ಶಿವಮೊಗ್ಗ : ನಗರದ ಶ್ರೀ ಪ್ರತ್ಯಾಂಗೀರಾ ದೇವಿ ದೇವಸ್ಥಾನದ ದೇವಿ ಉಪಾಸಕರಾದ ಬ್ರಹ ಡಾ.ಸುಪ್ರೀತ್ ಗುರೂಜಿ ಹುಟ್ಟು ಹಬ್ಬದ ಪ್ರಯುಕ್ತ, ಡಿ. 16 ಕ್ಕೆ ದೇವಾಲಯದಲ್ಲಿ ಶ್ರೀಗಳ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀ ಪ್ರತ್ಯಾಗೀರಾ ದೇವಿ ದೇವಾಲಯದ ಪ್ರಧಾನ ಕಾರ್ಯದರ್ಶಿ ಉದೀತ್ ವಿ ತಿಳಿಸಿದ್ದಾರೆ.
ಶಿವಮೊಗ್ಗ ಸಮೀಪದ ಸೋಗಾನೆ ಬಳಿಯ ಶಿವಮೊಗ್ಗ ವಿಮಾನ ನಿಲ್ದಾಣದ ಮುಂಭಾಗದಲ್ಲಿರುವ ಶ್ರೀ ಪ್ರತ್ಯಾಂಗೀರಾ ದೇವಿ ದೇವಸ್ಥಾನವು ನಾಡಿನ ಅಸಂಖ್ಯಾ ಭಕ್ತರ ಆಕರ್ಷಣೀಯ ತಾಣವಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದಲೂ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಅಂದು ಗುರೂಜಿಗೆ ಗುರುವಂದನೆ ಸೇರಿ ಹಲವು ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಅಂದು ಬೆಳಗ್ಗೆ 11 ಗಂಟೆಗೆ ದೇವಾಲಯದಲ್ಲಿ ಗುರು ವಂದನಾ ಕಾರ್ಯಕ್ರಮ ಜರುಗಲಿದೆ. ಹಾಗೆಯೇ, ಆಶಾ ಜ್ಯೋತಿ ಸ್ವಯಂ ರಕ್ತ ದಾನ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ಮತ್ತು ವಾಸನ್ ಐ ಕೇರ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ದೇವಿಯ ಭಕ್ತರು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು ಎಂದರು.
ಶಿವಮೊಗ್ಗ ನಗರದ ಹೊಳ ಬಸ್ ಸ್ಟಾಪ್ ಬಳಿ ಬೆಳಿಗ್ಗೆ ೭ ಗಂಟೆಗೆ ಸುಮಾರು ೫ ಸಾವಿರ ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಶತ್ರು ಸಂಹಾರಿಣಿ ಶ್ರೀ ಪ್ರತ್ಯಾಂಗೀರಾ ದೇವಿಗೆ ದೇವಾಲಯ ಹೊಂದಿದ ಏಕಮಾತ್ರ ನೆಲೆ ಇದಾಗಿದ್ದು, ಭಕ್ತರು ಇಲ್ಲಿ ದೇವಿಗೆ ಒಣ ಮೆಣಸಿನಕಾಯಿ ಯಾಗ ಸಮರ್ಪಣೆ ಮಾಡುವುದೇ ಇಲ್ಲಿನ ವಿಶೇಷವಾಗಿದೆ. ದೇವಾಲಯದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ್ದು, ಇಡೀ ನಾಡಿನಲ್ಲಿ ಇವತ್ತು ದೇವಾಲಯ ಮನೆ ಮಾತು ಆಗುವಂತೆ ಮಾಡಿದ್ದಾರೆ ಎಂದು ತಿಳಿಸಿದರು.
ದೇವಿಗೆ ಇಲ್ಲಿ ವಿಶೇಷವಾಗಿ ನಡೆಯುವ ಒಣ ಮೆಣನಸಿಕಾಯಿ ಯಾಗದ ಮೂಲಕ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವ ಮೂಲಕ ಬ್ರಹ್ಮಶ್ರೀ ಡಾ. ಶ್ರೀ ಸುಪ್ರೀತ್ ಗುರೂಜಿಯವರ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ ಎಂದರು.
ಭಕ್ತರು ನಾನಾ ಸಮಸ್ಯೆಗಳನ್ನು ಹೊತ್ತು ಇಲ್ಲಿಗೆ ಬರುತ್ತಾರೆ. ಎಲ್ಲರಿಗೂ ದೇವಿಯ ವಿಶೇಷ ದರ್ಶನದ ಜತೆಗೆ ಶ್ರೀಗಳ ಆಶೀರ್ವಾದ ವೂ ಕೂಡ ಸಿಗುತ್ತದೆ. ಭಕ್ತರ ಮೂಲಕವೇ ಅಭಿವೃದ್ಧಿ ಕಂಡ ಶ್ರೀ ಪ್ರತ್ಯಾಂಗೀರಾ ದೇವಿ ದೇವಾಲಯವು, ಲೋಕ ಕಲ್ಯಾಣವನ್ನು ಬಯಸಿಯೇ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸುತ್ತಾ ಬರುತ್ತಿದೆ ಎಂದು ತಿಳಿಸಿದರು.
Subscribe to Updates
Get the latest creative news from FooBar about art, design and business.
ಡಿ.16ಕ್ಕೆ ಸುಪ್ರೀತ್ ಗುರೂಜಿ ಹುಟ್ಟುಹಬ್ಬ ಆಚರಣೆ
Supreet Guruji's birthday celebration on December 16th


ಶತ್ರು ಸಂಹಾರಿಣಿ ಶ್ರೀ ಪ್ರತ್ಯಾಂಗೀರಾ ದೇವಿಗೆ ದೇವಾಲಯ ಹೊಂದಿದ ಏಕಮಾತ್ರ ನೆಲೆ ಇದಾಗಿದ್ದು, ಭಕ್ತರು ಇಲ್ಲಿ ದೇವಿಗೆ ಒಣ ಮೆಣಸಿನಕಾಯಿ ಯಾಗ ಸಮರ್ಪಣೆ ಮಾಡುವುದೇ ಇಲ್ಲಿನ ವಿಶೇಷವಾಗಿದೆ. ದೇವಾಲಯದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ್ದು, ಇಡೀ ನಾಡಿನಲ್ಲಿ ಇವತ್ತು ದೇವಾಲಯ ಮನೆ ಮಾತು ಆಗುವಂತೆ ಮಾಡಿದ್ದಾರೆ ಎಂದು ತಿಳಿಸಿದರು.