ಶಿವಮೊಗ್ಗ : ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವರಾದ ಎಸ್. ಮಧುಬಂಗಾರಪ್ಪನವರ ಅದೇಶದ ಮೇರೆಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಕ್ಕೆ ಪೂರ್ಣ ಪ್ರಮಾಣದ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಓಬಿಸಿ ಜಿಲ್ಲಾಧ್ಯಕ್ಷ ಎಂ.ರಮೇಶ್ ಶಂಕರಘಟ್ಟ ತಿಳಿಸಿದ್ದಾರೆ.
ಅವರು ಇಂದು ಶಿವಮೊಗ್ಗದ ಪ್ರೆಸ್ಟ್ ಟ್ರಸ್ಟ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ೮ ಉಪಾಧ್ಯಕ್ಷರು, ೧೫ ಪ್ರಧಾನಕಾರ್ಯ ದರ್ಶಿಗಳು, ೧೧ ಜನ ಸಂಘಟನಾ ಕಾರ್ಯದರ್ಶಿಗಳು, ವಿವಿಧ ತಾಲ್ಲೂಕುಗಳಿಗೆ ಬ್ಲಾಕ್ ಅಧ್ಯಕ್ಷರುಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಪಕ್ಷದಿಂದ ದೂರ ಸರಿದಿರುವ ಸಣ್ಣ ಸಣ್ಣ ಸಮುದಾಯದ ಜನರನ್ನು ಪಕ್ಷದ ತೆಕ್ಕೆಗೆ ತರುವುದರ ಮೂಲಕ ಜಿಲ್ಲೆಯಲ್ಲಿ ಪಕ್ಷವನ್ನು ಅತ್ಯಂತ ಸದೃಢವಾಗಿ ಕಟ್ಟುವ ಸಂಕಲ್ಪವನ್ನು ತೊಟ್ಟಿರುವುದಾಗಿ ತಿಳಿಸಿದ ಅವರು ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪನವರು ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ವಿಭಾಗವನ್ನು ಗಟ್ಟಿಯಾಗಿ ಕಟ್ಟಲು ಹಲವಾರು ಸಲಹೆ ಸೂಚನೆಗಳನು ಕೊಟ್ಟಿದ್ದು ಅದರಂತೆ ಜಿಲ್ಲಾ ಶಾಸಕರುಗಳು, ಪಕ್ಷದ ಮುಖಂಡರುಗಳು, ಕಾರ್ಯಕರ್ತರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ನಿಷ್ಠೆಯಿಂದ ಕೆಲಸ ನಿರ್ವಹಿಸುತ್ತೇನೆ ಎಂದರು.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಕ್ಕೆ ಮಾನ್ಯ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷರು ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವರಾದ ಎಸ್ ಮಧುಬಂಗಾಪ್ಪ ಆದೇಶದ ಮೇರೆಗೆ ಈ ಕೆಳಕಂಡಂತೆ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ಹಾಗೂ ಬ್ಲಾಕ್ ಗಳಿಗೆ ಅಧ್ಯಕ್ಷರುಗಳನ್ನು ನೇಮಿಸಲಾಗಿದೆ.
ಉಪಾಧ್ಯಕ್ಷರುಗಳು:
ಹೆಚ್. ಪಾಲಾಕ್ಷಿ(ಶಿವಮೊಗ್ಗ), ಆರ್. ಉಮೇಶ್(ಶಿವಮೊಗ್ಗ ಗ್ರಾಮಾಂತರ), ಎಸ್.ಬಿ.ಆಶೋಕ್ ಕುಮಾರ್(ಶಿವಮೊಗ್ಗ), ಡಿ.ಕೆ.ಮುದ್ದಪ್ಪ(ಶಿಕಾರಿಪುರ), ಕೆ.ಚೈತ್ರ ಮೋಹನ್(ಶಿವಮೊಗ್ಗ ಗ್ರಾಮಾಂತರ), ಟಿ.ದಿನೇಶ್ (ಭದ್ರಾವತಿ), ರಮೇಶ್ ಮರಸ(ಸಾಗರ), ಶ್ರೀನಿವಾಸ್ (ತೀರ್ಥಹಳ್ಳಿ).
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು:
ಆರ್. ರಾಘವೇಂದ್ರ(ತೀರ್ಥಹಳ್ಳಿ), ಆರ್.ಕುಮಾರ್ (ಶಿವಮೊಗ್ಗ), ಶ್ರೀಧರ(ಸಾಗರ), ಹೆಚ್.ಎನ್.ಅರ್ಚ (ಶಿವಮೊಗ್ಗ), ಎಸ್.ಎಚ್. ಮಂಜುನಾಥ ಕವುಲಿ(ಶಿರಾಳ ಕೊಪ್ಪ), ನಾಗರಾಜ್(ತೀರ್ಥಹಳ್ಳಿ), ಎಂ.ಡಿ.ರವಿಕುಮಾ ರ್(ಶಿವಮೊಗ್ಗ), ಪುನೀತ್(ಕುಂಸಿ), ರಾಘವೇಂದ್ರ ಪೂಜಾರಿ (ತೀರ್ಥಹಳ್ಳಿ), ಆರ್. ಚಂದ್ರಶೇಖರ್(ಶಿವಮೊಗ್ಗ),ವೈ ಎಚ್ ಸುರೇಶ್(ಶಿಕಾರಿಪುರ), ಬಿ.ಗಂಗಾಧರ(ಭದ್ರಾವತಿ), ಪ್ರಶಾಂತ್(ಶಿವಮೊಗ್ಗ ಗ್ರಾಮಾಂತರ), ವಿಜಯಕುಮಾರ್ (ಶಿವಮೊಗ್ಗ), ಎಂ. ಸಿದ್ದರಾಮು(ಕಾರ್ಯದರ್ಶಿ-ಶಿವಮೊಗ್ಗ).
ಸಂಘಟನಾ ಕಾರ್ಯದರ್ಶಿಗಳು :
ಎಸ್.ಬಸವರಾಜ್(ಶಿವಮೊಗ್ಗ), ಟಿ.ಡಿ.ಶಶಿಕುಮಾರ್ (ಭದ್ರಾವತಿ), ಆರ್.ಆರ್. ಮಂಜುನಾಥ್(ಶಿವಮೊಗ್ಗ), ರಾಜೇಶ್ ಮೊಗವೀರ(ತೀರ್ಥಹಳ್ಳಿ), ಸುರೇಶ್ ಕವುಲಿ(ಶಿಕಾರಿಪುರ), ಬಾವನಿರಾವ್ ಗಡದೆ,(ಶಿವಮೊಗ್ಗ ಗ್ರಾಮಾಂತರ), ಜಯದೇವಪ್ಪ ಎಂ.ಎಸ್.(ಶಿವಮೊಗ್ಗ), ಎಂ.ಸುನೀತ(ಶಿವಮೊಗ್ಗ), ಕೆ.ಮಾಲತೇಶ್(ಶಿವಮೊಗ್ಗ), ಆರ್. ಹಾಲೇಶ್(ಶಿವಮೊಗ್ಗ), ಷಣ್ಮುಖಪ್ಪ ಹರಗಿ(ಶಿಕಾರಿಪುರ)
ವಿವಿಧ ತಾಲ್ಲೂಕುಗಳ ಬ್ಲಾಕ್ ಅಧ್ಯಕ್ಷರುಗಳು :
ಎಸ್.ಕೆ.ಭಾಸ್ಕರ್(ಶಿವಮೊಗ್ಗ ನಾರ್ತ್ ಬ್ಲಾಕ್), ಪಿ.ಮೋಹನ್(ಶಿವಮೊಗ್ಗ ನಾರ್ತ್ ಬ್ಲಾಕ್), ಬಿ.ಕೆ. ಉದಯಕುಮಾರ್(ತೀರ್ಥಹಳ್ಳಿ ನಗರ), ಲೋಕೆಶ್ ಜಿ.(ತೀರ್ಥಹಳ್ಳಿ ಗ್ರಾಮಾಂತರ), ನಾಗರಾಜ್ ಬನ್ನೂರು(ಶಿಕಾರಿಪುರ), ಶ್ರೀ ಚಂದ್ರಪ್ಪ ಹೆಚ್(ಶಿರಾಳಕೊಪ್ಪ), ರಂಗನಾಥ ಬಾಳೆಗುಂಡಿ(ಸಾಗರ-ಗ್ರಾಮಾಂತರ), ಗಣಪತಿ ಮಂಡಗಳಲೆ(ಸಾಗರ ನಗರ), ಕೆ.ಶ್ರೀನಿವಾ (ಹೊಳಿಹೊ ನ್ನೂರು ಬ್ಲಾಕ್), ಹೆಚ್.ಆರ್. ಮಂಜುನಾಥ್(ಕುಂಸಿ ಬ್ಲಾಕ್), ಆರ್ ಮಂಜುನಾಥ್(ಆನವಟ್ಟಿ ಬ್ಲಾಕ್), ಎನ್.ಟಿ.ನಾಗರಾಜ್ (ಸೊರಬ), ಬಿ.ಆರ್. ಜಯಶೀಲ(ಭದ್ರಾವತಿ ನಗರ),
ಕಾಂಗ್ರೆಸ್ ಹಿಂದುಳಿದ ವರ್ಗಗಗಳ ವಿಭಾಗದ ಜಿಲ್ಲಾ ಸಲಹಾ ಸಮಿತಿ
ಚಂದ್ರಭೂಪಾಲ್, ಅಧ್ಯಕ್ಷರು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ, ಶಿವಮೊಗ್ಗ, ಕಲಗೋಡು ರತ್ನಾಕರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು, ಶಿವಮೊಗ್ಗ, ಎನ್. ರಮೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು. ಶಿವಮೊಗ್ಗ. ಎಸ್.ಕೆ.ಮರಿಯಪ್ಪ, ಕಾಂಗ್ರೆಸ್ ಮುಖಂಡರು, ಉಪಾಧ್ಯಕ್ಷರು, ಡಿಸಿಸಿ ಬ್ಯಾಂಕ್ ಶಿವಮೊಗ್ಗ ಎಂ.ಶ್ರೀಕಾಂತ್, ಕಾಂಗ್ರೆಸ್ ಮುಖಂಡರು, ನಿರ್ದೇಶಕರು, ಡಿಸಿಸಿ ಬ್ಯಾಂಕ್, ಶಿವಮೊಗ್ಗ, ನಗರದ ಮಹಾದೇವಪ್ಪ, ಕಾಂಗ್ರೆಸ್ ಮುಖಂಡರು, ಶಿಕಾರಿಪುರ, ಸತ್ಯನಾರಾಯಣ್, ಮಾಜಿ ನಗರಸಭಾ ಅಧ್ಯಕ್ಷರು, ಶಿವಮೊಗ್ಗ, ಎಸ್.ಪಿ.ಶೇಷಾದ್ರಿ, ಕಾಂಗ್ರೆಸ್ ಮುಖಂಡರು, ಶಿವಮೊಗ್ಗ.,ಗಣಪತಿ ಹೆಚ್, ಕಾಂಗ್ರೆಸ್ ಮುಖಂಡರು, ಸೊರಬ, ನಾಗರಾಜ್ ಕಂಕಾರಿ, ಮಾಜಿ ಮಹಾಪೌರರು, ಶಿವಮೊಗ್ಗ, .ಡಾ.ಟಿ.ಎಲ್.ಸುಂದರೇಶ್, ಮಾಜಿ ಜಿ.ಪಂ.ಸದಸ್ಯರು, ತೀರ್ಥಹಳ್ಳಿ, ಕೆ. ರಂಗನಾಥ್, ಕಾಂಗ್ರೆಸ್ ಮುಖಂಡರು, ಶಿವಮೊಗ್ಗ.
ಖಾಯಂ ಆಹ್ವಾನಿತರು: ರಮೇಶ್ ಇಕ್ಕೇರಿ, ರಾಜ್ಯ ಓಬಿಸಿ ಉಪಾಧ್ಯಕ್ಷರು,ಕೇಶವ ಮೂರ್ತಿ ಹೆಚ್.ಬಿ. ರಾಜ್ಯ ಓಬಿಸಿ ಉಪಾಧ್ಯಕ್ಷರು,ಜೆ. ಜಯಪ್ಪ, ರಾಜ್ಯ ಓಬಿಸಿ ಉಪಾಧ್ಯಕ್ಷರು, ಪಿ.ವಿ. ವಿಶ್ವನಾಥ್ ಕಾಶಿ, ರಾಜ್ಯ ಓಬಿಸಿ ಪ್ರಧಾನ ಕಾರ್ಯದರ್ಶಿ,ಜಿ.ಡಿ. ಮಂಜುನಾಥ, ರಾಜ್ಯ ಓಬಿಸಿ ಸಂಯೋಜಕರು, ದಶರಥಗಿರಿ ಬಾಬಾಳ್ಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ವೇದಾವತಿ ಸೀತರಾಮು, ರಾಜ್ಯ ಓಬಿಸಿ ಪ್ರಧಾನ ಕಾರ್ಯದರ್ಶಿ ನೇಮಕ ಮಾಡಲಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಒಬಿಸಿ ರಾಜ್ಯ ಸಂಯೋಜಕರು, ಜಿ.ಡಿ ಮಂಜುನಾಥ್, ಕಾಂಗ್ರೆಸ್ ಮುಖಂಡರುಗಳಾದ ಅಶೋಕ್ ಕುಮಾರ್, ಭಾಸ್ಕರ್, ಮೋಹನ್, ರಾಘವೇಂದ್ರ, ಎಂ ಸಿದ್ದರಾಮ್, ಟಿ.ಡಿ. ಶಶಿಕುಮಾರ್, ಹೆ ಚ್ ಆರ್ ಮಂಜುನಾಥ್,ಷಣ್ಮುಖಪ್ಪ ಜಯಶೀಲ, ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
