ಶಿವಮೊಗ್ಗ : ನಗರದ ಸವಳಂಗ ರಸ್ತೆಯಲ್ಲಿರುವ ಅಕ್ಷರ ಸಂಯುಕ್ತ ಪದವಿಪೂರ್ವ ಕಾಲೇಜು ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯೊಂದಿಗೆ ಸಂಯೋಜಿಸಿಕೊಂಡಿದೆ ಎಂದು ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ್ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ 2014 ರಲ್ಲಿ ಸ್ಪರ್ಧಾತ್ಮಕ ರೀತಿಯಲ್ಲಿ ಉತ್ತಮ ಶಿಕ್ಷಣ ನೀಡು ಮಹರ್ಷಿ ಹಾರಿರಾಮ್ ಅವರ ಹೆಸರಿನಲ್ಲಿ ಅಕ್ಷರ ವಿದ್ಯಾಸಂಸ್ಥೆಯನ್ನ ಆರಂಭಿಸಲಾಗಿತ್ತು. ಮಲೆನಾಡು ಭಾಗದಲ್ಲಿ ವಿದ್ಯಾಭ್ಯಾಸ ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ಮಂಗಳೂರು ಮತ್ತು ಉಡುಪಿ ಜಿಲ್ಲೆಗೆ ಹೋಗುತ್ತಿದ್ದರು.
ಇದಕ್ಕಾಗಿ ಅಲ್ಲಿನ ಗುಣಮಟ್ಟದ ಶಿಕ್ಷಣ ಇಲ್ಲಿ ಆರಂಭಿಸಲು ಅಕ್ಷರ ವಿದ್ಯಾಸಂಸ್ಥೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯೊಂದಿಗೆ ಶೈಕ್ಷಣಿಕ ಸಹಭಾಗಿತ್ವ ಪಡೆದುಕೊಂಡಿದೆ. ನಮ್ಮ ಮಲೆನಾಡಿನಲ್ಲಿರುವ ಸಂಸ್ಥೆಯಿಂದ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿದ್ದಾರೆ. ಆದರೆ ನೀಟ್ ನತ್ತು ಜೆಇಇ ನಲ್ಲಿ ಮಲೆನಾಡಿಗರು ಪಾಸ್ ಕಡಿಮೆಯಾಗಿದೆ. ಹಾಗಾಗಿ ಈ ಶಿಕ್ಷಣ ಪಡೆಯಲು ಕರಾವಳಿಗೆ ಹೋಗುತ್ತಿರುವುದರಿಂದ ಅದನ್ನ ಶಿವಮೊಗ್ಗದಲ್ಲಿಯೇ ನೀಡಲು ಚಿಂತಿಸಲಾಗಿದೆ. ಇದರ ಫೀ ಸ್ಟ್ರಕ್ಚರ್ ಕ್ರಿಯೇಟಿವ್ ಸಂಸ್ಥೆಯ ಶುಲ್ಕದ ರೀತಿಯಲ್ಲಿಯೇ ಇರಲಿದೆ ಎಂದರು.
ವಿಶ್ವವನ್ನು ಬದಲಾಯಿಸಲು ನಾವು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಸಾಧನವೆಂದರೆ ಶಿಕ್ಷಣ, ನಮ್ಮ ಜೀವನದಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿ ಸರಿಮಾರ್ಗವನ್ನು ತೋರುವಲ್ಲಿ ಮನೆ, ಪೋಷಕರು, ಶಿಕ್ಷಕರು ಎಂಬ ತ್ರಿಕೋನ ವ್ಯವಸ್ಥೆಯಿದ್ದರೆ ಮಾತ್ರ ಮಕ್ಕಳ ಉಜ್ವಲಭವಿಷ್ಯ ಪ್ರಜ್ವಲಿಸಲು ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಯ ಸ್ಥಾಪನೆಗೆ ದಿಟ್ಟ ಹೆಜ್ಜೆ ಇಟ್ಟವರು ಬೋಧನಾ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಏಳು ಜನ ಯುವಕರ ತಂಡ ವಿದ್ವಾನ್ ಗಣಪತಿ ಭಟ್, ಡಾ.ಬಿ ಗಣನಾಥ ಶೆಟ್ಟಿ, ಅಮೃತ್ ರೈ, ಅಶ್ವತ್ ಎಸ್. ಎಲ್., ಆದರ್ಶ ಎಂ.ಕೆ.. ವಿಮಲ್ ರಾಜ್ ಜಿ., ಗಣಪತಿ ಭಟ್ ಕೆ ಎಸ್ ರವರು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಪ್ತ ಸಂಸ್ಥಾಪಕರು ಎಂದು ಕ್ರಿಯೇಟಿವ್ ಸಂಸ್ಥೆ ಮುಖ್ಯಸ್ಥ ಶ್ರೇಯಸ್ ತಿಳಿಸಿದರು.
ಏಳು ಜನ ಸಮಾನ ಮನಸ್ಕರಿಂದ 2020ರಲ್ಲಿ ಸ್ಥಾಪಿಸಲ್ಪಟ್ಟ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ(ರಿ) ಮೂಡಬಿದ್ರಿ ಈ ವರ್ಷ ೫ನೇವರ್ಷದ ಸಂಭ್ರಮದಲ್ಲಿದ್ದು ಕಾರ್ಕಳ, ಉಡುಪಿ, ಹಾಸನದಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಎಲ್ಲಾ ಕಡೆಯೂದಕ್ಷಮಟ್ಟದ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ತನ್ನ ಶಾಖೆಗಳನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದೆ.
ಮಹತ್ತರ ಕನಸುಗಳನ್ನು ಹೊತ್ತು ಪಿ.ಯು.ಸಿಗೆ ಬರುವ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗುವುದು ಸ್ಪರ್ಧಾತ್ಮಕ ಪರೀಕ್ಷೆಗಳಿಂದ. ಕ್ರಿಯೇಟಿವ್ ಶಿಕ್ಷಣ ಸಂಸ್ಥೆಗಳಲ್ಲಿ NEET, JEE, KCET, CA FOUNDATION. CSEET, B.Sc Agriculture, NATA, NDA ವರ್ಗದವರಿಂದ ತರಬೇತಿ ಕೊಡಿಸಲಾಗುತ್ತಿದೆ. ಈ ರೀತಿಯ ಕಾರ್ಯ ವೈಖರಿ ಕ್ರಿಯೇಟಿವ್ ೩ ಸಂಸ್ಥೆಗಳಾದ ಕಾರ್ಕಳ, ಉಡುಪಿ ಹಾಗೂ ಹಾಸನದಲ್ಲೂ ಯಶಸ್ವಿಯಾಗಿ ನಡೆದು ಬರುತ್ತಿದೆ ಎಂದರು.
ಕಳೆದ ೫ ವರ್ಷಗಳಲ್ಲಿ ಸಂಸ್ಥೆಯು ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸುವುದರ ಜೊತೆಗೆ ರಾಜ್ಯದ 10 ಬ್ಯಾಂಕ್‌ನೊಳಗೆ 50 ವಿದ್ಯಾರ್ಥಿಗಳು, ನೀಟ್‌ನಲ್ಲಿ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ಕಾಲೇಜನ್ನು ಸೇರಲು ಬೇಕಾದ ಉತ್ತಮ ನೀಟ್ ಅಂಕಗಳನ್ನು ಗಳಿಸಿರುತ್ತಾರೆ. ಹೀಗೆ ಅತ್ಯಧಿಕ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ. ರ್ಯಾಂಕ್‌ಗಳನ್ನು ಪಡೆಯುವ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ತನ್ನ ಹೆಜ್ಜೆ ಗುರುತನ್ನು ಮೂಡಿಸುವ ನಿಟ್ಟಿನಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಾಧನೆಯ ಶಿಖರದತ್ತ ಹೆಜ್ಜೆಯಿಡುತ್ತಿದೆ ಎಂದರು.
ಕೇವಲ ಐದೇ ವರ್ಷದಲ್ಲಿ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು ಹಲವಾರು ವಿಭಿನ್ನ ಸಾಧನೆಯಲ್ಲಿ ಹೊಸ ಮೈಲುಗಲ್ಲನ್ನೇ ಸೃಷ್ಟಿಸಿದೆ. 2023-24 ನೇ ಶೈಕ್ಷಣಿಕ ವರ್ಷದಲ್ಲಿ ವಾಣಿಜ್ಯ ವಿಭಾಗದ ಸಾನ್ವಿ ರಾವ್ ರಾಜ್ಯಕ್ಕೆ ಪ್ರಥಮ ರ್ಯಾಂಕ್. ಪ್ರತೀ ವರ್ಷ ರಾಜ್ಯದ ಟಾಪ್ 10 ರಾಂಕ್‌ಗಳ ಪಟ್ಟಿಯಲ್ಲಿ ಕ್ರಿಯೇಟಿವ್‌ನ ವಿದ್ಯಾರ್ಥಿಗಳು, ರಾಷ್ಟ್ರಮಟ್ಟದ ಪ್ರತಿಷ್ಠಿತ ಮೆಡಿಕಲ್ ಸಂಸ್ಥೆಗಳಾದ AIIMS, JIPMER ನಲ್ಲಿಕ್ರಿಯೇಟಿವ್ ವಿದ್ಯಾರ್ಥಿಗಳು, ರಾಷ್ಟ್ರಮಟ್ಟದ ಉನ್ನತ ತಾಂತ್ರಿಕ ವಿದ್ಯಾಲಯಗಳಾದ IIT, NIT, IISER. HIST. RGPIT ಸಂಸ್ಥೆಗಳಿಗೆ ಆಯ್ಕೆಯಾದ ಕ್ರಿಯೇಟಿವ್‌ನ ವಿದ್ಯಾರ್ಥಿಗಳು. ವಾಣಿಜ್ಯ ವಿಭಾಗದ ಅಂ, ಅSಇಇಖಿ ಪರೀಕ್ಷೆಯಲ್ಲಿ ಕ್ರಿಯೇಟಿವ್ ಗರಿಷ್ಠ ಪ್ರಮಾಣದ ವಿದ್ಯಾರ್ಥಿಗಳ ತೇರ್ಗಡೆಯಾಗಿದ್ದಾರೆ ಎಂದರು.
ಹೀಗೆ ಸಂಸ್ಥೆಯು ತನ್ನ ಗುಣಮಟ್ಟದ ಶಿಕ್ಷಣ, ಅನುಭವೀ ಉಪನ್ಯಾಸಕ ವರ್ಗದವರು ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ನೀಡಿರುವ ಬದ್ಧತೆಯಿಂದ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ದೂಷಿಸುತ್ತಿದೆ. ಇದು ನಿಜವಾದ ಅರ್ಥದಲ್ಲಿ ಶಿಕ್ಷಣದ ಮೂಲಕ ಸೇವೆ ಸೃಜನಶೀಲತೆಯ ಮೂಲಕ ಪ್ರಗತಿ ಎಂಬ ಮೌಲ್ಯವನ್ನು ಅಳವಡಿಸಿಕೊಂಡಿದೆ. ಇನ್ಮುಂದೆ ಈ ಸೇವೆ ಶಿವಮೊಗ್ಗದಲ್ಲಿ ಲಭ್ಯವಾಗಲಿದ ಎಂದರು.
