆಸಕ್ತರು ತಮ್ಮ ಎಸ್‌ಎಸ್‌ಎಲ್‌ಸಿ+ ಐಟಿಐ ಅಂಕಪಟ್ಟಿ, ಜಾತಿ /ಪಿಡಬ್ಲೂö್ಯಡಿಪ್ರಮಾಣ ಪತ್ರ, ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಈ ಎಲ್ಲಾ ದಾಖಲೆಗಳ ಮೂಲ ಪ್ರತಿ ಹಾಗೂ 2 ಸೆಟ್ ಜೆರಾಕ್ಸ್ ಪ್ರತಿಯನ್ನು ತೆಗೆದುಕೊಂಡು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ, ಗುತ್ಯಪ್ಪ ಕಾಲೋನಿ, ಪಂಪಾ ನಗರ, 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿಗೆ ದಿ:26/09/2025 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ,…
ಶಿವಮೊಗ್ಗ : ಎಲ್ಲಾ ಧರ್ಮದವರನ್ನ ಸಮಾನತೆ ಇರುವ ದೇಶ ಭಾರತವಾಗಿದೆ. ಪಾಕ್ ನಮೆಗೆ ವಿರೋಧಿ ದೇಶವಾಗಿದೆ. ವಿರೋಧಿ ದೇಶದ ಪರ ಘೋಷಣೆ ಕೂಗಿದರೆ ಅವರನ್ನ ಗುಂಡಿಕ್ಕಿ ಕೊಲ್ಲಿ ಎಂದಿದ್ದೆ. ಈಗಲೂ ಆ ಹೇಳಿಕೆಗೆ ಬದ್ಧನಾಗಿರುವೆ. ಆದರೆ ಭದ್ರಾವತಿ ಪ್ರಕರಣದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡು ಬರಬೇಕು. ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಇದರಲ್ಲಿ ಓಲೈಕೆಯಿಲ್ಲ ಎಂದು ಸಾಗರ ಶಾಸಕರಾದ ಬೇಳೂರು ಗೋಪಾಲಕೃಷ್ಣ ತಿಳಿಸಿದರು. ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ ಬಿಜೆಪಿ ಯಾರನ್ನ ಓಲೈಸುತ್ತಿದೆ. ನೀವು ಮೊದಲಿನಿಂದಲೂ ಹಿಂದೂಗಳನ್ನ ಓಲೈಸಿದೆ. ಇವರು ಹಿಂದೂಗಳನ್ನ ಓಲೈಸುವ ಕಾರಣಕ್ಕೆ ಮುಸ್ಲೀಂರು ನಮಗೆ ಮತಹಾಕುತ್ತಿದ್ದಾರೆ. ಮದ್ದೂರಿಗೆ ಬಿಜೆಪಿ ನಿಯೋಗ ಹೋಗ್ತೀದೆ. ಧರ್ಮಸ್ಥಳದ ವಿರುದ್ಧ ಪಿತೂರಿ ನಡೆದಿದೆ ಎಂದು ಹೋಗಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ ಎಸ್‌ಐಟಿ ರಚನೆಯಾದ ಪರಿಣಾಮ ತಪ್ಪಿತಸ್ಥರು ಜೈಲುಪಾಲಾಗುತ್ತಿಲ್ಲವೇ? ಕೇವಲ ಬಿಜೆಪಿ ಧರ್ಮಸ್ಥಳದ ಪರವಿಲ್ಲ. ನಾವು ಇದ್ದೇವೆ. ಧರ್ಮಸ್ಥಳ ಮತ್ತು ಮದ್ದೂರಿನಲ್ಲಿ ಯಾರೇ ಕಿಡಿಗೇಡಿತನ ಮಾಡಲಿ ಅವರ ವಿರುದ್ಧ ಕಾಂಗ್ರೆಸ್ ಕ್ರಮ ಜರುಗಿಸುತ್ತಿದೆ ಎಂದರು. ಪಾಕ್…