Author: Raghu Shetty

ಶಿವಮೊಗ್ಗ : ಕರ್ನಾಟಕ ರಾಜ್ಯ ಸಮುದಾಯ ಸಂಘಕ್ಕೆ ೫೦ ವರ್ಷಗಳು ಆದ ಹಿನ್ನೆಲೆಯಲ್ಲಿ ಶಿವಮೊಗ್ಗ ಸಮುದಾಯವು ರಾಜ್ಯಮಟ್ಟದ ಮೂರು ನಾಟಕವನ್ನು ಶಿವಮೊಗ್ಗದಲ್ಲಿ ಪ್ರದರ್ಶನ ಮಾಡುತ್ತಿದೆ ಎಂದು ಸಮುದಾಯದ ಅಧ್ಯಕ್ಷ ಡಾ.ಕೆ.ಜಿ.ವೆಂಕಟೇಶ್ ಹೇಳಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಶ್ರೀಮತಿ ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿ ವಿರುದ್ಧವಾಗಿ ೧೯೭೫ ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳು ಸಮುದಾಯ ಸಂಘವನ್ನು ಕಟ್ಟಿಕೊಂಡರು. ಹೆಗ್ಗೋಡಿನ ಪ್ರಸನ್ನ, ಕೀರಂ ನಾಗರಾಜ್, ಕೆ.ವಿ. ನಾರಾಯಣ್, ಶ್ರೀ ವೀರಣ್ಣ ಸಮುದಾಯಕ್ಕೆ ಚಾಲನೆಯನ್ನು ನೀಡಿದರು.ಸಂಸ ರ ನಾಟಕ ವಿಗಡ ವಿಕ್ರಮರಾಯ ವನ್ನು ಬಸವಲಿಂಗಯ್ಯ ನವರು ಹೊಸ ರೀತಿಯಲ್ಲಿ ಆಡಿಸಿ ಸಮುದಾಯಕ್ಕೆ ಚಾಲನೆ ಮೂಡಿಸಿದರು. ಸಮುದಾಯವು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದಲ್ಲಿ ತೊಡಗಿ ಬೀದಿ ನಾಟಕ ಮತ್ತು ವಿಚಾರ ಸಂಕಿರಣ ಜಾಥಾವನ್ನು ನಡೆಸಿ ಜನರನ್ನು ಎಚ್ಚರಿಸುವ ಕೆಲಸವನ್ನು ಮಾಡಿತು ಎಂದರು. ಶಿವಮೊಗ್ಗದಲ್ಲಿ ೧೯೭೮ ರಲ್ಲಿ ಬೆಂಗಳೂರು ಸಮುದಾಯದಿಂದ ತರಬೇತಿ ಪಡೆದ ಕೆ ಲಕ್ಷ್ಮೀನಾರಾಯಣರಾವ್ ಸಮುದಾಯ ಸಂಘವನ್ನು ಸ್ಥಾಪಿಸಿದರು. ಬ್ರೇಕ್ಟ್ ನ ಗೆಲಿಲಿಯೋ ತಾಯಿ ಎಂ.ಎಸ್. ಸತ್ಯ…

Read More

ಯು.ಆರ್.ಡಬ್ಲ್ಯೂ ಮತ್ತು ವಿ.ಆರ್.ಡಬ್ಲ್ಯೂ ಹುದ್ದೆಗೆ ಅರ್ಜಿ ಆಹ್ವಾನ ಶಿವಮೊಗ್ಗ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು ಗ್ರಾಮೀಣ ಪುನರ್ವಸತಿ ಯೋಜನೆಯಡಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಯು.ಆರ್.ಡಬ್ಲ್ಯೂ ಹಾಗೂ ಹೊಸಹಳ್ಳಿಯಲ್ಲಿ ವಿ.ಆರ್.ಡಬ್ಲ್ಯೂ, ಭದ್ರಾವತಿ ತಾಲೂಕಿನ ಗುಡುಮಘಟ್ಟ, ಹನುಮಂತಾಪುರ, ತಡಸ, ಸನ್ಯಾಸಿಕೊಡಮಗ್ಗಿ, ಸಿಮಗನಮನೆ, ಕಲ್ಲಹಳ್ಳಿ, ನಾಗತಿಬೆಳಗಲು, ತೀರ್ಥಹಳ್ಳಿ ತಾಲ್ಲೂಕಿನ ನೊಣಬೂರು, ಹೆದ್ದೂರು, ಹಣಗೆರೆ, ಮೇಲಿನ ಕುರುವಳ್ಳಿ, ಬಾಂಡ್ಯ, ಕುಕ್ಕೆ, ತ್ರಯಂಬಕಪುರ ಮತ್ತು ಕನ್ನಂಗಿ, ಶಿಕಾರಿಪುರ ತಾಲೂಕಿನ ಹೋತನಕಟ್ಟೆ, ಮುಡುಬ ಸಿದ್ದಾಪುರ, ಸಾಗರ ತಾಲೂಕಿನ ಅರಳಗೋಡು, ಯಡೆಹಳ್ಳಿ, ಆಚಾಪುರ ಹಾಗೂ ಹೊಸನಗರ ತಾಲೂಕಿನ ಮೇಲಿನ ಬೇಸಿಗೆ, ಅರಮನೆಕೊಪ್ಪ ಗ್ರಾಮ ಪಂಚಾಯ್ತಿಗಳಲ್ಲಿ ವಿ.ಆರ್.ಡಬ್ಲ್ಯೂ ಹುದ್ದೆಯು ಖಾಲಿಯಿದ್ದು, ಆಯಾ ಗ್ರಾ.ಪಂ/ಹತ್ತಿರದ ಗ್ರಾಮ ಪಂಚಾಯ್ತಿಗಳಲ್ಲಿ ವಾಸವಿರುವ 18 ರಿಂದ 45 ವಯೋಮಿತಿಯೊಳಗಿನ 10 ತರಗತಿ ಪಾಸಾಗಿರುವ ಅರ್ಹ ವಿಕಲಚೇತನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನಿಗದಿತ ಅರ್ಜಿ ನಮೂನೆಯನ್ನು ಆಯಾ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಎಂ.ಆರ್.ಡಬ್ಲ್ಯೂ ಗಳಿಂದ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲಾತಿಗಳನ್ನು ಲಗತ್ತಿಸಿ ಡಿ.05…

Read More

ಶಿವಮೊಗ್ಗ : ಜಿಲ್ಲೆ ಒಂದು ಸೂಕ್ಷ್ಮ ಮತ್ತು ಪ್ರಮುಖವಾದ ಜಿಲ್ಲೆಯಾಗಿದ್ದು ಪೊಲೀಸ್ ಕಾರ್ಯವೈಖರಿಯಿಂದ ಈ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್‌ನ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕಾರ್ಯ ಶ್ಲಾಘನೀಯ ಎಂದು ಮಹಾ ನಿರ್ದೇಶಕರು ಮತ್ತು ಕರ್ನಾಟಕ ರಾಜ್ಯ ಪೊಲೀಸ್ ಪಡೆ ಪೊಲೀಸ್ ಮಹಾ ನಿರೀಕ್ಷಕರು ಹಾಗೂ ಮುಖ್ಯಸ್ಥರು ಎಂ.ಎ ಸಲೀಂ ತಿಳಿಸಿದರು. ಅವರು ನಗರದ ಡಿ ಎ ಆರ್ ಪೊಲೀಸ್ ಸಭಾಂಗಣದ ಆವರಣದಲ್ಲಿ ಪೊಲೀಸ್ ಗೌರವ ವಂದನೆಗಳನ್ನು ಸ್ವೀಕರಿಸಿ ಅನಂತರ ಪೊಲೀಸ್ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲೆಯ ಪೋಲಿಸ್ ನಿರೀಕ್ಷಕರ ಮೇಲ್ಪಟ್ಟ ಅಧಿಕಾರಿಗಳಿಗೆ ವಿಮರ್ಶನ ಸಭೆಯಲ್ಲಿ ಮಾತನಾಡುತ್ತಾ ಜಿಲ್ಲೆಯು ಭೌಗೋಳಿಕವಾಗಿ ಮಾತ್ರವಲ್ಲದೆ ಪ್ರಕರಣಗಳ ವರದಿಯಲ್ಲೂ ಸಹ ದೊಡ್ಡ ಜಿಲ್ಲೆಯಾಗಿದ್ದು ಯಾವುದೇ ಒಂದು ಪ್ರದೇಶದಲ್ಲಿ ಜರುಗುವ ಅಪರಾಧ ಕೃತ್ಯಗಳು ಇತರೆ ಕೃತ್ಯಗಳಿಗೆ ದಾರಿ ಮಾಡಿಕೊಡುತ್ತವೆ. ಆದ್ದರಿಂದ ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಮಟ್ಟ ಹಾಕುವಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು. ಮಾದಕ ದ್ರವ್ಯದ…

Read More

ಶಿವಮೊಗ್ಗ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ ಎಂಬ ಘೋಷವಾಕ್ಯದಡಿ ನವೆಂಬರ್01ರಿಂದ 10ರವರೆಗೆ ನವುಲೆಯ ಕೃಷಿ ವಿವಿ ಆವರಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೇಳವನ್ನು ಆಯೋಜಿಸ ಲಾಗಿದೆ ಎಂದು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ಹೇಳಿದರು. ಅವರು ಕೃಷಿ ವಿವಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡಿ ಮಾತನಾಡುತ್ತಿದ್ದರು. ಈ ಮೇಳದಲ್ಲಿ, ಕೃಷಿ ಮತ್ತು ತೋಟಗಾರಿಕೆ ವಸ್ತು ಪ್ರದರ್ಶನ ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪ್ರಾತ್ಯಕ್ಷಿಕೆಗಳು, ಕೃಷಿ ಯಂತ್ರೋ ಪಕರಣಗಳ ಪ್ರದರ್ಶನ, ಕೃಷಿ ಪರಿಕರಗಳ ಉತ್ಪಾದನಾ ಘಟಕಗಳು, ವಿಜ್ಞಾನಿಗಳ-ರೈತರೊಂದಿಗೆ ಸಂವಾದ ಕಾರ್ಯಕ್ರಮಗಳು ಮತ್ತು ವಿಚಾರ ಗೋಷ್ಠಿಗಳನ್ನೂ ಸಹ ಏರ್ಪಡಿಸಲಾಗುವುದು ಎಂದವರು ತಿಳಿಸಿದರು. ಸಂಘಟಿತ ಪ್ರಯತ್ನಗಳ ಫಲವಾಗಿ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ನೀಡುವ ೨೫ಕ್ಕೂ ಹೆಚ್ಚು ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಜೊತೆಗೆ ೪೨ ಉತ್ಪಾದನಾ ತಂತ್ರಜ್ಞಾನಗಳು. ೩೧ ಸಸ್ಯ ರಕ್ಷಣಾ ತಂತ್ರಜ್ಞಾನಗಳು, ೨೫ ಕೃಷಿ ಯಾಂತ್ರೀಕರಣ, ೨೯…

Read More

ಶಿವಮೊಗ್ಗ : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾಗಬಾರದು, ಜನ ವಿರೋಧಿ ಮತ್ತು ಪರಿಸರ ವಿರೋಧಿ ಯೋಜನೆಯಾಗಿದ್ದು, ಈ ಯೋಜನೆ ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ಕೂಡಿದೆ ಎಂದು ಅಖಿಲೇಶ್ ಚಿಪ್ಪಳಿ ತಿಳಿಸಿದರು.ಅವರು ಪತ್ರಿಕಾಗೋಷ್ಠೀಯಲ್ಲಿ ಮಾತನಾಡುತ್ತಾ ಕೆಪಿಸಿಎಲ್‌ನವರು ಅ.೨೭ ಮತ್ತು ೨೮ ರಂದು ಪತ್ರಿಕಾಗೋಷ್ಠಿ ನಡೆಸಿ, ಕೆಲವು ವಿಚಾರಗಳನ್ನು ಜನರಿಗೆ ದಾರಿ ತಪ್ಪಿಸುವಂತೆ ತಪ್ಪು ಮಾಹಿತಿ ನೀಡಿದ್ದಾರೆ. ಹಾಗೂ ಶರಾವತಿ ಯೋಜನಾ ಪ್ರದೇಶದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮಾಡಲು ಹೊರಟಿರುವುದು ಸರ್ಕಾರಗಳೇ ಮಾಡಿರುವ ಅರಣ್ಯಕಾಯ್ದೆಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದರು. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಶರಾವತಿ ಸಿಂಗಳೀಕ ಅಭಯಾರಣ್ಯದ ಕೇಂದ್ರ ಭಾಗದಲ್ಲಿ ನಿರ್ಮಿಸಲು ಹೊರಟಿರುವ ಶರಾವತಿ ಪಂಪ್ ಸ್ಟೋರೇಜ್ ಯೋಜನೆಯನ್ನು ಎರಡು ಜಿಲ್ಲೆಗಳ ಜನರಲ್ಲದೇ ರಾಜ್ಯದಲ್ಲಿ ವಿರೋಧಿಸುತ್ತಿದ್ದಾರೆ. ಇದ್ದರಿಂದ ನಾಗರೀಕ ಸಮಾಜಕ್ಕೆ ಆರ್ಥಿಕ ಹೊರೆಯಾಗುವುದು,, ಪರಿಸರ ನಾಶವಾಗುವುದುಮ, ವನ್ಯಜೀವಿಗಳ ನೆಲೆ ಛಿದ್ರವಾಗಿಸುವುದು, ಶರಾವತಿ ನದಿಯನ್ನು ಕೊಲ್ಲುವ ಯೋಜನೆಯಾಗಿದೆ ಎಂದರು. ಕಾರ್ಗಲ್ ಮತ್ತು ಗೇರುಸೊಪ್ಪದಲ್ಲಿ ನಡೆದ ಸಾರ್ವಜನಿಕ…

Read More

ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾಗಿ ಹಾಗೂ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ್ ನಾಯಕ್ ರವರನ್ನು ಬೆಳಗಾವಿ ಜಿಲ್ಲೆಯ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾಗಿ ಗೌರವಾನ್ವಿತ ಉಚ್ಚ ನ್ಯಾಯಾಲಯವು ವರ್ಗಾವಣೆ ಮಾಡಿ ದಿನಾಂಕ 30.10.2025 ರಂದು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿ ಆದೇಶಿಸಿದೆ. ಶ್ರೀ ಮಂಜುನಾಥ್ ನಾಯಕ್ ರವರು 2023ರ ಜೂನ್ ತಿಂಗಳಿನಲ್ಲಿ ಬೆಂಗಳೂರಿನ ಗೌರವಾನ್ವಿತ ಉಚ್ಛ ನ್ಯಾಯಾಲಯದಲ್ಲಿ ನೇಮಕಾತಿ ನಿಭಂಧಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡು ಶಿವಮೊಗ್ಗದಲ್ಲಿ ಪದಗ್ರಹಣ ಮಾಡಿಕೊಂಡಿದ್ದರು. ಗೌರವಾನ್ವಿತ ನ್ಯಾಯಾಧೀಶರು ದಿನಾಂಕ 03.11.2025 ರಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರ ಪದದಿಂದ ಮುಕ್ತಗೊಂಡು ದಿನಾಂಕ 05.11.2025 ರಂದು ಬೆಳಗಾವಿಗೆ ತೆರಳಿ ಅಲ್ಲಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರ ಪದಗ್ರಹಣವನ್ನು ಮಾಡಲಿದ್ದಾರೆ. ಗೌರವಾನ್ವಿತ ನ್ಯಾಯಾಧೀಶರು ತಮ್ಮ ಸೇವಾ ಅವಧಿಯಲ್ಲಿ ಒಟ್ಟು 10 ರಾಷ್ಟ್ರೀಯ ಲೋಕ ಅದಾಲತ್ಗಳನ್ನು ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಆಯೋಜಿಸಿ ಶಿವಮೊಗ್ಗ ಜಿಲ್ಲೆಯ ನ್ಯಾಯಾಲಯಗಳಲ್ಲಿ…

Read More

ಶಿವಮೊಗ್ಗ, : ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಪಾಲಿಟಿ ಹಾಸ್ಪಿಟಲ್‌ನ ವೈದ್ಯರು ಕೈಫೋಸಿಸ್ (ಬೆನ್ನುಮೂಳೆ ಮುಂದಕ್ಕೆ ಬಾಗಿರುವ ಸಂಕೀರ್ಣ ಸಮಸ್ಯೆ) ಸಮಸ್ಯೆ ಹೊಂದಿದ್ದ ೬೬ ವರ್ಷದ ಪುರುಷ ರೋಗಿಗೆ ಅತ್ಯಂತ ಸಂಕೀರ್ಣ ಕೊರೋನರಿ ಆರ್ಟರಿ ಬೈಪಾಸ್ ಗ್ರಾಫ್ಟ್ (ಸಿಎಬಿಜಿ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿ ಯಾಗಿ ನಡೆಸಲಾಯಿತು ಎಂದು ಕಾರ್ಡಿಯೊ ಥೊರಾಸಿಕ್ ಸರ್ಜನ್ ಡಾ. ಬಾಲಸುಬ್ರಮಣಿ ಆರ್.ತಿಳಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಬೆನ್ನುಮೂಳೆ ಮುಂದಕ್ಕೆ ಬಾಗಿ ವಕ್ರವಾಗಿರುವುದರಿಂದ ಹೃದಯ ಶಸ್ತ್ರಚಿಕಿತ್ಸೆ ಮಾಡುವ ಸಮಯದಲ್ಲಿ ಚಿಕಿತ್ಸಾ ಪ್ರಕ್ರಿಯೆ ಕಷ್ಟಕರವಾಗುತ್ತದೆ. ನಾನು ಮತ್ತು ನನ್ನ ವೈದ್ಯಕೀಯ ತಂಡವು ಸುಮಾರು ಆರು ಗಂಟೆಗಳ ಕಾಲ ಈ ಅಪರೂಪದ ಮತ್ತು ಸವಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ ಎಂದರು. ರೋಗಿಯು ಗಂಭೀರ ತ್ರಿವಳಿ ನಾಳ ಸಮಸ್ಯೆದಿಂದ ಬಳಲುತ್ತಿದ್ದರು. ಜೊತೆಗೆ ಹೈಪರ್‌ಟೆನ್ನನ್ ಇತಿಹಾಸವೂ ಇತ್ತು. ಆಸ್ಥಿರ ಆಂಜಿನಾ ಮತ್ತು ಉಸಿರಾಟದ ತೊಂದರೆಗಳನ್ನೂ ಹೊಂದಿದ್ದ ಅವರ ಹೃದಯದ ಕಾರ್ಯ ದಕ್ಷತೆ ಕಡಿಮೆಯಾಗಿದ್ದು, ಡಯಾಸ್ಟೋಲಿಕ್ ಡಿಸ್ ಫಂಕ್ಷನ್ ಸಮಸ್ಯೆ ಕಂಡುಬಂದಿತ್ತು. ಶಸ್ತ್ರಚಿಕಿತ್ಸೆ ಮಾಡುವುದು ಅವಶ್ಯವಾಗಿತ್ತು ಎಂದರು. ಇಂತಹ ಪ್ರಕರಣಗಗಳು…

Read More

ಶಿವಮೊಗ್ಗ : ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವರಾದ ಎಸ್. ಮಧುಬಂಗಾರಪ್ಪನವರ ಅದೇಶದ ಮೇರೆಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಕ್ಕೆ ಪೂರ್ಣ ಪ್ರಮಾಣದ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಓಬಿಸಿ ಜಿಲ್ಲಾಧ್ಯಕ್ಷ ಎಂ.ರಮೇಶ್ ಶಂಕರಘಟ್ಟ ತಿಳಿಸಿದ್ದಾರೆ. ಅವರು ಇಂದು ಶಿವಮೊಗ್ಗದ ಪ್ರೆಸ್ಟ್ ಟ್ರಸ್ಟ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ೮ ಉಪಾಧ್ಯಕ್ಷರು, ೧೫ ಪ್ರಧಾನಕಾರ್ಯ ದರ್ಶಿಗಳು, ೧೧ ಜನ ಸಂಘಟನಾ ಕಾರ್ಯದರ್ಶಿಗಳು, ವಿವಿಧ ತಾಲ್ಲೂಕುಗಳಿಗೆ ಬ್ಲಾಕ್ ಅಧ್ಯಕ್ಷರುಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಪಕ್ಷದಿಂದ ದೂರ ಸರಿದಿರುವ ಸಣ್ಣ ಸಣ್ಣ ಸಮುದಾಯದ ಜನರನ್ನು ಪಕ್ಷದ ತೆಕ್ಕೆಗೆ ತರುವುದರ ಮೂಲಕ ಜಿಲ್ಲೆಯಲ್ಲಿ ಪಕ್ಷವನ್ನು ಅತ್ಯಂತ ಸದೃಢವಾಗಿ ಕಟ್ಟುವ ಸಂಕಲ್ಪವನ್ನು ತೊಟ್ಟಿರುವುದಾಗಿ ತಿಳಿಸಿದ ಅವರು ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪನವರು ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ವಿಭಾಗವನ್ನು ಗಟ್ಟಿಯಾಗಿ ಕಟ್ಟಲು ಹಲವಾರು ಸಲಹೆ ಸೂಚನೆಗಳನು ಕೊಟ್ಟಿದ್ದು ಅದರಂತೆ ಜಿಲ್ಲಾ ಶಾಸಕರುಗಳು, ಪಕ್ಷದ…

Read More

ಶಿವಮೊಗ್ಗ : ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಾಖಾ ಮಠದ ೩೫ ನೇ ವಾರ್ಷಿಕೋತ್ಸವ ಸಮಾ ರಂಭವನ್ನು ಅತ್ಯಂತ ವಿಭಿನ್ನ, ವಿಶೇಷವಾಗಿ ಆಚರಿಸಲಾಗುವುದಿಲ್ಲ ಎಂದು ಮಂಜುನಾಥ್ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಮೊದಲ ಬಾರಿಗೆ ದಾಸವರೇಣ್ಯ ಪುರಂದದಾಸರ ಕೀರ್ತನೋತ್ಸವ ಸಮಾರಂಭವನ್ನು ಮಾಜಿ ಸಚಿವ ಆರಗಜ್ಞಾನೇಂದ್ರ ಅವರ ಹುಟ್ಟೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ನ ೪ ರ ಬೆಳಗ್ಗೆ ೧೦ರಿಂದ ತೀರ್ಥಹಳ್ಳಿ ತಾಲ್ಲೂಕಿನ ಆರಗದಲ್ಲಿರುವ ಸಹಕಾರ ಸಂಘ ಸಭಾ ಭವನದಲ್ಲಿ ದಾಸವರೇಣ್ಯ ಪುರಂದರದಾಸರ ಕೀರ್ತನೋತ್ಸವ ಕಾರ್ಯಕ್ರಮ ನಡೆಯಲಿದ್ದು, ದಿವ್ಯ ಸಾನಿಧ್ಯ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ೭೨ನೇ ಜಗದ್ಗುರು ನಿರ್ಮಲಾ ನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಹಾಗೂ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಜರುಗಲಿದ್ದು, ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿ ಸಲಿದ್ದಾರೆ. ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನ.೫ರ ಬೆಳಗ್ಗೆ ೧೦ ಗಂಟೆಗೆ ಮಠದ ೩೫ ನೇ ವಾರ್ಷಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಕೃಷಿ ವಿಜ್ಞಾನ…

Read More

ಶಿವಮೊಗ್ಗ : ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವು ಪ್ರತಿಯೊಂದು ಹಂತದಲ್ಲೂ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗಾಯಿತ್ರಿ ಮಲ್ಲಪ್ಪ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಗ್ಯಾರಂಟಿ ಎಂಬ ಉಚಿತ ಸೇವೆ ಒದಗಿಸುವ ಹೆಸರಿನಲ್ಲಿ ಸರ್ಕಾರಕ್ಕೆ ಬರುವ ಅದಾಯವನ್ನು ಕಡಿಮೆ ಮಾಡಿಕೊಂಡು, ರಾಜ್ಯದಲ್ಲಿ ನಡೆಯಬೇ ಕಾದ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದೆ ದಿವಾಳಿಯಾಗಿದೆ ಎಂದರು. ರಾಜ್ಯ ಮತ್ತು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಅದರಲ್ಲು ಮಹಿಳೆಯರಿಗಂತು ಈ ಸರ್ಕಾರದಿಂದ ಯಾವುದೇ ಭದ್ರತೆ ಇಲ್ಲದಂತಾಗಿದೆ ಎಂದರು. ಈ ಸರ್ಕಾರದ ಕಮಿಷನ್ ದಂಧೆಗೆ ಸುಮಾ ರು ೨೦ ಅಧಿಕಾರಿಗಳ ಅಸಹಜ ಸಾವು ಕಂಡಿದ್ದಾರೆ. ೭ ಅಧಿಕಾರಿ ಆತ್ಮಹತ್ಯೆಗೆ ಬಲಿಯಾಗಿದ್ದಾರೆ, ೧೫ಕ್ಕೂ ಹೆಚ್ಚು ಗುತ್ತಿಗೆದಾರರು ಆತ್ಮಹತ್ಯೆ ಮಾಡಿ ಕೊಂಡಿದ್ದು, ಹಲವರು ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆಂದು ಹೇಳಲಾ ಗುತ್ತಿದೆ ಎಂದರು. ರಾಜ್ಯದಲ್ಲಿ ೬೮ ಮಹಿಳೆಯರ ಕೊಲೆ ಪ್ರಕರಣ ನಡೆದಿದೆ. ೧೪೦೦ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. ೭೫೦ ಕ್ಕೂ ಹೆಚ್ಚು…

Read More