ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದ ಕಾಡಂಚಿನಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿವೆ.
ಪುರದಾಳು ಗ್ರಾಮ ಸಮೀಪದ ನರಸೀಪುರ ಕಾಡಿನಲ್ಲಿ ಕಾಡಾನೆಗಳ ಹಿಂಡು ಪ್ರತ್ಯೇಕ್ಷವಾಗಿವೆ. ನರಸೀಪುರದ ಕೆರೆಯಲ್ಲಿ ಮೂರು ಕಾಡಾನೆಗಳು ನೀರು ಕುಡಿಯುವ ದೃಶ್ಯವನ್ನು ಸ್ಥಳೀಯರು ಸೆರೆಹಿಡಿದಿದ್ದಾರೆ.
ಪುರದಾಳು ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಕಾಡಾನೆಗಳು ರೈತರ ಅಡಿಕೆ-ಬಾಳೆ ತೋಟ, ಭತ್ತದ ಗದ್ದೆಗಳನ್ನು ನಾಶ ಮಾಡಿದ್ದವು. ಈಗ ಮತ್ತೆ ಕಾಡಾನೆಗಳು ಪ್ರತ್ಯೇಕ್ಷವಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.