Author: Raghu Shetty

ಶಿವಮೊಗ್ಗ: ದೊಡ್ಮನೆ ಸೊಸೆ ಗೀತಾ ಶಿವರಾಜಕುಮಾರ್ ಇದೀಗ ಇನ್ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಗೀತಾ ಶಿವರಾಜ್‌ಕುಮಾರ್, ನಾನು ಚುನಾವಣೆಗಳಲ್ಲಿ ಸ್ಪರ್ಧಿಸಲ್ಲ. ಆದರೆ ನಿಮ್ಮೆಲ್ಲರ ಜೊತೆ ನಿಲ್ಲುತ್ತೇನೆ. ಮುಂದಿನ ಚುನಾವಣೆಗೆ ಬಂದು ಪ್ರಚಾರ ಮಾಡುತ್ತೇನೆ ಎಂದು ಹೇಳಿದರು. ಮಹಿಳೆಯರು ಯಾರೂ ಅಬಲೆಯೆರಲ್ಲ, ಎಲ್ಲರೂ ಸಬಲೆಯರು. ಮಹಿಳೆಯರಿಗೆ ಶಕ್ತಿ ನೀಡಿದರೆ ಎಂತಹ ಕೆಲಸವನ್ನಾದರೂ ಮಾಡುತ್ತಾರೆ. ಇನ್ನು ನಿಮಗೆ ಯಾವುದೇ ಸಮಸ್ಯೆ, ಕಷ್ಟಗಳಿದ್ದರೂ ಸಚಿವ ಮಧು ಬಂಗಾರಪ್ಪ ಅವರನ್ನು ಹಿಡಿದುಕೊಂಡು ಕೆಲಸ ಮಾಡಿಸಿಕೊಳ್ಳಿ ಎಂದು ಹೇಳಿದರು.ಶಿವಮೊಗ್ಗ : ನವರಾತ್ರಿಯ ಐದನೇ ದಿನ ಬೂದಿ ಬಣ್ಣದ ಬಟ್ಟೆಯಲ್ಲಿ ಕಂಗೊಳಿಸಿದ ಗುರುಪುರದ ನವಭಿರುಚಿ ಭಜನಾ ಸಂಘದ ಮಹಿಳಾಮಣಿಯರು.

Read More

ಐತಿಹಾಸಿಕ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗಾಗಿ ನಿಯೋಜಿಸಲಾದ ೧.೨ ಲಕ್ಷ ಗಣತಿದಾರರ ತಂಡಕ್ಕೆ ಪಾವತಿಸಲು ಕರ್ನಾಟಕ ಸರ್ಕಾರ ೬೦.೩೬ ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಸಮೀಕ್ಷೆ ಮಾಡಿದ ಪ್ರತಿ ಗಣತಿದಾರರಿಗೆ ೫,೦೦೦ ರೂ. ಜೊತೆಗೆ ೧೦೦ ರೂ.ಗಳನ್ನು ನೀಡಲಾಗುತ್ತದೆ, ಆದರೆ ಮೇಲ್ವಿಚಾರಣಾ ಅಧಿಕಾರಿಗಳು ತಲಾ ೧೦,೦೦೦ ರೂ.ಗಳನ್ನು ಪಡೆಯುತ್ತಾರೆ. ಬೃಹತ್ ಬೆಂಗಳೂರು ಪ್ರಾಧಿಕಾರದ ಪ್ರದೇಶಗಳಲ್ಲಿ ಕೆಲಸ ಮಾಡುವವರು ಬೆಂಗಳೂರಿನ ದರಗಳಿಗೆ ಅನುಗುಣವಾಗಿ ತಮ್ಮ ಹೆಚ್ಚುವರಿ ವೆಚ್ಚಗಳನ್ನು ಭರಿಸಲು ಇನ್ನೂ ಹೆಚ್ಚಿನ ಭತ್ಯೆಯನ್ನು ಪಡೆಯಲಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ-ಕಾರ್ಯದರ್ಶಿ ಕೆ.ಡಿ. ದಯಾನಂದ ಅವರು ಈ ಹಣವನ್ನು ಹಂತ ಹಂತವಾಗಿ ವಿತರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಅನುದಾನ ಬಳಕೆಗೆ ಎರಡು ನಿಬಂಧನೆಗಳನ್ನು ವಿಧಿಸಲಾಗಿದೆ. ಅನುದಾನವನ್ನು ಸಮೀಕ್ಷಾದಾರರಿಗೆ ತಲಾ ೫೦೦೦ ರೂ.ನಂತೆ ಮೊದಲ ಕಂತಿನ ಗೌರವಧನ ನೀಡಲು ಬಳಸಬೇಕು. ಉಳಿದ ಅನುದಾನವನ್ನು ಮುಂದಿನ ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಸಮೀಕ್ಷೆಗೆ ಸಂಬಂಧಪಟ್ಟಂತೆ ಬಿಡುಗಡೆ ಮಾಡಲಾದ ಅನುದಾನ, ವೆಚ್ಚದ ವಿವರವನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು ಹಾಗೂ ನಿಯಮಾನುಸಾರ ವೆಚ್ಚಗಳನ್ನು ಭರಿಸಿದ…

Read More

ಶಿವಮೊಗ್ಗ : ಜಿಲ್ಲೆಯ ಜನತೆಗೆ ಸುಧಾರಿತ ಮೂಳೆಚಿಕಿತ್ಸಾ ಆರೈಕೆಯನ್ನು ಒದಗಿಸಲು ಸನ್ ಬೋನ್ ಮತ್ತು ಸ್ಪೈನ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಲ್ಲಾ ಸಮಾನ ಮನಸ್ಸಿನ ಡಾಕ್ಟರ್ ಸೇರಿಕೊಂಡು ಆರಂಭಿಸಿದ್ದೇವೆ ಎಂದು ಆಸ್ಪತ್ರೆಯ ಸ್ಪೈನ್ ಅಂಡ್ ಆಥೋಪಿಡಿಕ್ ಸರ್ಜನ್ ಡಾ. ಆಕಾಶ್ ಹೊಸತೋಟ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡುತ್ತಾ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಅನುಭವವನ್ನು ಈ ಪ್ರದೇಶಕ್ಕೆ ತರುವ ಮತ್ತು ಇತ್ತೀಚಿನ ತಂತ್ರಜ್ಞಾನ ಮತ್ತು ಚಿಕಿತ್ಸಾ ವಿಧಾನಗಳನ್ನು ಬಳಸಿಕೊಂಡು ವ್ಯಾಪಕ ಶ್ರೇಣಿಯ ಮೂಳೆ ಮತ್ತು ಕೀಲು ಸ್ಥಿತಿಗಳಿಗೆ ವೈಯಕ್ತಿಕಗೊಳಿಸಿದ ಆರೈಕೆಯನ್ನು ನೀಡುವುದು. ಮುರಿತಗಳು ಮತ್ತು ಕೀಲು ಬದಲಿಗಳಿಂದ ಹಿಡಿದು ಕ್ರೀಡಾ ಗಾಯಗಳು ಮತ್ತು ಬೆನ್ನು ಮೂಳೆಯ ಅಸ್ವಸ್ಥತೆಗಳವರೆಗೆ. ಪ್ರತಿ ರೋಗಿಯ ವಿಶಿಷ್ಟ ಅಗತ್ಯಗಳಿಗೆ ಅನುಗುಣವಾಗಿ ನಾವು ಸಮಗ್ರ ಪರಿಹಾರಗಳನ್ನು ನೀಡುವ ಸದುದ್ದೇಶದಿಂದ ಈ ಆಸ್ಪತ್ರೆ ಆರಂಭಿಸಿದ್ದೇವೆ ಎಂದರು. ನಗರದ ತಿಲಕ್ ನಗರದ ಶ್ರೀರಾಘವೇಂದ್ರ ಸ್ವಾಮಿ ಮಠದ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಸನ್ ಬೋನ್ ಮತ್ತು ಸ್ಪೈನ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸೆ.28 ರ ಬೆಳಿಗ್ಗೆ…

Read More

ಶಿವಮೊಗ್ಗ : ಭಾರತೀಯ ವೈದ್ಯಕೀಯ ಸಂಘ, ಶಿವಮೊಗ್ಗ ಶಾಖೆಯು 75 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಬರುವ ಸೆ.27 ಮತ್ತು 28 ರಂದು ಅಮೃತ ಮಹೋತ್ಸವ ಕಾರ್ಯಕ್ರಮವು ನಿಗದಿಯಾಗಿದೆ. ದೇಶದಾದ್ಯಂತ ಸಕ್ರಿಯವಾಗಿರುವ ಅಲೋಪತಿ ವೈದ್ಯರ ಈ ಸಂಘಟನೆ ಆರಂಭವಾದದ್ದು 1928ರಲ್ಲಿ. ಭಾರತೀಯ ವೈದ್ಯಕೀಯ ಸಂಘ, ಶಿವಮೊಗ್ಗ ಶಾಖೆ ಆರಂಭವಾದದ್ದು ೧೯೪೮ರಲ್ಲಿಮೆಗ್ಗಾನ್ ಆಸ್ಪತ್ರೆಯ ಡಿಸ್ಟ್ರಿಕ್ಟ್ ಸರ್ಜನ್ ರವರ ಕಛೇರಿಯಲ್ಲಿ. ಸಂಘವು ಆ ದಿನಗಳಲ್ಲಿ ಒಂದು ಜಿಲ್ಲಾ ಶಾಖೆಯಾಗಿ ಇಡೀ ಶಿವಮೊಗ್ಗ ಜಿಲ್ಲೆಯ ಎಲ್ಲ ವೈದ್ಯರನ್ನು ಒಳಗೊಂಡಿತ್ತು. ಅಂದಿನಿಂದಲೂ ಸಾರ್ವಜನಿಕರಲ್ಲಿ ಆರೋಗ್ಯದ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದ ಹೆಗ್ಗಳಿಕೆ ನಮ್ಮ ಸಂಘದ್ದು ಎಂದು ಸಂಘದ ಮಾಜಿ ಅಧ್ಯಕ್ಷರಾದ ಪಿ.ನಾರಾಯಣ ತಿಳಿಸಿದರು. ಅವರು ಪತ್ರಿಕಾಗೊಷ್ಠಿಯಲ್ಲಿ ಮಾತನಾಡುತ್ತಾ ಸಾರ್ವಜನಿಕರಿಗಾಗಿ ಮಧುಮೇಹ, ರಕ್ತದೊತ್ತಡ ತಪಾಸಣೆ, ಸಾಮಾನ್ಯ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣಾ ಶಿಬಿರಗಳು, ಕ್ಯಾನ್ಸರ್ ತಪಾಸಣಾ ಶಿಬಿರಗಳು, ಕುಟುಂಬ ಯೋಜನೆ ಶಸ್ತ್ರಚಿಕಿತ್ಸಾ ಶಿಬಿರಗಳು ಮೊದಲಾದ ಉಪಯುಕ್ತ ಚಟುವಟಿಕೆಗಳನ್ನು ಶಿವಮೊಗ್ಗದ ಜನತೆಗಾಗಿ ಸಂಘವು ನಿರಂತರವಾಗಿ ನಡೆಸಿಕೊಂಡುಬಂದಿದೆ ಎಂದರು. 75 ವರ್ಷಗಳನ್ನು…

Read More

ಶಿವಮೊಗ್ಗ : ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್ ಕಾಲೇಜನ್ನು ಆರಂಭಿಸುತ್ತಿದ್ದೆವೆ ಎಂದು ಸಂಸ್ಥೆಯ ವ್ಯವಸ್ಥಾಪ ಪಾಲುದಾರ ಅರವಿಂದ ಪಿ.ಎ. ತಿಳಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ನೆಲೆಂಬೋ ವಿನ್ಯಾಸ ಕೌಶಲ್ಯಾಭಿವೃದ್ಧಿಯ ವತಿಯಿಂದ ಈ ಕಾಲೇಜನ್ನು ಆರಂಭಿಸುತ್ತಿದ್ದೇವೆ. ಈ ಕಾಲೇಜಿನಲ್ಲಿ ಫ್ಯಾಷನ್, ಇಂಟಿರಿಯರ್, ಗ್ರಾಫಿಕ್ ಡಿಸೈನ್, ಅನಿಮೇಷನ್, ಬ್ಯೂಟಿ ಅಂಡ್ ಮೇಕಪ್‌ಗೆ ಸಂಬಂದಿ ಸಿದಂತೆ ತರಬೇತಿಯನ್ನು ನೀಡಲಾಗುವುದು ಎಂದರು. ರಾಜ್ಯದಲ್ಲಿ ಬೆಂಗಳೂರು ಮತ್ತು ಮೈಸೂರಿನಂತಹ ನಗರದಲ್ಲಿ ಇಂತಹ ಕಾಲೇಜು ಆರಂಬಿಸಿದ್ದರು. ಮಕ್ಕಳಿಗೆ ಅನೇಕ ರೀತಿಯಲ್ಲಿ ತೊಂದ್ರೆಯಾಗುತ್ತಿತ್ತು. ಅದನ್ನು ಮನಗೊಂಡು, ಶಿವಮೊಗ್ಗ ನಗರದಲ್ಲಿ ಮಕ್ಕಳಿಗೆ ಅನುಕೂಲವಾಗಬೇಕು ಎಂದು ಆರಂಭಿಸುತ್ತಿದ್ದೇವೆ ಎಂದರು. ಎಸ್‌ಎಸ್‌ಎಲ್‌ಸಿ ನಂತರದ ಡಿಪ್ಲಮೋ ಕೋರ್ಸಿಗೆ ಇದನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ. ಪಿಯುಸಿ ಆದ ನಂತರ ಯಾವುದೇ ವಿಭಾಗದ ಮಕ್ಕಳು ನಾಲ್ಕು ವರ್ಷದ, ಮೂರು ವರ್ಷದ ಕೋರ್ಸನ್ನು ಆಯ್ಕೆಮಾಡಿಕೊಳ್ಳಬಹುದು. ಪದವಿ ಪಡೆದವರು ಕೂಡ ಎಂಡಿಇಎಸ್ ಕೋರ್ಸಿಗೆ ಸೇರಬಹುದು. ಇದು ಎರಡು ವರ್ಷದ ಕೋರ್ಸ್ ಆಗಿರುತ್ತದೆ. ಮೇಲಿನ ಎಲ್ಲಾ ಕೋರ್ಸುಗಳನ್ನು ಪ್ರತ್ಯೇಕ ಭಾಗಗಳಲ್ಲಿ ಪ್ರವೇಶ…

Read More

shivamoga : ರೈತ ದಸರಾದ ಎತ್ತಿನ ಗಾಡಿ ಜಾಥಾಕ್ಕೆ ನಗರದ ಸೈನ್ಸ್ ಮೈದಾನದಲ್ಲಿ ಪ್ರಗತಿಪರ ರೈತರಾದ ಕಮಲಮ್ಮ, ಟೀಕಪ್ಪ ಚಾಲನೆ ನೀಡಿದರು. ನಗರದ ಸುತ್ತಮುತ್ತ ಹಳ್ಳಿಗಳಿಂದ ಬಂದ ರೈತರು ಅಲಂಕೃತ ಎತ್ತಿನ ಗಾಡಿ, ಟ್ರಾಕ್ಟರ್ ಮತ್ತು ಟಿಲ್ಲರ್‌ಗಳ ಸೈನ್ಸ್ ಮೈದಾನದಿಂದ ವಿಜ್ರಂಭಣೆ ಮೆರವಣಿಗೆ ಹೊರಟು ಕುವೆಂಪು ರಂಗಮಂದಿರದರೆಗೆ ವಿಜ್ರಂಭಣೆಯಿಂದ ನಡೆಯಿತು. ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿ ನಾಗೇಂದ್ರ, ನೌಕರರಾದ ಗೋವಿಂದಪ್ಪ, ರೈತ ಸಮಿತಿ ಸದಸ್ಯ ಕಾರ್ಯದರ್ಶಿ ವಿಕಾಸ್, ಪಿ. ಕುಮಾರ್, ಹೆಚ್.ಡಿ. ಮಂಜಣ್ಣ, ಮಂಜುನಾಥ್, ಕಾರ್ತಿಕ್, ಸುಧಾಕರ್, ಹಾಗೂ ಕೆಳದಿ ಶಿವಪ್ಪನಾಯಕ ಕೃಷಿ ವಿವಿ ಕುಲಪತಿ ಡಾ.ಆರ್.ಸಿ. ಜಗದೀಶ್, ವೈ.ಹೆಚ್. ನಾಗರಾಜ್ ರೈತ ಮುಖಂಡರು, ರೈತ ಮಹಿಳೆಯರು, ಮಹಾನಗರ ಪಾಲಿಕೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಶಿವಮೊಗ್ಗ: ಸೆ. 28ರ ಬೆಳಗ್ಗೆ 10 ಗಂಟೆಗೆ ಗಾರ್ಡನ್ ಏರಿಯಾದ ಮೂರನೇ ತಿರುವಿನಲ್ಲಿ ಎಸ್.ಆರ್. ಆರ್ಕೆಡ್‌ನ ಸಂಘದ ಆವರಣದಲ್ಲಿ ಮಲೆನಾಡು ಪೈಂಟರ‍್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಉದ್ಘಾಟನಾ ಸಮಾ ರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿ ಗೌರವಾಧ್ಯಕ್ಷರಾದ ಎಂ.ಆರ್. ಮುರಳೀಧರ್ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಪೈಂಟರ‍್ಸ್ ಸಂಘದ ಸುಮಾರು ೧೫ ವರ್ಷಗಳಿಂದ ಕಾರ್ಯನಿರ್ವಹಿ ಸುತ್ತ ಬಂದಿದೆ. ಅದರಂತೆ ಪೈಂಟರ‍್ಸ್‌ಗಳಿಗೆ ಯಾವುದೇ ಸಂಘಟನೆ ಇಲ್ಲದೆ, ಸರ್ಕಾರದ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗೇ ಆರೋಗ್ಯ ಸಮಸ್ಯೆಯಾದ ಆಸ್ಪತ್ರೆಗಳಲ್ಲಿ ಹಣ ಪಾವತಿ ಮಾಡಲು ಸಾದ್ಯವಾಗದೆ ಸಮಸ್ಯೆ ಎದುರಿಸಿದ್ದಾರೆ. ಆ ಸಮಯದಲ್ಲಿ ನಮ್ಮ ಪೈಂಟರ‍್ಸ್ ಸಂಘವೇ ಖುದ್ದಾಗಿ ಸಹಕಾರ ನೀಡಿತ್ತು. ಆದ್ದರಿಂದ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಬೇಕಾ ದರೇ ಸಂಘಟನೆ ಮತ್ತು ಸೊಸೈಟಿ ಮುಖ್ಯ ಎಂದು ಬಾವಿಸಿ ಸುಮಾರು ೪ ತಿಂಗಳ ಹಿಂದೆ ಈ ಸೊಸೈಟಿ ಯನ್ನು ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಒಮ್ಮತ ತೀರ್ಮಾನ ಕೈಗೊಂಡು ಮಲೆನಾಡು ಪೈಂಟರ‍್ಸ್ ಕ್ರೆಡಿಟ್-ಆಪರೇಟಿವ್ ಸೊಸೈಟಿ…

Read More

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಶಿವಮೊಗ್ಗ, : ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ದಿ.06/10/2025 ರಿಂದ 35 ದಿನಗಳ ಕಾಲ ನಿರುದ್ಯೋಗಿ ಮಹಿಳೆಯರಿಗಾಗಿ ಉಚಿತ ಬ್ಯೂಟಿ ಪಾರ್ಲರ್ ತರಬೇತಿ ಶಿಬಿರವನ್ನು ಏರ್ಪಡಿಸಿದೆ. ಸ್ವಯಂ ಉದ್ಯೋಗಿಗಳಾಗಲು ಬಯಸುವ 18 ರಿಂದ 45 ವರ್ಷ ವಯಸ್ಸಿನ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಮಹಿಳೆಯರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಶಿಬಿರದ ಸಮಯದಲ್ಲಿ ತರಬೇತಿ, ಊಟ ಹಾಗೂ ವಸತಿ ಸೌಕರ್ಯಗಳು ಉಚಿತವಾಗಿ ಶಿಬಿರಾರ್ಥಿಗಳಿಗೆ ಕಲ್ಪಿಸಲಾಗುವುದು. ಗ್ರಾಮೀಣ ಭಾಗದ ಬಿಪಿಎಲ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಅಭ್ಯರ್ಥಿಗಳು ಸ್ಥಳೀಯ ಭಾಷೆ ಬಲ್ಲವರಾಗಿದ್ದು, ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ತರಬೇತಿ ನಂತರ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. ಆಸಕ್ತಿಯುಳ್ಳ ಶಿಬಿರಾರ್ಥಿಗಳು ಸೆ. 30 ರಂದು ಬೆಳಗ್ಗೆ 9.00 ಘಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ…

Read More

ಶಿವಮೊಗ್ಗ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮವು 2025-26 ನೇ ಸಾಲಿನ ಅಲ್ಪಸಂಖ್ಯಾತರ ಮುಸ್ಲಿಂ, ಜೈನ್, ಬೌದ್ದರು, ಸಿಖ್ ಹಾಗೂ ಪಾರ್ಸಿ ಸಮುದಾಯವರಿಗೆ ವಿವಿಧ ಯೋಜನೆಗಳನ್ನು ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಶ್ರಮಶಕ್ತಿ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ವೃತ್ತಿ ಪ್ರೋತ್ಸಾಹ ಯೋಜನೆ, ವಿದೇಶಿ ವ್ಯಾಸಂಗ ಸಾಲ ಯೋಜನೆ, ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹ ಯೋಜನೆ, ಸಾಂತ್ವಾನ ಯೋಜನೆ ಹಾಗೂ ವ್ಯಾಪಾರ/ ಉದ್ಯಮಿಗಳಿಗೆ ನೇರಸಾಲ ಯೋಜನೆಯಡಿ www.kmdconline.karnataka.gov.in ಮೂಲಕ ಅ.16 ರೊಳಗಾಗಿ ಅರ್ಜಿ ಸಲ್ಲಿಸುವುದು. ಅರ್ಜಿದಾರರು ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು, ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಎಲ್ಲಾ ಮೂಲಗಳಿಂದ ಕುಟುಂಬ ವಾರ್ಷಿಕ ಆದಾಯ ರೂ.6 ಲಕ್ಷದೊಳಗಿರಬೇಕು. ವೃತ್ತಿ ಪ್ರೋತ್ಸಾಹ ಯೋಜನೆಗೆ ನಗರ ಪ್ರದೇಶ ರೂ.1.30ಲಕ್ಷ ಹಾಗೂ ಗ್ರಾಮೀಣ ಪ್ರದೇಶ ರೂ.81000, ಸಾಂತ್ವಾನ ಯೋಜನೆಯಲ್ಲಿ ರೂ.8 ಲಕ್ಷದೊಳಗೆ ವಾರ್ಷಿಕ ಆದಾಯ ಇರಬೇಕು. ವಯಸ್ಸು ಕನಿಷ್ಠ 18 ರಿಂದ 55 ವರ್ಷದೊಳಗಿನವರಾಗಿರಬೇಕು. ಅರ್ಜಿದಾರರ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ,…

Read More

ಶಿವಮೊಗ್ಗ : ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಲಾಗಿರುವ ಶಿವಮೊಗ್ಗ ದಸರಾ-೨೦೨೫ ರ ಅಂಗವಾಗಿ, ಕುವೆಂಪು ರಂಗಮಂದಿರದಲ್ಲಿ ನೃತ್ಯ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಚಲನಚಿತ್ರ ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿಯಾದ ಶ್ರೀಮತಿ ರೂಪ ಅಯ್ಯರ್ ನೆರವೇರಿಸಿದರು. ಮಾತನಾಡುತ್ತಾ ನೃತ್ಯ ನಮ್ಮ ಸಂಪ್ರದಾಯದ ಒಂದುಅಂಗ, ಅದನ್ನು ಅತ್ಯಂತ ಶ್ರದ್ಧೆಮ ಭಕ್ತಿ ಕಲಿತರೇ ಅದು ಎಂದು ಕೂಡ ನಮ್ಮನ್ನು ಕೈಬಿಡುವುದಿಲ್ಲಿ, ಇಂದಿನ ಅಧುನಿಕ ಯುಗದಲ್ಲಿ ಹಲವಾರು ರೀತಿ ನೃತ್ಯ ಕಾರ್ಯಕ್ರಮಕ್ಕೆ ವೇದಿಕೆಗಳು ಸೃಷ್ಟಿಯಾಗಿವೆ. ಅದನ್ನು ಸರಿಯಾಗಿ ಬಳಸಿಕೊಂಡು ನಿಮ್ಮ ಕಲೆಯನ್ನು ಉಳಿಸಿ-ಬೆಳಸುವ ಕೆಲಸವನ್ನು ಮಾಡಬೇಕು. ಆ ನಿಟ್ಟಿನಲ್ಲಿ ಶಿವಮೊಗ್ಗ ಮಹಾನಗರಪಾಲಿಕೆ ವತಿಯಿಂದ ನಡೆಯುತ್ತಿರುವುದು ನನಗೆ ಸಂತಸ ತಂದಿದೆ. ಮುಂದಿನ ಇನ್ನು ಹೆಚ್ಚಿನ ನೃತ್ಯ ಪ್ರಕಾರಗಳು ಈ ಸ್ಫರ್ದೆಯಲ್ಲಿ ಭಾಗವಹಿಸಲಿ ಎಂದರು. ಮುಖ್ಯಅತಿಥಿಗಳಾಗಿ ಜನಪ್ರಿಯ ಶಾಸಕರಾದ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಬಲ್ಕಿಷ್ ಬಾನು, ನಿಗಮ ಮಂಡಳಿ ಅಧ್ಯಕ್ಷರಾದ ಪಲ್ಲವಿ, ಮಹಿಳಾ ದಸರಾದ ಸದಸ್ಯ ಕಾರ್ಯದರ್ಶಿಗಳಾದ ಅನುಪಮಾ,…

Read More