Close Menu
A1 suddi | Kannada News | Shivamogga News

Subscribe to Updates

Get the latest creative news from FooBar about art, design and business.

What's Hot

ಒಂದು ನಯಾ ಪೈಸೆಯೂ ಬಿಡುಗಡೆಯಾಗಿಲ್ಲ. ಅಂದಿದ್ದು ಯಾರು…? ಏಕೇ…?

January 13, 2026

ಹೃದಯಾಘಾತಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿ ಬಲಿ

January 10, 2026

ಪಿಂಚಣಿಗಾಗಿ ವೃದ್ಧ ದಂಪತಿ ಪರದಾಟ; ಸ್ವಯಂ ಪ್ರೇರಿತ ಪ್ರಕರಣ ಕೈಗೆತ್ತಿಕೊಂಡ ಉಪ ಲೋಕಾಯುಕ್ತ

January 9, 2026
Facebook X (Twitter) Instagram
Facebook X (Twitter) Instagram
A1 suddi | Kannada News | Shivamogga News
A1 suddi | Kannada News | Shivamogga News
Home»ಪ್ರಮುಖ ಸುದ್ದಿ»ರೈತರು ಉದ್ಯಮಿಗಳಾಗಿ ಬಲವರ್ಧನೆಗೊಳ್ಳಿ. ಕೃಷಿ ಮೇಳಕ್ಕೆ ಬಂದವರ ಎಷ್ಟು ಸಾವಿರ…? ಗೊತ್ತೇ…?
ಪ್ರಮುಖ ಸುದ್ದಿ

ರೈತರು ಉದ್ಯಮಿಗಳಾಗಿ ಬಲವರ್ಧನೆಗೊಳ್ಳಿ. ಕೃಷಿ ಮೇಳಕ್ಕೆ ಬಂದವರ ಎಷ್ಟು ಸಾವಿರ…? ಗೊತ್ತೇ…?

ಕೃಷಿ ಮೇಳಕ್ಕೆ ಬಂದವರ ಎಷ್ಟು ಸಾವಿರ...? ಗೊತ್ತೇ...?
Raghu ShettyBy Raghu ShettyNovember 7, 2025No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಶಿವಮೊಗ್ಗ,: ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಮತ್ತು ಆದಾಯ ನೀಡುವ ಬೆಳೆಗಳನ್ನು ನೀಡುವ ಉದ್ದೇಶದಿಂದ ಇಂತಹ ಕೃಷಿ ಮೇಳಗಳನ್ನು ಆಯೋಜಿಸಲಾಗಿದ್ದು, ಇದನ್ನು ಬಳಸಿಕೊಂಡು ರೈತರು ಉದ್ಯಮಿಗಳಾಗಿ ಬಲವರ್ಧನೆಗೊಳ್ಳಬೇಕೆಂದು ಕೃಷಿ ಸಚಿವರು ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಎನ್.ಚೆಲುವರಾಯಸ್ವಾಮಿ ಕರೆ ನೀಡಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಬಿ.ಸಿ. ಟ್ರಸ್ಟ್ ಇವರ ಸಹಯೋಗದೊಂದಿಗೆ “ಸಹ ಕಾರ ಕೃಷಿಯಿಂದ ಸುಸ್ಥಿರ ಕೃಷಿ” ಶೀರ್ಷಿಕೆ ಅಡಿಯಲ್ಲಿ ಇಂದಿನಿಂದ ನ.೦೯ ರವರೆಗೆ ಕೃಷಿ ಮಹಾವಿದ್ಯಾಲಯ ನವುಲೆ ಆವರಣದಲ್ಲಿ ಏರ್ಪಡಿಸಲಾಗಿರುವ ಕೃಷಿ-ತೋಟಗಾರಿಕೆ ಮೇಳ-೨೦೨೫ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರಕ್ಕೆ ಅಭಾವ ಉಂಟಾಗಿಲ್ಲ. ಸಾಕಷ್ಟು ಪೂರೈಕೆ ಮಾಡಲಾಗಿದೆ. ಕೇಂದ್ರದಿಂದ ೩.೫ ಲಕ್ಷ ಮೆ.ಟನ್ ಗೊಬ್ಬರ ಸರಬರಾಜು ಕೊರತೆ ಯಾದರೂ ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಕೃಷಿ ಕೃಷಿ ಹೊಂಡ ಯಾರು ಎಷ್ಟು ಬೇಕಾದರೂ ಮಾಡಲು ಅವಕಾಶ ಕಲ್ಪಿಪಸಲಾಗಿದೆ. ಪ್ರಯೋಗಾಲಯ ಬಲವರ್ಧನೆ ಮಾಡುವ ಕೆಲಸ ಆಗುತ್ತಿದೆ. ರೈತರು ಮಣ್ಣು ಪರೀಕ್ಷೆ ಮಾಡಿಸಿ ಎಂದ ಅವರು ಇಡೀ ರಾಜ್ಯದಲ್ಲಿ ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನ ತರುವ ಪ್ರಯತ್ನ ಮಾಡಲಾಗುತ್ತಿದೆ
                                                                : ಸಚಿವ ಚೆಲುವರಾಯಸ್ವಾಮಿ

ಅತ್ಯುತ್ತಮ ಕೃಷಿ ಮೇಳ ಮತ್ತು ಪ್ರದರ್ಶವನ್ನು ಏರ್ಪಡಿಸಲಾಗಿದ್ದು, ಭತ್ತದ ಮತ್ತು ಇತರೆ ಉತ್ತಮ ತಳಿಗಳನ್ನು ಬಿಡುಗಡೆ ಗೊಳಿಸಲಾಗಿದೆ. ರೈತರಿಗೆ ವಿಶ್ವವಿದ್ಯಾಲಯ ನೀಡಾಬೇಕಾಗಿರುವುದು ಇದನ್ನೇ. ಕೃಷಿಯನ್ನು ಉದ್ದಿಮೆಯಾಗಿ ಪರಿವರ್ತಿಸಿ ರೈತರಿಗೆ ಉತ್ತಮ ಆದಾಯ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಸೌಲಭ್ಯಗಳು, ಕಾರ್ಯಕ್ರಮಗಳನ್ನು ನೀಡುತ್ತಿವೆ. ಕೆಪೆಕ್ ಸಂಸ್ಥೆಯು ರಾಜ್ಯದಲ್ಲಿ ೫ ಸಾವಿರ ಘಟಕಗಳಿಗೆ ಸಬ್ಸಿಡಿ ನೀಡಿದೆ ಎಂದ ಅವರು ರೈತರಿಗೆ ಎಂಒ ೪ ತಳಿಯನ್ನು ನೀಡಲು ಕೃಷಿ ಇಲಾಖೆ ಮತ್ತು ವಿಶ್ವವಿದ್ಯಾಲಯಗಳು ಬದ್ದವಾಗಿದೆ.

ಫಿಲಿಫೈನ್ಸ್ ದೇಶದಲ್ಲಿ ಸುಮಾರು ೨೫ ರಿಂದ ೩೦ ದಿನಗಳ ಕಾಲ ಮಳೆ ನಿರಂತರವಾಗಿ ಬಂದರೂ ಹಾನಿಯಾಗದಂತಹ ಭತ್ತದ ತಳಿಯನ್ನು ಕಂಡು ಹಿಡಿದಿದ್ದು, ಮುಂದಿನ ದಿನಗಳಲ್ಲಿ ನಮ್ಮ ವಿಜ್ಞಾನಿಗಳೂ ರೈತರಿಗೆ ಇಂತಹ ತಳಿಗಳನ್ನು ಸಂಶೋಧಿಸಿ ನೀಡುವರು ಎಂದು ಭರವಸೆ ವ್ಯಕ್ತಪಡಿಸಿದರು.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ಕಡಿಮೆ ಖರ್ಚು ಮಾಡಿ ಹೆಚ್ಚು ಇಳುವರಿ ನೀಡುವ ಬೆಳೆಗಳನ್ನು ನೀಡುವ ತಳಿಗಳನ್ನು ನೀಡಲು ವಿಶ್ವವಿದ್ಯಾಲಯಗಳು ಶ್ರಮಿಸುತ್ತಿವೆ. ಲ್ಯಾಬ್ ಟು ಲ್ಯಾಂಡ್ ಎಂಬುದು ಸರ್ಕಾರದ ಪರಿಕಲ್ಪನೆಯಾಗಿದ್ದು ವಿಜ್ಞಾನಿಗಳು ಮತ್ತು ರೈತರು ಸಂಪರ್ಕದಲ್ಲಿರಬೇಕು ಎಂದರು.

ಮಲೆನಾಡಿನಲ್ಲಿ ಅಡಿಕೆ ಬೆಳೆ ಹೆಚ್ಚಾಗಿದೆ. ೨೦ ರಿಂದ ೨೭ ಲಕ್ಷ ಹೆ. ಬೆಳೆ ಹೆಚ್ಚಾಗಿದೆ. ಕೃಷಿಗೆ ಹೆಚ್ಚಿನ ಆದ್ಯತೆ ನೀಡಲು ಮೂಡಿಗೆರೆ, ದಾವಣಗೆರೆ, ಬೆಳಗಾವಿ, ಬೆಂಗಳೂರು ಮತ್ತು ಮಂಡ್ಯದಲ್ಲಿ ಕೃಷಿ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಕಳೆದ ಬಾರಿ ಮಳೆಗೆ ೧೩ ರಿಂದ ೧೬ ಲಕ್ಷ ಹೆ. ಬೆಳೆ ನಷ್ಟ ಸಂಭವಿಸಿದ್ದು ಎನ್‌ಡಿಆರ್‌ಎಫ್ ಪರಿಹಾರದ ಜೊತೆಗೆ ರಾಜ್ಯ ಸರ್ಕಾರ ರೂ.೮.೫ ಸಾವಿರ ಪರಿಹಾರ ನೀಡುತ್ತಿದೆ ಎಂದ ಅವರು ರೈತರ ಆದಾಯ ಹೆಚ್ಚಿಸಲು ಸರ್ಕಾರ ಎಲ್ಲ ರೀತಿಯಿಂದ ಸಹಕರಿಸುತ್ತಿದ್ದು ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಉತ್ತಮ ಬೆಲೆ ಪಡೆಯಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕರಾದ ಮಂಜು ನಾಥ ಭಂಡಾರಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯನಾಯ್ಕ ಮಾತನಾಡಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವವಿದ್ಯಾಲ ಯದ ವ್ಯಾಪ್ತಿಯಲ್ಲಿ ೬ ಜಿಲ್ಲೆ ವಿದ್ಯಾರ್ಥಿಗಳು ಹಾಗೂ ರೈತರು ಬರಲಿದ್ದು,
ರೈತರ ಅನುಕೂಲಕ್ಕಾಗಿ ಅನೇಕ ತಳಿಗಳನ್ನು ಬಿಡುಗಡೆ ಮಾಡಲಾಗಿದೆ, ೧೩ ತಾಂತ್ರಿಕ ತಳಿಗಳನ್ನು ಬಿಡುಗಡೆ ೨೦೫ ಸಂಶೋಧನೆಗಳನ್ನು ನಡೆಸಲಾಗಿದ್ದು ೯೦ ತಳಿಗಳಲ್ಲಿ ೭೩೭ ಪ್ರಯೋಗ ಮಾಡಿದ್ದೇವೆ. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣದ ಅವಕಾಶ ಮಾಡಿಕೊಡಲಾಗಿದ್ದು, ಪರೋಕ್ಷ ವಾಗಿ ೪ ಲಕ್ಷ ರೈತರನ್ನು ತಲುಪುತ್ತಿದ್ದೇವೆ. ಇರುವಕ್ಕಿಯಲ್ಲಿ ರೂ.೨೫೫ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿದ್ದು ಇದಕ್ಕೆ ಅಗತ್ಯವಾದ ಪೀಠೋಪಕರಣಕ್ಕೆ ರೂ.೧೦ ಕೋಟಿ ಅನುದಾನದ ಅವಶ್ಯಕತೆ ಇದೆ. ಹಾಗೂ ೨೦೧೩ ರಿಂದ ಇಲ್ಲಿಯವರೆಗೆ ವಿಶ್ವವಿದ್ಯಾಯದಲ್ಲಿ ಯಾವುದೇ ಹುದ್ದೆಗಳು ಭರ್ತಿಯಾಗಿಲ್ಲ, ಬೋಧಕ ಹಾಗೂ ಬೋಧಕೇತರ ಹುದ್ದೆಗ ಳನ್ನು ತುಂಬುವಂತೆ ಮನವಿ ಮಾಡಿದರು.
ಇದೇ ವೇಳೆ ಉತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿಯನ್ನು ವಿತರಣೆ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್ ಕೆ, ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಎಸ್.ಆರ್ ಮಜುನಾಥ ಗೌಡ, ಡಾ.ಹನುಮಂತಪ್ಪ, ಆಡಳಿತ ಮಂಡಳಿ ಸದಸ್ಯರಾದ ಬಿ.ಕೆ ಕುಮಾರಸ್ವಾಮಿ, ಜೆ ಜೆ ಕಾವೇರಪ್ಪ, ದೇವಿಕುಮಾರ್, ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ರಾಮಕೃಷ್ಣ ಆಶ್ರಮದ ವಿನಯಾನಂದ ಸರಸ್ವತಿ ಸ್ವಾಮೀಜಿ, ವಿವಿಧ ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು, ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು, ವಿಶ್ವವಿದ್ಯಾಲಯದ ಅಧಿಕಾರಿ ವರ್ಗದವರು, ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ರೈತರು ಭಾಗವಹಿಸಿದ್ದರು.

ಕೃಷಿ ಮೇಳಕ್ಕೆ 5೦.೦೦೦ ಜನ ಭಾಗಿ

shivamoga
Share. Facebook Twitter Pinterest LinkedIn Tumblr Email
Raghu Shetty
  • Website

Related Posts

ಒಂದು ನಯಾ ಪೈಸೆಯೂ ಬಿಡುಗಡೆಯಾಗಿಲ್ಲ. ಅಂದಿದ್ದು ಯಾರು…? ಏಕೇ…?

January 13, 2026

ಪಿಂಚಣಿಗಾಗಿ ವೃದ್ಧ ದಂಪತಿ ಪರದಾಟ; ಸ್ವಯಂ ಪ್ರೇರಿತ ಪ್ರಕರಣ ಕೈಗೆತ್ತಿಕೊಂಡ ಉಪ ಲೋಕಾಯುಕ್ತ

January 9, 2026

ನಶೆ ಮುಕ್ತ ಶಿವಮೊಗ್ಗ ನನ್ನ ಮೊದಲ ಆದ್ಯತೆ

January 2, 2026
Top Posts

ಯುವತಿಗೆ ರೂಮಿಗೆ ಕರೆಸಿಕೊಂಡು ಭೀಕರವಾಗಿ ಕೊಲೆಗೈದ ಯುವಕ!

November 24, 2025218 Views

ಕಲಗೋಡು ರತ್ನಾಕರ್‌ಗೆ ನಿಗಮ ಮಂಡಳಿ ಸ್ಥಾನಕ್ಕೆ ಬೇಡಿಕೆ ಇಟ್ಟವರು ಯಾರು…?

November 16, 2025204 Views

ಗುರೋಜಿ ರಾವ್ 4 ವರ್ಷ ಕಠಿಣ ಸಜೆ ಮತ್ತು 20,000 ರೂ ದಂಡ -ಕಳ್ಳನ ಬಂಧನ ; ಲಕ್ಷಾಂತರ ರೂ. ವಶ

September 24, 2025204 Views

ಶಿವಮೊಗ್ಗ ಪೊಲೀಸರ ಕಾರ್ಯ ಶ್ಲಾಘನೀಯ

November 4, 2025185 Views
Don't Miss
ಪ್ರಮುಖ ಸುದ್ದಿ

ಒಂದು ನಯಾ ಪೈಸೆಯೂ ಬಿಡುಗಡೆಯಾಗಿಲ್ಲ. ಅಂದಿದ್ದು ಯಾರು…? ಏಕೇ…?

By Raghu ShettyJanuary 13, 20260

ಶಿವಮೊಗ್ಗ : 2025-26ನೇ ಸಾಲಿಗೆ ಸಂಬಂಧಿಸಿದಂತೆ ಸುಮಾರು 165 ಕೋಟಿ ಮೊತ್ತದ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಇದುವರೆಗೆ ಮಹಾನಗರ…

ಹೃದಯಾಘಾತಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿ ಬಲಿ

January 10, 2026

ಪಿಂಚಣಿಗಾಗಿ ವೃದ್ಧ ದಂಪತಿ ಪರದಾಟ; ಸ್ವಯಂ ಪ್ರೇರಿತ ಪ್ರಕರಣ ಕೈಗೆತ್ತಿಕೊಂಡ ಉಪ ಲೋಕಾಯುಕ್ತ

January 9, 2026

ಸಮಾಜ ಸೇವಕಿ ನಂದಿನಿಗೆ ಹೊಸ ವರ್ಷದ ಪ್ರಶಸ್ತಿ ಪುರಸ್ಕಾರ

January 6, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

About Us
About Us

Your source for the Local news. A1news.com Kannada online News Portal. it offer shivamogga Local News. find more here.
Email Us: A1news@gmail.com
Contact: +9538172845

Facebook X (Twitter) Instagram YouTube WhatsApp Telegram
Featured Posts

ಪಾಕಿಸ್ಥಾನ ಜಿಂದಾಬಾದ್ ಎಂದವರಿಗೆ ಗುಂಡಿಕ್ಕಿ ಕೊಲ್ಲಿ : ಬೇಳೂರು

September 10, 2025

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

September 10, 2025

ಹಸಿರು ಶೃಂಗಾರದಲ್ಲಿ ಶಿವಮೊಗ್ಗ ನಗರ

September 15, 2025
Worldwide News

ಹೊಲಿಗೆ ಯಂತ್ರ ವಿತರಣಾ ಯೋಜನೆಯಡಿ ಅರ್ಜಿ ಆಹ್ವಾನ

November 11, 20250 Views

ಅನುದಾನ ಸದ್ಬಳಕೆ ಮಾಡಿಕೊಳ್ಳಿ

September 17, 20251 Views

ಮೋದಿ ಹುಟ್ಟುಹಬ್ಬ ; ನಿರುದ್ಯೋಗ ದಿನ ಆಚರಣೆ

September 17, 20251 Views
A1 suddi | Kannada News | Shivamogga News
Facebook X (Twitter) Instagram WhatsApp Telegram
© 2026 A1 Suddi. Designed by Newbie Techy.

Type above and press Enter to search. Press Esc to cancel.