-
ಶಿವಮೊಗ್ಗ : ಕಾಳಸಂತೆಯಲ್ಲಿ ರೇಷನ್ ಅಕ್ಕಿ ಮಾರಾಟವಾಗುತ್ತಿರುವುದಕ್ಕೆ ಕಡಿವಾಣ ಹಾಕಲು ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಅವರು ಮಾದ್ಯಮ ಮಿತ್ರರೊಂದಿಗೆ ಮಾತನಾಡುತ್ತಾ ಯಾವುದೇ ಕಾರ್ಡ್‌ಗಳು ರದ್ದಾಗುತ್ತಿಲ್ಲ, ಅದರ ಭಯಬೇಡ, ತೆರಿಗೆ ಕಟ್ಟುತ್ತಿರುವವರಿಗೆ ಬಿಪಿಎಲ್ ಕಾರ್ಡ್‌ನಿಂದ ಎಪಿಎಲ್ ಕಾರ್ಡ್‌ಗಲಾಗಿ ಬದಲಾವಣೆಯಾಗುತ್ತಿದೆ ಎಂದರು.
ಮನೆ ಕಟ್ಟುವುದಕ್ಕಾಗ ಲೋನ್ ಬೇಕದಾಗ ಐಟಿ ರಿಟಿನ್ಸ್ ಮಾಡುವವರಿಗೆ ಕಾರ್ಡ್‌ಗಳು ರದ್ದಾಗುವುದಿಲ್ಲ. ತೆರಿಗೆ ಕಟ್ಟುತ್ತು, ಬಿಪಿಎಲ್ ಕಾರ್ಡ್‌ನನ್ನು ದುರುಪಯೋಗ ಪಡಿಸಿಕೊಳ್ಳವವರಿಗೆ ಮಾತ್ರ ಕಾರ್ಡ್ ರದ್ದಾಗುತ್ತಿದೆ ಎಂದರು.
ಬಿಪಿಎಲ್ ಕಾರ್ಡ್‌ಗಳ ಮಾನದಂಡ ಪರಿಷ್ಕರಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿಗಳು ಕೂಡ ಇದರ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೆಲವು ಮಾನದಂಡಗಳಲ್ಲಿ ಸರಳೀಕರಣಗೊಳಿಸಲಾಗುವುದು ಆದಾಯದ ಮಟ್ಟವನ್ನು ಹೆಚ್ಚಿಸುವ ಬಗ್ಗೆ ಗಮನ ಹರಿಸುತ್ತೇನೆ ಎಂದರು.
ಕೆಲವು ಕುಟುಂಬಗಳಲ್ಲಿ ೧೦ ಕೆ.ಜಿ ಅಕ್ಕಿ ಜಾಸ್ತಿಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ೧೦ ಕೆಜಿ ಅಕ್ಕಿ ಬದಲು ೫ ಕೆಜಿ. ಅಕ್ಕಿ ಹಾಗೂ ಬೆಳೆ ಎಣ್ಣೆ ವಿತರಣೆ ಮಾಡಲಾಗುವುದು ಎಂದರು.
ಶಿವಮೊಗ್ಗದಲ್ಲಿ ಮೂರು ಲಕ್ಷದ ೮೦ ಸಾವಿರದ ೨೨ ಬಿಪಿಎಲ್ ಕಾರ್ಡ್‌ದಾರಿದ್ದರು. ಅವರ ಯಾವುದೇ ರೀತಿಯ ಅನಾನುಕೂಲವಾಗದಂತೆ ರೇಷನ್ ವಿತರಿಸಲು ಅವಶ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ದುಡಿಮೆಗಾಗಿ ಕಾರು ಬಳಸುತ್ತಿದ್ದವರಿಗೆ ಯಾವುದೇ ತೊಂದ್ರೆಯಿಲ್ಲ, ಸ್ವಂತ ಓಡಾಡಟಕ್ಕೆ ಕಾರುಗಳಿದ್ದರೆ ಅಂತವರಿಗೆ ಬಿಪಿಎಲ್‌ನಿಂದ ಎಪಿಎಲ್ ಕಾರ್ಡ್‌ಗಳಾಗಿ ಬದಲಾವಣೆಯಾಗಲಿದೆ ಎಂದರು.
ಪ್ರಸ್ತುತ ಅನರ್ಹರಿಗೆ ಮಾತ್ರ ಕಾರ್ಡ್ ರದ್ದಾಗುತ್ತಿದೆ ಹೊರತು ಅರ್ಹರಿಗೆ ಯಾವುದೇ ರೀತಿಯಲ್ಲಿ ಕಾರ್ಡ್ ರದ್ದಾಗುತ್ತಿಲ್ಲ ಎಂದು ತಿಳಿಸಿದರು.
ಒನ್ ನೇಷನ್ ಒನ್ ರೇಷನ್ ಕಾರ್ಡ್ ಕೇಂದ್ರ ಸರ್ಕಾರದಂತೆ ಕಾರ್ಡ್‌ದಾರರು ಎಲ್ಲಿ ಬೇಕಾದರು ತಮ್ಮ ರೇಷನ್ ಪಡೆಯಬಹುದು. ಇದಕ್ಕೆ ಯಾವುದೇ ತೊಂದ್ರೆಯಿಲ್ಲಿ, ಆಕಸ್ಮಿಕ ತೊಂದ್ರೆ ಇನ್ನು ಮುಂದೆ ಆ ರೀತಿ ಅನಾನುಕೂಲವಾಗದಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿ ಬದಲಾವಣೆ, ಸಂಪುಟ ರಚನೆ ಬಗ್ಗೆ ಹೈಕಮಾಂಡ ತೀರ್ಮಾನವೇ ಅಂತಿಮ, ಅದರ ಬಗ್ಗೆ ನಾನೇನು ಮಾತನಾಡುವುದಿಲ್ಲ ಎಂದರು. ನನ್ನ ರಾಜಕೀಯ ಜೀವನದಲ್ಲಿ ನನ್ನ ಕೊಟ್ಟ ಜವಾಬ್ದಾರಿಯನ್ನು ನಾನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ ಎಂದರು.ಕೆಲವು ದಲಿತ ಸಂಘಟನೆಗಳು ಮುನಿಯಪ್ಪ ಹೊರ ಬರುತ್ತಿದ್ದಂತೆ, ಮುಂದಿನ ದಲಿತ ಮುಖ್ಯಮಂತ್ರಿ ಮುನಿಯಪ್ಪ ಎಂಬ ಘೋಷಣೆ ಕೇಳಿಬಂತು.
Subscribe to Updates
Get the latest creative news from FooBar about art, design and business.
