Author: Raghu Shetty

ಶಿವಮೊಗ್ಗ ನಗರ ಸ್ಥಳೀಯ ಆಡಳಿತದ ವೈಫಲ್ಯ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷತನದಿಂದ ಶಿವಮೊಗ್ಗ ದಿನದಿಂದ ದಿನಕ್ಕೆ ಸಮಸ್ಯೆಗಳ ಆಗರವಾಗುತ್ತಿದೆ. ಜನ ಪ್ರತಿನಧಿಗಳಿಲ್ಲದ ಮಹಾನಗರ ಪಾಲಿಕೆ, ಅಧಿಕಾರಿಗಳ ದುರಾಡಳಿತದಿಂದ ನಗರಾಡವಿತ ಸಂಪೂರ್ಣ ಸ್ಥಗಿತಗೊಂಡಿದೆ. ಸಾರ್ವಜನಿಕ ಉಪಯೋಗಕ್ಕಾಗಿ ಸರ್ಕಾರಿ ಹಣದಿಂದ ಕಟ್ಟದ ಹಲವು ವಾಣಿಜ್ಯ ಸಂಕಿರ್ಣಗಳು ನಿರ್ಮಾಣಗೊಂಡು ಹಲವು ವರ್ಷಗಳೇ ಕಳೆದರು ಅವುಗಳನ್ನು ಫಲಾನುಭವಿಗಳಿಗೆ ವಿತರಿಸದೆ, ಬಾಡಿಗೆ ರೂಪದಲ್ಲಿ ಪಾಲಿಕೆಗೆ ಬರಬುಹುದಾಗಿದ್ದ ಕೋಟ್ಯಾಂತರ ರೂಪಾಯಿ ಬಾಡಿಗೆ ಹಣ ವ್ಯರ್ಥವಾಗಿರುದಲ್ಲದೆ ಕಟ್ಟಡಗಳು ತಿಥಿಲಾವಸ್ತೆಗೆ ತಲುಪುತ್ತಿವೆ ಎಂದು ಜಿ. ಪಂ ಮಾಜಿ ಸದಸ್ಯರಾದ ಕಾಂತೇಶ್ ತಿಳಿಸಿದರು. 1) ಶಿವಪ್ಪ ನಾಯಕ ಹೂವಿನ ಮಾರುಕಟ್ಟೆ ವಾಣಿಜ್ಯ ಸಂಕಿರ್ಣ 119 ಮಳಿಗೆಗಳು ಪಾಲಿಕೆಗೆ ಹಸ್ತಾಂತರಗೊಂಡು 2 ವರ್ಷಗಳಾಗಿವೆ. ತಿಂಗಳಿಗೆ ಬಾಡಿಗೆ ಅಂದಾಜು 5,000-00. 2 ವರ್ಷಗಳ ಬಾಡಿಗೆ ಮೊತ್ತ 1,41,60,000-00 23 ತಿಂಗಳ ಬಾಡಿಗೆ ಮುಂಗಡ ಪಾವತಿ ಮೊತ್ತ 135,70,000-00 2) ಗಾರ್ಡನ್ ಏರಿಯಾ ವಾಣಿಜ್ಯ ಸಂಕಿರ್ಣ(ಗೌರವ್ ಲಾಡ್ಜ್ ಎದುರು) 98 ಮಳಿಗೆಗಳು ಪಾಲಿಕೆಗೆ ಹಸ್ತಾಂತರಗೊಂಡು 5 ವರ್ಷಗಳಾಗಿವೆ.…

Read More

ಸಿನಿಮಾ ಅಂದರೇ ಚಾಲೆಜಿಂಗ್ ಸ್ಟಾರ್ ದರ್ಶನ್ ಡೆವಿಲ್ ಮುಗಿಲು ಮುಟ್ಟಿದ ಸಂಭ್ರಮಾಚರಣೆ ಶಿವಮೊಗ್ಗ : ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಇಂದು ಬಿಡುಗಡೆಯಾಗಿದ್ದು ಅಭಿಮಾನಿಗಳು ಚಲನಚಿತ್ರ ಮಂದಿರದಲ್ಲಿ ಅಭಿಮಾನ ಮೆರೆದಿದ್ದಾರೆ. ಸಿನಿಮಾ ಎರಡು ವರ್ಷದ ನಂತರ ಬಿಡುಗಡೆಯಾಗುತ್ತಿದ್ದು ಡೆವಿಲ್ ಟ್ರೈಲರ್ ರಾಜ್ಯದಲ್ಲಿ ಉತ್ತಮವಾದ ಜನಮನ್ನಣೆ ಪಡೆದಿತ್ತು. ಟ್ರೈಲರ್ ಎರಡೇ ದಿನಗಳಲ್ಲಿ 11 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. ಎರಡು ವರ್ಷಗಳ ನಂತರ ದರ್ಶನ್ ಅವರನ್ನ ತೆರೆಮೇಲೆ ನೋದಿದ ಅಭಿಮಾನಿ ಹರ್ಷ ಮುಗಿಲು ಮುಟ್ಟಿತ್ತು. ಈ ಸಿನಿಮಾವನ್ನ ಡಿ.25 ರಂದು ರಿಲೀಸ್ ಆಗುತ್ತಿರುವ ಸುದೀಪ್ ನಟನೆಯ ಮಾರ್ಕ್ ಸಿನಿಮಾದ ಜೊತೆ ವೀವ್ಸ್ ಲೆಕ್ಕಾಚಾರದಲ್ಲಿ ತುಲನೆ ಮಾಡಲಾಗಿತ್ತು. ಇಬ್ಬರು ನಟರ ಫ್ಯಾನ್ಸ್ ಕ್ರೇಜ್ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಇದೆ. ನಗರದಲ್ಲಿ ಎರಡು ಚಲನ ಚಿತ್ರಮಂದಿರ ಮತ್ತು ಒಂದು ಮಾಲ್‌ನಲ್ಲಿ ಇಂದು ಬಿಡುಗಡೆಯಾಗಿದೆ. ವರ್ಷಾಗಳ ನಂತರ ಚಿತ್ರ ಮಂದಿರ ಭರ್ತಿಯಾಗಿರುವುದು ಸಿನಿಮಾ ದವರಿಗೂ, ಮಾಲೀಕರಿಗೂ, ಅಭಿಮಾನಿ ಗಳಿಗೂ ಸಂತಸ ತಂದಿದೆ, ಚಿತ್ರ ಮಂದಿರ ಭರ್ತಿ…

Read More

  : ಸಂದೀಪ್ ಎನ್.ವಿ. ತೀರ್ಥಹಳ್ಳಿ ತೀರ್ಥಹಳ್ಳಿ ಪಟ್ಟಣ ಪಂಚಾಯತಿಯ ಪ್ರಭಾರ ಅಧ್ಯಕ್ಷರಾಗಿ ಶ್ರೀಮತಿ ಗೀತಾ ರಮೇಶ್ ಅಧಿಕಾರ ಸ್ವೀಕರಿಸಿದರು. ಒಪ್ಪಂದ ಮೇರೆಗೆ ಅಧಿಕಾರ ಬಿಟ್ಟುಕೊಡದ ರಹಮತ್ ಉಲ್ಲಾ ಅಜಾದಿರವರ ದೋರಣೆ ವಿರುದ್ಧ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ಮಂಡನೆ ಅವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ಹೇಳಿದರು. ಕೂಡ ನ್ಯಾಯಾಲಯ ಮೆಟ್ಟಿಲು ಏರಿದ್ದರು. ಆದರೇ ನ್ಯಾಯಾಲಯದಲ್ಲಿ ಒಪ್ಪಂದ ಪ್ರಕಾರ ನಿಮ್ಮ ಅಧಿಕಾರ ಮುಗಿದಿದ್ದು. ಅದನ್ನು ಬೇರೆಯವರೆಗೆ ಹಸ್ತಾಂತರಿಸುವಂತೆ ಸೂಚಿಸಿದ್ದ ಮೇರೆಗೆ ಇಂದು ನೂತನ ಅದ್ಯಕ್ಷರಾಗಿ ಶ್ರೀಮತಿ ಗೀತಾ ರಮೇಶ್ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಕೆಳಕೆರೆ ಪೂರ್ಣೇಶ್, ಪ.ಪಂ. ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ಬಿ.ಗಣಪತಿ, ವಿಲಿಯಮ್ ಮಾರ್ಟೀಸ್ , ಯುವ ಮುಖಂಡ ಕೇಳೂರು ಮಿತ್ರ, ಅಮರನಾಥ ಶೆಟ್ಟಿ , ವರಲಕ್ಷ್ಮಿ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.

Read More

ಶಿವಮೊಗ್ಗ : ನಗರ ಪ್ರದೇಶಗಳು ಬೆಳೆದಂತೆ, ಪ್ರತಿಯೊಂದು ವಸ್ತುಗಳಿಗೂ ಬೆಲೆ ಬಂದಿ ಬಿಡುತ್ತದೆ. ಉಚಿತ ಸಿಗುವ ವಸ್ತುಗಳು ಕೂಡ ಒಮ್ಮೆಮ್ಮೆ ಚಿನ್ನದ ಬೆಲೆ ಬಂದು ಜನರಿಗೆ ಅಕ್ರಮ ದಾರಿ ತೋರಿಸಿಕೊಡುತ್ತದೆ. ಆದರೆ. ಅದಕ್ಕೆಲ್ಲ ಅಧಿಕಾರಿಗಳು ಮಾತ್ರ ತಮ್ಮ ಕರ್ತವ್ಯ ನಿಷ್ಠೆ ತೋರಿದಾಗ ಮಾತ್ರ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯ. ಆದರೆ, ಏನೂ ಗೊತ್ತಿಲ್ಲ ನಮ್ಮ ತೆರಿಗೆ ಹಣದಿಂದ ಲಕ್ಷಾಂತರ ಸಂಬಳ ಪಡೆಯುತ್ತಿರುವ ಅಧಿಕಾರಿಗಳು ಮಾತ್ರ ಯಾವುದೇ ಅಕ್ರಮಗಳಿಗೆ ನಮಗೂ ಸಂಬಂಧಿವಿಲ್ಲದಂತೆ ಹಾರಿಕೆ ಉತ್ತರ ಹೇಳುತ್ತ ಜಾರಿಕೊಳ್ಳುತ್ತ ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲದಂತೆ ನಟಿಸುವುದು ಕರಗತ ಮಾಡಿಕೊಂಡು ಬಿಟ್ಟುತ್ತಾರೆ. ಲೋಕಲ್ ಭಾಷೆಯಲ್ಲಿ ಹೇಳ ಬೇಕೆಂದರೇ, ಮೈಗೆ ಎಣ್ಣೇ ಹಚ್ಚಿಕೊಂಡು ಇರುತ್ತಾರೆ. ಎಂದರೇ ಸಾರ್ವಜನಿಕರ ದಾರಿ ತಪ್ಪಿಸಿ, ಅಕ್ರಮ ದಂಧೆ ಕೋರರ ಪರವಾಗಿ ಇವರ ಕೆಲವು ಮೌಖಿಕ ಕಾನೂನುಗಳನ್ನು ಸೃಷ್ಟಿ ಮಾಡಿಕೊಂಡಿರುತ್ತಾರೆ. ಆ ಮಟ್ಟಿಗೆ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದಿದೆ. ಅದರಲ್ಲೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಂತಹ ಅವರು ಸಂಬಳಕ್ಕೆ…

Read More

ಶಿವಮೊಗ್ಗ : ಡಿ.07ರಿಂದ ಜ.05ರವರೆಗೆ ಸೀತಾ ಕಲ್ಯಾಣ ಶತಮಾನೋತ್ಸವ ಹಾಗೂ ಕೋಟಿತ್ರಯ ರಾಮಾನಾಮಾರ್ಚನ ಮಹೋತ್ಸವವನ್ನು ನಗರದ ಕೋಟೇ ಸೀತಾ ರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಿ.07ರ ಬೆಳಿಗ್ಗೆ ಮಹಾ ಸಂಕಲ್ಪ ಹಾಗೂ ನವಗ್ರಹ ಪೂಜೆಯ ಮೂಲಕ ಚಾಲನೆ ನೀಡಲಾಗುತ್ತಿದೆ. ಡಿ. 08ರಿಂದ 17ರವರೆಗೆ ಶ್ರೀ ಭಾಗವತ ಮಹಾ ಪುರಾಣ ಹೋಮ ನಡೆಯಲಿದ್ದು, ನಂತರ ಹೆಚ್. ಆರ್. ಶ್ರೀಧರ್‌ರವರಿಂದ ಪ್ರತಿನಿತ್ಯ ಸಂಜೆ 06.30ಕ್ಕೆ ಭಾಗವತ ಸಪ್ತಾಹ ಉಪನ್ಯಾಸ ನಡೆಯಲಿದೆ. ಡಿ.15ರಿಂದ 17ರವರೆಗೆ ಕಲ್ಲಾಪುರದ ಪವಮಾನ ಆಚಾರ್ ರವರಿಂದ ವಿಷ್ಣುವಿನ ದಶಾವತಾರ ಕುರಿತು ಉಪನ್ಯಾಸ ಹಾಗೂ ದಶಾವತಾರ ಉತ್ಸವ ನಡೆಯಲಿದೆ. ಡಿ. 18ಕ್ಕೆ ಸಪ್ತ ಚಿರಂಜೀವಿಗಳ ಪೂಜೆ ಹೋಮ ನಡೆಯಲಿದ್ದು, ಸಂಜೆ ಮತ್ತೂರು ಸನತ್‌ಕುಮಾರ್, ಅಚ್ಯುತ ಅವಧಾನಿಯವರಿಂದ ಸೀತಾ ಕಲ್ಯಾಣ ಗಮಕ ವಾಚನ ವ್ಯಾಖ್ಯಾನ, ಡಿ. 19ಕ್ಕೆ ಎಳ್ಳು ಅಮಾವಾಸ್ಯೆ ಭಾಗವಾಗಿ ಶಕ್ತಿದೇವತೆಗಳ ಸಮಾವೇಶ, ಡಿ.20ಕ್ಕೆ ಮಾರುತಿ ಹೋಮ, ಸಂಜೆ ಉಸ್ತಾದ್ ಹುಮಾಯೂನ್ ಹರ್ಲಾಪುರ, ನೌಷಾದ್ ಹರ್ಲಾಪುರ, ನಿಷದ್ ಹರ್ಲಾಪುರರವರಿಂದ…

Read More

ಬೆಂಗಳೂರು : ಬೆಳಗಾವಿ ಅಧಿವೇಶದಲ್ಲಿ ಸರ್ಕಾರ ಸಮರ್ಥವಾಗಿ ವಿಪಕ್ಷಗಳನ್ನು ಎದುರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿವೇಶನ ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಹ್ವಾನದ ಮೇರೆಗೆ ಬೆಳಗಿನ ಉಪಹಾರಕ್ಕಾಗಿ ಅವರ ನಿವಾಸಕ್ಕೆ ಭೇಟಿ ನೀಡಿದೆ. ಕಾಂಗ್ರೆಸ್ ಪಕ್ಷದ ವಿಚಾರಗಳನ್ನು ಈ ಭೇಟಿಯಲ್ಲಿ ಚರ್ಚಿಸಲಾಗಿದೆ. ಡಿಸೆಂಬರ್ 8 ರಂದು ಬೆಳಗಾವಿ ಅಧಿವೇಶನ ಪ್ರಾರಂಭವಾಗಲಿದ್ದು, ವಿಪಕ್ಷಗಳನ್ನು ಎದುರಿಸಲು ಸರ್ಕಾರದ ರಣನೀತಿಗಳ ಬಗ್ಗೆ ಇಂದು ಚರ್ಚಿಸಲಾಗಿದೆ. ವಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿದ್ದಾರೆ ಎಂಬ ಮಾಹಿತಿ ಪತ್ರಿಕೆಗಳಿಂದ ತಿಳಿದು ಬಂದಿದೆ.ಅಲ್ಲದೇ ವಿಪಕ್ಷಗಳು ಕೇಳಬಹುದಾದ ಪ್ರಶ್ನೆಗಳನ್ನು ಸಮರ್ಥವಾಗಿ ಸರ್ಕಾರ ಎದುರಿಸಲಿದೆ. ಕಬ್ಬು, ಮೆಕ್ಕೆಜೋಳದ ಸಮಸ್ಯೆ ಸೇರಿದಂತೆ ರಾಜ್ಯದ ಸಮಸ್ಯೆಗಳಿಗೆ ಸಮರ್ಪಕ ಪರಿಹಾರಗಳನ್ನು ಕಂಡುಕೊಳ್ಳಲು ಈ ಅಧಿವೇಶನದಲ್ಲಿ ಪ್ರಯತ್ನಿಸಲಾಗುವುದು ಎಂದರು. ಕಬ್ಬು ಮತ್ತು ಮೆಕ್ಕೆ ಜೋಳ ಖರೀದಿ ನಮ್ಮ ಸರ್ಕಾರ ರೈತಪರ ನಿಲುವನ್ನು ಹೊಂದಿದೆ. ಕಬ್ಬು ಬೆಲೆ ನಿಗದಿಗೆ ಸಂಬಂಧಿಸಿದಂತೆ ಸರ್ಕಾರ ರೈತರು, ರೈತ…

Read More

ಮಡಿಕೇರಿ: ಎಸ್ಟೇಟ್ ಹೌಸ್‌ನಿಂದ ಕಾಣೆಯಾಗಿದ್ದ ಎರಡು ವರ್ಷದ ಬಾಲಕಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸಾಕು ನಾಯಿಯ ಸಹಾಯದಿಂದ ಪತ್ತೆ ಹಚ್ಚಿ ಮತ್ತೆ ಆಕೆಯ ಪೋಷಕರ ಮಡಿಲಿಗೆ ಹಾಕಿದ್ದಾರೆ. ದಕ್ಷಿಣ ಕೊಡಗಿನ ಬಿ ಶೆಟ್ಟಿಗೇರಿ ಗ್ರಾಮದ ಅರಣ್ಯದ ಅಂಚಿನಲ್ಲಿರುವ ಕೊಂಗಣ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಜೇನು ಸಾಕಣೆ ಕುಟುಂಬದಿಂದ ಬಂದ ಎಸ್ಟೇಟ್ ಕಾರ್ಮಿಕರಾದ ಸುನಿಲ್ ಮತ್ತು ನಾಗಿಣಿ ಐದು ದಿನಗಳ ಹಿಂದೆ ಬಿ ಶೆಟ್ಟಿಗೇರಿಯ ಖಾಸಗಿ ಎಸ್ಟೇಟ್‌ನಲ್ಲಿ ಕೆಲಸ ಮಾಡಲು ಬಂದಿದ್ದರು. ದಂಪತಿಗೆ ಎರಡು ವರ್ಷದ ಸುನನ್ಯಾ ಎಂಬ ಮಗಳಿದ್ದಾಳೆ. ಮೂಲಗಳ ಪ್ರಕಾರ, ದಂಪತಿಗಳು ಕೆಲಸಕ್ಕೆ ಹೋದಾಗ ಮಗುವನ್ನು ಎಸ್ಟೇಟ್ ಲೈನ್ ಮನೆಯ ಬಳಿ ಎಸ್ಟೇಟ್ ಕಾರ್ಮಿಕರ ಇತರ ಮಕ್ಕಳೊಂದಿಗೆ ಬಿಟ್ಟು ಹೋಗಿದ್ದರು. ಶನಿವಾರ ನಾಗಿಣಿ ಮತ್ತು ಸುನಿಲ್ ಎಸ್ಟೇಟ್ ಕೆಲಸಕ್ಕೆ ಹೋದಾಗ ಸುನನ್ಯಾ ಅವರನ್ನು ಇತರ ಮಕ್ಕಳೊಂದಿಗೆ ಆಟವಾಡಲು ಬಿಡಲಾಗಿತ್ತು. ಆದಾಗ್ಯೂ, ದಂಪತಿಗಳು ಕೆಲಸದಿಂದ ಹಿಂತಿರುಗಿದಾಗ, ಸುನನ್ಯಾ ಕಾಣೆಯಾಗಿದ್ದಳು. ಸುನನ್ಯಾ ಜೊತೆಗಿದ್ದ ಇತರ ಮಕ್ಕಳಿಗೂ ಆಕೆ ಎಲ್ಲಿಗೆ ಹೋದಳೆಂದು…

Read More

ತಮಿಳುನಾಡಿನಲ್ಲಿ ನಕಲಿ ತುಪ್ಪ ತಯಾರಿಕಾ ಘಟಕವನ್ನು ಸ್ಥಾಪಿಸಿ ರಾಜ್ಯಾದ್ಯಂತ ನಕಲಿ ಉತ್ಪನ್ನಗಳನ್ನು ವಿತರಿಸುತ್ತಿದ್ದ ಪ್ರಮುಖ ಸೂತ್ರಧಾರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಶಿವಕುಮಾರ್ ಮತ್ತು ಆತನ ಪತ್ನಿ ರಮ್ಯಾ ಎಂದು ಗುರುತಿಸಲಾಗಿದೆ. ಸಿಸಿಬಿ ಪೊಲೀಸರ ತನಿಖೆ ವೇಳೆ ಈ ದಂಪತಿಯೇ ನಕಲಿ ನಂದಿನಿ ಉತ್ಪನ್ನಗಳ ತಯಾರಿಕೆ ಘಟಕದ ಕಿಂಗ್‌ಪಿನ್‌ಗಳು ಎಂಬುದು ದೃಢಪಟ್ಟಿದೆ. ಸಿಸಿಬಿ ಡಿಸಿಪಿ ಶ್ರೀಹರಿಬಾಬು ಅವರು ನೀಡಿರುವ ಮಾಹಿತಿ ಪ್ರಕಾರ, ಆರೋಪಿ ದಂಪತಿಗಳು ನೆರೆಯ ತಮಿಳುನಾಡಿನಲ್ಲಿ ನಕಲಿ ತುಪ್ಪ ತಯಾರಿಕೆ ಘಟಕವನ್ನು ಸ್ಥಾಪಿಸಿದ್ದರು. ಈ ಘಟಕದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ, ನಕಲಿ ತುಪ್ಪ ತಯಾರಿಸಲು ಬಳಸುತ್ತಿದ್ದ ದೊಡ್ಡ ದೊಡ್ಡ ಹೈಟೆಕ್ ಮೆಷಿನರಿಗಳು ಮತ್ತು ಅತ್ಯಾಧುನಿಕ ಯಂತ್ರಗಳು ಪತ್ತೆಯಾಗಿವೆ. ಈ ಯಂತ್ರಗಳನ್ನು ಬಳಸಿಕೊಂಡು ದಂಪತಿಗಳು ನಂದಿನಿ ಲೇಬಲ್‌ನ ನಕಲಿ ತುಪ್ಪಗಳನ್ನು ತಯಾರಿಸಿ, ರೀ-ಪ್ಯಾಕಿಂಗ್ ಮಾಡಿ ಮಾರಾಟ ಮಾಡುತ್ತಿದ್ದರು. ದಾಳಿ ವೇಳೆ ಪೊಲೀಸರು ಮೆಷಿನರಿಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಬೃಹತ್ ಕಲಬೆರಕೆ ತುಪ್ಪ ಜಾಲ ಭೇದಿಸಿದ ಸಿಸಿಬಿ; 1.26 ಕೋಟಿ…

Read More

ಮುಖ್ಯಮಂತ್ರಿ ಬದಲಾವಣೆ ವಿಷಯವನ್ನು ಸಾರ್ವಜನಿಕವಾಗಿ ಚರ್ಚಿಸಲು ನಾನು ಬಯಸುವುದಿಲ್ಲ. ಏಕೆಂದರೆ ಇದು ಪಕ್ಷದಲ್ಲಿ ನಾಲ್ಕರಿಂದ ಐದು ಜನರ ನಡುವೆ ನಡೆದ “ರಹಸ್ಯ ಒಪ್ಪಂದ”ವಾಗಿದೆ. ನಾನು ಆತ್ಮಸಾಕ್ಷಿಯನ್ನು ನಂಬುತ್ತೇನೆ ಎಂದಿದ್ದಾರೆ. ರಾಜ್ಯ ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಫೈಟ್​​ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದ ತಂತ್ರ ಒಂದುಕಡೆಯಾದರೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಬಣದ ಪ್ರತಿತಂತ್ರ ರೂಪಿಸುತ್ತಿದೆ. ಈ ಮಧ್ಯೆ ಡಿ.ಕೆ. ಶಿವಕುಮಾರ್​ ಅವರು ಮಂಗಳವಾರ ಸ್ಫೋಟಕ ಹೇಳಿಕೆ ನೀಡಿದ್ದು, ನನ್ನನ್ನು ಮುಖ್ಯಮಂತ್ರಿ ಮಾಡಿ ಅಂತಾ ನಾನು ಕೇಳಿಯೇ ಇಲ್ಲ ಎಂದಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಮುಖ್ಯಮಂತ್ರಿ ಬದಲಾವಣೆ ವಿಷಯವನ್ನು ಸಾರ್ವಜನಿಕವಾಗಿ ಚರ್ಚಿಸಲು ನಾನು ಬಯಸುವುದಿಲ್ಲ. ಏಕೆಂದರೆ ಇದು ಪಕ್ಷದಲ್ಲಿ ನಾಲ್ಕರಿಂದ ಐದು ಜನರ ನಡುವೆ ನಡೆದ “ರಹಸ್ಯ ಒಪ್ಪಂದ”ವಾಗಿದೆ. ನಾನು ಆತ್ಮಸಾಕ್ಷಿಯನ್ನು ನಂಬುತ್ತೇನೆ ಎಂದಿದ್ದಾರೆ. ನಾನು ಪಕ್ಷಕ್ಕೆ ಯಾವುದೇ ಮುಜುಗರವನ್ನುಂಟುಮಾಡಲು ಮತ್ತು ಪಕ್ಷವನ್ನು ದುರ್ಬಲಗೊಳಿಸಲು ಬಯಸುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿಕೆ…

Read More

ಬೆಳ್ಳಂಬೆಳಗ್ಗೆ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ ಈ ಎಲ್ಲ ಅಧಿಕಾರಿಗಳಿಗೆ ಸಂಬಂಧಿಸಿದೆ ಎನ್ನಲಾದ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಸದ್ಯ ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಬೆಳ್ಳಂಬೆಳ್ಳಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ರಾಜ್ಯದ 10 ಕಡೆಗಳಲ್ಲಿ ಏಕಕಾಲದಲ್ಲಿ ಹಲವು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು, ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು (ಎಲೆಕ್ಟ್ರಾನಿಕ್ ಸಿಟಿ) – RTO ಸೂಪರಿಂಟೆಂಡೆಂಟ್ ಕುಮಾರಸ್ವಾಮಿ ಮಂಡ್ಯ – ನಗರ ಪಾಲಿಕೆ CAO ಪುಟ್ಟಸ್ವಾಮಿ ಬೀದರ್ – ಕೃಷ್ಣಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಪ್ರೇಮ್ ಸಿಂಗ್ ಮೈಸೂರು – ಹೂಟಗಳ್ಳಿ ನಗರ ಪಾಲಿಕೆ ರೆವಿನ್ಯೂ ಇನ್ಸ್​ಪೆಕ್ಟರ್ ರಾಮಸ್ವಾಮಿ ಸಿ ಧಾರವಾಡ – ಕರ್ನಾಟಕ ವಿವಿಯ ಸಹ ಪ್ರಾಧ್ಯಾಪಕ ಸುಭಾಶ್ ಚಂದ್ರ ಧಾರವಾಡ – ಪ್ರಾ.ಪಶು ಕ್ಲಿನಿಕ್ ಹುಲಿಗೋಲ್ ಹಿರಿಯ ಪರೀಕ್ಷಕ ಸತೀಶ್ ಶಿವಮೊಗ್ಗ…

Read More