ಶಿವಮೊಗ್ಗ : ದೇಶ್ ನೀಟ್ ಅಕಾಡೆಮಿಯು ೨೦೨೫ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ದಾಖಲಾತಿ ಪಡೆದ ಅಕಾಡೆಮಿಯ ೧೨೦ ವಿದ್ಯಾರ್ಥಿಗಳಲ್ಲಿ ೬೯ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರಕ್ಕೆ ಆಯ್ಕೆಯಾಗಿ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದಾರೆ ಎಂದು ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಎ.ಆರ್. ತಿಳಿಸಿದರು.
2025ರಲ್ಲಿ ಶಿವಮೊಗ್ಗದ ಗಂಧರ್ವ ನಗರದಲ್ಲಿ ಆರಂಭವಾದ ದೇಶ್ ನೀಟ್ ಅಕಾಡೆಮಿ ನೀಟ್ ಪರೀಕ್ಷೆಯ ಮೊದಲ ಬ್ಯಾಚ್‌ನಲ್ಲಿ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶಿವಮೊಗ್ಗದ ಮೊದಲ ವಸತಿಯುತ ಕೋಚಿಂಗ್ ಸೆಂಟರ್ ಆದ ದೇಶ್ ನೀಟ್ ಅಕಾಡೆಮಿಯು ಚೊಚ್ಚಲ ಪ್ರಯತ್ನದಲ್ಲಿಯೇ ಐತಿಹಾಸಿ ಸಾಧನೆ ಮಾಡಿದೆ. ಇದಕ್ಕೆ ವಿದ್ಯಾರ್ಥಿಗಳು, ಪೋಷಕರ, ಉಪನ್ಯಾಸಕ ಪರಿಶ್ರಮಯೇ ಕಾರಣ.
: ಅವಿನಾಶ್,
ಅನುಭವಸಂಪನ್ನ ಶಿಕ್ಷಕರು ಸಿಲಿಬಸ್‌ವನ್ನು ವ್ಯವಸ್ಥಿತವಾದ ಮಾರ್ಗದರ್ಶನ, ಉತ್ತಮ ಕ್ಯಾಂಪಸ್, ಪೋಷಕರ ಸಹಕಾರದಿಂದ ಉನ್ನತ ಸಾಧನೆಗೆ ಸಹಕಾರಿ
: ವಿದ್ಯಾರ್ಥಿ, ದೇಶ್‌ನೀಟ್
ವೈದ್ಯಕೀಯ ಕ್ಷೇತ್ರಕ್ಕೆ 69 ವಿದ್ಯಾರ್ಥಿ ಗಳಲ್ಲಿ ಆಯ್ಕೆ ಎಂಬಿಬಿಎಸ್-39, ಬಿಎಎಂಎಸ್-17, ಡಿಡಿಎಸ್-10 ಹಾಗೂ ವೆಟರ್ನರಿ-3, 7 ವಿದ್ಯಾ ರ್ಥಿಗಳಲ್ಲಿ ಶಿವಮೊ ಗ್ಗದ ಸಿಮ್ಸ್‌ನಲ್ಲಿ ಪ್ರವೇಶ ಪಡೆದಿದ್ದಾರೆ.
2026-27ನೇ ಸಾಲಿನ ಶೈಕ್ಷಣಿಕ ತೃತೀಯ ವರ್ಷದ ಕ್ರಾಷ್ ಕೋರ್ಸ್ ಮತ್ತು ಲಾಂಗ್ ಟರ್ಮ್ ತರಬೇತಿಗೆ ಪ್ರವೇಶ ಆರಂಭವಾಗಿದ್ದು,
ಆಸಕ್ತರು ಹೆಸರು ನೋಂದಯಿಸಿಕೊಳ್ಳಬಹುದು. ದೇಶಾದ್ಯಂತ ನೀಟ್ ತರಬೇತಿಯಲ್ಲಿ ಪ್ರಮುಖ ಹೆಸರಾಗಲು ಶ್ರಮಿಸಲಾಗುತ್ತಿದೆ ಎಂದರು.
ಅಕಾಡೆಮಿಯ ಪ್ರಧಾನ ವ್ಯವಸ್ಥಾಪಕ ಎಸ್.ಪ್ರದೀಪ, ಮಾರ್ಕೆಟಿಂಗ್ ಮ್ಯಾನೇಜರ್ ನಾಗರಾಜ್ ಆಚಾರ್, ಪ್ರಾಧ್ಯಾಪಕರುಗಳಾದ ಬ್ರಹ್ಮ ಗಾಯಕ್‌ವಾಡ್, ಗೋವರ್ಧನ್, ಯುಗಂದರ್, ಕ್ಯಾಂಪಸ್‌ನ ಕೋ ಆರ್ಡಿನೇಟರ್ ವಿಜಯ್‌ಕುಮಾರ್ ಇದ್ದರು.
