ಕೇದಾರ ಶ್ರೀಗಳಿಗೆ ಶಿವಮೊಗ್ಗದಲ್ಲಿ ಅದ್ಧೂರಿ ಸ್ವಾಗತ
ಶಿವಮೊಗ್ಗ : ಮಲೆನಾಡು ಜಿಲ್ಲೆ ಶಿವಮೊಗ್ಗಕ್ಕೆ ಕೇದಾರ ಶ್ರೀಗಳಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಶಿವಮೊಗ್ಗ ನಗರದಲ್ಲಿ ಆಯೋಜಿಸಿರುವ ಇಷ್ಠಲಿಂಗ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕಾಗಮಿಸಿದ ಉತ್ತರಾಖಂಡದ ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿಗಳಿಗೆ ಭಕ್ತರು ಅದ್ದೂರಿ ಸ್ವಾಗತ ಕೋರಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಶ್ರೀಗಳ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಶಿವಶಕ್ತಿ ಸಮಾಜ, ಜಿಲ್ಲಾ ವೀರಶೈವ ಜಂಗಮ ಅಚರ್ಕರು ಹಾಗೂ ಪುರೋಹಿತರ ಕ್ಷೇಮಾಭಿವೃದ್ದಿ ಸಂಘದ ಪ್ರಮುಖರು ಸೇರಿದಂತೆ ವೀರಶೈವ ಸಮಾಜ ಬಾಂಧವರು ಉಪಸ್ಥಿತರಿದ್ದರು. ಈ ವೇಳೆ ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾ ತಂಡಗಳು, ವಿವಿಧ ವೇಷಭೂಷಣ ತೊಟ್ಟ ಕಲಾವಿದರು ಗಮನ ಸೆಳೆದರು.
ಅದರಂತೆ ನಗರದ ಘಂಟಾಕರಣ ಸಭಾಭವನದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಲಾಯಿತು. ಉತ್ತರಾಖಂಡದ ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು. ಈ ವೇಳೆ, ಶಿವಶಕ್ತಿ ಸಮಾಜ ಸಮಿತಿ ಅಧ್ಯಕ್ಷೆ ಹೆಚ್. ಪಾರ್ವತಮ್ಮ ಹಾಗೂ ಸದಸ್ಯರು ಹಾಗೂ ಕುಟುಂಬಸ್ಥರು, ಶ್ರೀಗಳಿಗೆ ಗೌರವಿಸಿದರು.
