ಶಿವಮೊಗ್ಗ : ನಗರದ ಕುವೆಂಪು ರಂಗಮಂದಿರದಲ್ಲಿ ಅ.19ರಂದು ಶ್ರೀ ಪಾಲಚಂದ್ರ ಡ್ಯಾನ್ಸ್ ಇನ್ಸ್ಟಿಟ್ಯೂಟ್ ಆಫ್ ಶಿವಮೊಗ್ಗ ಮತ್ತು ಶಿವ ತಾಂಡವ ನೃತ್ಯ ಸಂಸ್ಥೆಯಿಂದ ಪುನೀತ್ ರಾಜಕುಮಾರ್ ಕಪ್ ರಾಜ್ಯಮಟ್ಮದ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ದೀಪು ಸರ್ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸುಮಾತು 10 ವರ್ಷಗಳ ನಂತರ ಈ ಸ್ಥರ್ಧೆಯನ್ನು ನಾವು ತಮ್ಮ ಗುರುಗಳ ಮಾರ್ಗದರ್ಶದಲ್ಲಿ ಮತ್ತೊಮ್ಮೆ ಏರ್ಪಡಿಸುತ್ತಿದ್ದೇವೆ. ನಮ್ಮ ಸಂಸ್ಥೆಯಿಂದ ಹಲವಾರು ಯುವಕ-ಯುವತಿಯರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ತಂದು ಜಿಲ್ಲೆ ಮತ್ತು ನಮಗೆ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದರು.ನೃತ್ಯ ಸ್ಪರ್ಧೆಯಲ್ಲಿ ನಾಲ್ಕು ವಿಭಾಗಗಳಾಗಿ ವಿಗಂಡಿಸಲಾಗಿದೆ. ಅದರಲ್ಲಿ ಸಬ್ ಜೂನಿಯರ್ 3 ರಿಂದ 6 ವರ್ಷ ಮಕ್ಕಳಿಗೆ ಸೋಲೋ ಸ್ಪರ್ಧೆ, ಇದರಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹಮಾನವಿದ್ದು ಆರ್ಕಷಕ ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಇದಕ್ಕೆ ಪ್ರವೇಶ ಶುಲ್ಕ 300 ರೂ ನಿಗಧಿ ಪಡಿಸಲಾಗಿದೆ ಎಂದರು.
ಜೂನಿಯರ್ ಸೋಲೋ 7 ರಿಂದ 14 ವರ್ಷದ ಮಕ್ಕಳಿಗೆ ಪ್ರಥಮ ನಗದು 8೦೦೦, ದ್ವಿತೀಯ 5೦೦೦ ಹಾಗೂ ತೃತೀಯ ಬಹಮಾನವಿದ್ದು ಇದರೊಂದಿಗೆ ಆರ್ಕಷಕ ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಇದಕ್ಕೆ ಪ್ರವೇಶ ಶುಲ್ಕ 5೦೦ ರೂ ನಿಗಧಿ ಪಡಿಸಲಾಗಿದೆ ಎಂದರು.
ಸೀನಿಯರ್ ಸೋಲೋ 14 ವರ್ಷ ಮೇಲ್ಪಟ್ಟವರಿಗೆ, ಪ್ರಥಮ ನಗದು 10೦೦೦, ದ್ವಿತೀಯ 7೦೦೦ ಹಾಗೂ ತೃತೀಯ ಬಹಮಾನವಿದ್ದು ಇದರೊಂದಿಗೆ ಆರ್ಕಷಕ ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಇದಕ್ಕೆ ಪ್ರವೇಶ ಶುಲ್ಕ 6೦೦ ರೂ ನಿಗಧಿ ಪಡಿಸಲಾಗಿದೆ ಎಂದರು.
ಗುಂಪು ನೃತ್ಯ ಇದರಲ್ಲಿ ಎಲ್ಲಾ ವಯಸ್ಸಿನವರು ಭಾಗವಹಿಸಬಹುದು. ಸುಮಾರು 8 ರಿಂದ 20 ಸದಸ್ಯರ ಗುಂಪು ಇರಬೇಕು, ಪ್ರಥಮ ನಗದು 3೦೦೦೦, ದ್ವಿತೀಯ 2೦೦೦೦ ಹಾಗೂ ತೃತೀಯ 1೦೦೦೦ ಬಹಮಾನವಿದ್ದು ಇದರೊಂದಿಗೆ ಆರ್ಕಷಕ ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಇದಕ್ಕೆ ಪ್ರವೇಶ ಶುಲ್ಕ 20೦೦ ರೂ ನಿಗಧಿ ಪಡಿಸಲಾಗಿದೆ ಎಂದರು.
ಯಾವುದೇ ರೀತಿ ನೃತ್ಯವನ್ನು ಮಾಡಬಹುದು, ಸೋಲೋಗೆ 2+1 ನಿಮಿಷ್, ಗ್ರೂಪ್ ನೃತ್ಯಕ್ಕೆ 5+2 ನಿಮಿಷ್, ನಿಗದಿ ಪಡಿಸಲಾಗಿದೆ. ಯಾವುದೇ ಅಪಾಯಕಾರಿ ವಸ್ತುಗಳನ್ನು ಡ್ಯಾನ್ಸ್‌ನಲ್ಲಿ ಬಳಸದಂತೆ ನಿರ್ಬಂಧಿಸಲಾಗಿದೆ ಎಂದರು.
ಹಾಗೇ ಜಿಲ್ಲೆಯ ಹಲವಾರು ಹಿರಿಯ ನೃತ್ಯ ಕಲಾವಿದರ ಸಂಕಷ್ಟದಲ್ಲಿದ್ದಾರೆ ಅವರಿಗೆ ಸರ್ಕಾರದಿಂದ ಯಾವುದಾದರೂ ಪ್ರಯೋಜನಗಳು ಸಿಗವಂತೆ ಒತ್ತಾಯಿಸಲಾಗುವುದು. ಕಲೆಗಾಗಿ ದುಡಿದಂತೆ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಸಂದರ್ಭದಲ್ಲಿ ಸಚಿನ್, ದೀಪು, ಸಿಂಧು, ಶಶಿ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
