ಶಿವಮೊಗ್ಗ : ಕಾರಿನ ಮೇಲೆ ಕಾಡುಕೋಣವೊಂದು ಹಾರಿ ಕಾರು ಜಖಂಗೊಂಡಿರುವ ಘಟನೆ ತೀರ್ಥಹಳ್ಳಿ ತಾಲೂಕಿನ
ಹೆಗ್ಗೋಡು ಬಳಿ ನಡೆದಿದ್ದು ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರಾಗಿದ್ದಾರೆ.
ರಸ್ತೆಯಲ್ಲಿ ಕಾಡುಕೋಣದ ಹಿಂಡು ಸಂಚರಿಸುವಾಗ ಕಾರೊಂದು ಅಡ್ಡ ಬಂದ ಪರಿಣಾಮ ಕಾರಿನ ಮೇಲೆ ಕಾಡುಕೋಣ ಹಾರಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಹರಿಹರಪುರದಿಂದ ಕಮ್ಮರಡಿ ಮಾರ್ಗವಾಗಿ ತೀರ್ಥಹಳ್ಳಿಗೆ ಬರುತ್ತಿದ್ದ ಕಾರಿಗೆ ಅಡ್ಡ ಬಂದ ಕಾಡುಕೋಣದ ಹಿಂಡಿನಲ್ಲಿ ಒಂದು ಕಾಡುಕೋಣ ಕಾರಿನ ಮೇಲೆ ಹಾರಿದ ಪರಿಣಾಮ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಕಾರಿನಲ್ಲಿದ್ದವರಿಗೆ ಯಾವುದೇ ತೊಂದರೆ ಆಗಿಲ್ಲ. ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ.
Subscribe to Updates
Get the latest creative news from FooBar about art, design and business.
ಕಾರಿನ ಮೇಲೆ ಹಾರಿದ ಕಾಡುಕೋಣ…
A wildebeest jumped on a car...
