ಶಿವಮೊಗ್ಗ : ಸಂಭ್ರಮಾಚರಣೆಗೆ ಬರುವ ಅತಿಥಿಗಳ ಸುರಕ್ಷತೆ ಹಾಗೂ ಅವರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಸುರಕ್ಷಿತ ವಾತಾವರಣ ಸೃಷ್ಟಿ ಮಾಡಿ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.
ಅವರು ಜಿಲ್ಲಾ ಪೊಲೀಸ್ ವತಿಯಿಂದ ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯ ಹೋಟೆಲ್, ಲಾಡ್ಜ್, ರೆಸಾರ್ಟ್, ಹೋಂ ಸ್ಟೇ ಹಾಗೂ ಹೊಸ ವರ್ಷ ಆಚರಣೆಯ ಕಾರ್ಯಕ್ರಮ ಆಯೋಜಕರುಗಳ ಸಭೆಯಲ್ಲಿ ಪಾಳ್ಗೊಂಡು ಮುಂಜಾಗ್ರತ ಕ್ರಮ ಬಗ್ಗೆ ವಿವರಿಸಿದರು.
ಕುಟುಂಬದವರು ಮತ್ತು ಮಕ್ಕಳು ವಯಸ್ಸಾದವರು ಎಲ್ಲಾ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಕಿರಿಕಿರಿ ಹಾಗೂ ತೊಂದರೆಯಾಗದಂತೆ ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದರು.
ಮದ್ಯಪಾನ ಮಾಡಿ ವಾಹನಗಳನ್ನು ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸುವ ಸಾದ್ಯತೆ ಹೆಚ್ಚಿರುತ್ತದೆ, ಆದ್ದರಿಂದ ಯಾರೂ ಕುಡಿದು ವಾಹನ ಚಾಲನೆ ಮಾಡದಂತೆ ನೋಡಿಕೊಳ್ಳಿ, ಮತ್ತು ಅಗತ್ಯ ಸಂದರ್ಭಗಳಲ್ಲಿ 112 ತುರ್ತು ಸಹಾಯವಾಣಿಗೆ ಕರೆ ಮಾಡುವಂತೆ ಸೂಚಿಸಿದರು.
ಅಥಿತಿಗಳ ಬಗ್ಗೆ ಮುಂಚಿತವಾಗಿಯೇ ಮಾಹಿತಿಯನ್ನು ಕಲೆ ಹಾಕಿ ಹಾಗೆಯೇ, ಹಾಜರಾಗುವ ಸಂಖ್ಯೆಗೆ ಅನುಗುಣವಾಗಿ ಎಲ್ಲಾ ರೀತಿಯ ಅಗತ್ಯ ತಯಾರಿಯನ್ನು ಮಾಡಿಕೊಳ್ಳಿ. ನೀವು ತೆಗೆದುಕೊಂಡ ಎಲ್ಲಾ ಮುಂಜಾಗೃತ ಕ್ರಮಗಳ ಮಾಹಿತಿಯನ್ನು ನಿಮ್ಮ ವ್ಯಾಪ್ತಿಯ ಠಾಣೆಗೆ ನೀಡಿರಿ. ಸುರಕ್ಷಿತವೆನಿಸುವ ಸಂಖ್ಯೆಯ ಸಾರ್ವಜನಿಕರಿಗೆ ಮಾತ್ರ ಅನುಮತಿಸಿರಿ ಎಂದರು.
ಮಹಿಳೆಯರು ಹಾಗೂ ಮಕ್ಕಳ ಸುರಕ್ಷೆತೆಗೆ ಮೊದಲ ಆದ್ಯತೆ ನೀಡಿರಿ ಮತ್ತು ಅಗತ್ಯ ಸಂದರ್ಭಗಳಲ್ಲಿ 112 ತುರ್ತು ಸಹಾಯವಾಣಿಗೆ ಕರೆ ಮಾಡಿರಿ. ಹಾಗೆಯೇ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಅಥಿತಿಗಳ ಐಡಿ ಪ್ರೂಫ್ ಗಳನ್ನು ಪಡೆದುಕೊಳ್ಳುರಿ. ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ಸಿಸಿ ಕ್ಯಾಮೆರಗಳನ್ನು ಅಳವಡಿಸಿಕೊಳ್ಳಿ ಎಂದರು.
ಮಾದಕ ವಸ್ತುಗಳ ಉಪಯೋಗ ಯಾವುದೇ ಕಾರಣಕ್ಕೂ ಮಾಡತಕ್ಕದ್ದಲ್ಲ. ಹಾಗೂ ಒಂದು ವೇಳೆ ಮಾದಕ ವಸ್ತುಗಳ ಬಳಕೆ ಕಂಡು ಬಂದಲ್ಲಿ ಅಂತಹವರ ವಿರುದ್ಧ ಓಆPS ಕಾಯ್ದೆ ರೀತ್ಯಾ ಕ್ರಮ ಜರುಗಿಸಲಾಗುವುದು. ಹಾಗೂ ಮದ್ಯಪಾನ ಮಾಡಿರುವವರಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡದೆ ತಮ್ಮಿಂದಲೇ ವಾಹನ ವ್ಯವಸ್ಥೆ ಮಾಡುವುದು ಸೂಕ್ತ ಎಂದು ತಿಳಿಸಿದರು.
ಪಟಾಕಿಗಳನ್ನು ಬಳಕೆ ಮಾಡುವಾಗ ಎಲ್ಲಾ ರೀತಿಯ ಸುರಕ್ಷಿತ ಕ್ರಮಗಳನ್ನು ಅನುಸರಿಸಿರಿ. ಮತ್ತು ಸೂಕ್ತ ರೀತಿಯ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತವಿರುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಬೆಳಕಿನ ವ್ಯವಸ್ಥೆ ಇರುವುದು ಮುಖ್ಯ ಎಂದರು.
ಸಂಚಾರ ವ್ಯವಸ್ಥೆಗೆ ಯಾವುದೇ ದಕ್ಕೆಯಾಗದ ರೀತಿ ಪಾರ್ಕಿಂಗ್ ವ್ಯವಸ್ಥೆ ಮಾಡಿರಿ. ನೀವು ಪೊಲೀಸ್ ಇಲಾಖೆ ಜೊತೆಗೆ ಕೈ ಜೋಡಿಸಿ ಯಾವುದೇ ರೀತಿಯ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಿರಿ. 31ನೇ ತಾರೀಕು 12 ಗಂಟೆಗೆ ಶುರು ಮಾಡುವ ಸಂಭ್ರಮಾಚರu ಯನ್ನು 01 ಗಂಟೆಯ ವೇಳೆಗೆ ಮುಗಿಸಿರಿ ಎಂದರು.
ಸ್ವಿಮ್ಮೀಂಗ್ ಪೂಲ್ ಗಳು ಇದ್ದಲ್ಲಿ ಹೆಚ್ಚಿನ ಸುರಕ್ಷತೆ ಮುಖ್ಯ ಹಾಗೆಯೇ ದ್ವನಿ ವರ್ದಕ ಬಳಕೆಗೆ ಸಂಬಂಧಿಸಿದಂತೆ ಘನ ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶನದಂತೆ ಬಳಕೆ ಮಾಡಿರಿ. ಫೈರ್ ಕ್ಯಾಂಪ್ ನಡೆಯುವಾಗ ಯಾವುದೇ ಅಗ್ನಿ ಅವಗಡ ಆಗದ ರೀತಿ ಕ್ರಮ ಕೈಗೊಳ್ಳಿ ಎಂದರು.
ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಜಿ ಕಾರ್ಯಪ್ಪ, ರಮೇಶ್ ಕುಮಾರ್ ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ನಿರೀಕ್ಷಕರು ಇದ್ದರು.
