ಭದ್ರಾವತಿ ಉಜ್ಜನಿಪುರ ಗ್ರಾಮದ ವಾಸಿ ಪರಿಶಿಷ್ಟ ಜಾತಿಗೆ ಸೇರಿದ 33 ವರ್ಷ ವಯಸ್ಸಿನ ಮಹಿಳೆಯು ಬೇರೆ ಜಾತಿಯ ವ್ಯಕ್ತಿಯೊಂದಿಗೆ ಪ್ರೇಮ ವಿವಾಹವಾಗಿದ್ದು, ದಿನಾಂಕ: 06-02-2020 ರಂದು ಗುರೋಜಿ ರಾವ್ ಮತ್ತು ಆಶಾ ರವರು ಸದರಿ ಮಹಿಳೆಯೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ಧಗಳಿಂದ ಬೈದು ಜಾತಿ ನಿಂದನೆ ಮಾಡಿ, ಕೈಯಿಂದ ಮುಖಕ್ಕೆ ಹೊಡೆದು, ಬ್ಲೇಡಿನಿಂದ ಗೀರಿ ಹಲ್ಲೆ ಮಾಡಿದ್ದು, ಆಕೆಯ ಪತಿಗೆ ಮರದ ರಿಪೀಸ್ ನಿಂದ ಹಣೆಗೆ ಹೊಡೆದು ಹಲ್ಲೆ ಮಾಡಿ ಗಾಯ ಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆ ಗುನ್ನೆ ನಂ: 017/2020 ಕಲಂ 323, 324, 504 ಸಹಿತ 34 ಐಪಿಸಿ ಮತ್ತು ಎಸ್.ಸಿ ಮತ್ತು ಎಸ್.ಟಿ ಪಿ.ಎ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಶ್ರೀ ಸುಧಾಕರ್ ನಾಯ್ಕ್ ಡಿ.ವೈ.ಎಸ್.ಪಿ ಭದ್ರಾವತಿ ಉಪ ವಿಭಾಗ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ದಿನಾಂಕ: 23-09-2025 ರಂದು ಗುರೋಜಿ ರಾವ್, 48 ವರ್ಷ, ವಾಸ ಉಜ್ಜನಿಪುರ ತೋಟದ ಮನೆ, ಭದ್ರಾವತಿ ಈತನಿಗೆ ಕಲಂ 3(1) (ಆರ್) (ಡಿ), 3(1) (ಎಸ್), ಎಸ್.ಸಿ ಮತ್ತು ಎಸ್.ಟಿ ಪಿ.ಎ ಕಾಯ್ದೆಗೆ 4 ವರ್ಷ ಕಠಿಣ ಸಜೆ ಮತ್ತು 20,000 ರೂ ದಂಡ ತಪ್ಪಿದ್ದಲ್ಲಿ 2 ತಿಂಗಳು ಸಾದಾ ಸೆರೆವಾಸ, ಕಲಂ 3(2)(ವಿಎ) ಎಸ್.ಸಿ ಮತ್ತು ಎಸ್.ಟಿ ಪಿ.ಎ ಕಾಯ್ದೆಗೆ 2 ವರ್ಷಗಳ ಕಠಿಣ ಸೆರೆವಾಸ ಮತ್ತು 10,000/- ರೂ ದಂಡವನ್ನು ತಪ್ಪಿದ್ದಲ್ಲಿ 1 ತಿಂಗಳು ಸಾದಾ ಸೆರೆವಾಸವನ್ನು, ಕಲಂ 504 ಐಪಿಸಿ ಕಾಯ್ದೆಗೆ 10,000/- ರೂ ದಂಡ, ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸೆರೆವಾಸ, ಕಲಂ 324 ಐಪಿಸಿ ಕಾಯ್ದೆಗೆ 20,000/- ರೂ ದಂಡ ತಪ್ಪಿದ್ದಲ್ಲಿ 2 ತಿಂಗಳ ಸಾದಾ ಸೆರೆವಾಸ, ಕಲಂ 323 ಐಪಿಸಿ ಕಾಯ್ದೆಗೆ 1000/- ರೂ ದಂಡವನ್ನು ತಪ್ಪಿದ್ದಲ್ಲಿ 4 ದಿನಗಳ ಸಾದಾ ಸೆರೆವಾಸ ಮತ್ತು ಆಶಾ, 35 ವರ್ಷ, ವಾಸ ಉಜ್ಜನಿಪುರ ತೋಟದ ಮನೆ, ಭದ್ರಾವತಿ ಶಿವಮೊಗ್ಗ ಈಕೆಗೆ ಕಲಂ 323 ಐಪಿಸಿ ಕಾಯ್ದೆಗೆ, 1000 ರೂ ದಂಡವನ್ನು, ತಪ್ಪಿದ್ದಲ್ಲಿ 4 ದಿನ ಸಾದಾ ಕಾರಾವಾಸ ಶಿಕ್ಷೆಯನ್ನು ವಿಧಿಸಿ ಆದೇಶಿಸಿರುತ್ತದೆ.
ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯ ಗುನ್ನೆ ಸಂಖ್ಯೆ 0545/2025 ಕಲಂ 331(3), 305, ಬಿ.ಎನ್.ಎಸ್ ರಲ್ಲಿ ದಿನಾಂಕ 17/9/2025 ರಂದು ಗೊಪಾಲ ಗೌಡ ಬಡಾವಣೆ ಸಿ ಬ್ಲಾಕ್ , ನಲ್ಲಿ ಹಗಲು ಸಮಯದಲ್ಲಿ ಮನೆಗಳ್ಳತನ ನಡೆದಿದ್ದು ಈ ಪ್ರಕರಣಕ್ಕೆ ಸಂಬಂದಿಸಿದಂತೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರೀ ಎ ಜಿ ಕಾರಿಯಪ್ಪ ಮತ್ತು ಶ್ರೀ ರಮೇಶ ಕುಮಾರ್ ಹಾಗೂ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬಾಬು ಆಂಜನಪ್ಪ ರವರ ಮಾರ್ಗದರ್ಶನದಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಪಿ.ಐ ಶ್ರೀ ಕೆ ಟಿ ಗುರುರಾಜ್, ಹಾಗೂ ಸಿಬ್ಬಂದಿಯವರಾದ ಹೆಚ್ ಸಿ ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ್, ಸಿಪಿಸಿ ಗಳಾದ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ರಂಗನಾಥ್, ಹರೀಶ್ ಎಮ್.ಜಿ, ಮಪಿಸಿಗಳಾದ ಶ್ರೀಮತಿ ಅನುಷಾ ಮತ್ತು ಕು। ಚೈತ್ರಾ ರವರಗಳು ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿವರಾದ ಹೆಚ್.ಸಿ ಇಂದ್ರೇಶ, ಗುರು, ಮತ್ತು ವಿಜಯ ಹಾಗೂ ಚಾಲಕರಾದ ಎ.ಹೆಚ್.ಸಿ ಪುನೀತ್ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ಪ್ರಕರಣದ ಆರೋಪಿತನಾದ ಅಶ್ರಫ್ ವುಲ್ಲಾ, 35 ವರ್ಷ ,ಆಟೋ ಚಾಲಕ ವಾಸ ವಿಶ್ವೇಶ್ವರನಗರ, ಗೋಪಾಳ ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ 1) 22,74,500/- ರೂ ನಗದು ಹಣ, 2) 130 ಗ್ರಾಂ ಬಂಗಾರದ ಆಭರಣ ಮೌಲ್ಯ 11,70,000/- ಮತ್ತು 3) 550 ಗ್ರಾಂ ಬೆಳ್ಳಿಯ ಆಭರಣಗ ಮೌಲ್ಯ 65,000/- ಸೇರಿ ಒಟ್ಟು 12,35,000/- ರೂ ನ ಬಂಗಾರ & ಬೆಳ್ಳಿಯ ಆಭರಣಗಳು ಹಾಗು 22,74,000/- ನಗದು ಹಣವನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಹಾಲಿ ಆರೋಪಿ ನ್ಯಾಯಾಂಗ ಬಂದನಕ್ಕೆ ನೀಡಲಾಗಿರುತ್ತದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
