ಶಿವಮೊಗ್ಗ : ನಾಡ ಹಬ್ಬ ದಸರಾ ಸಂಭ್ರಮ ಸಡಗರದಲ್ಲಿ ನಾನು ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ಸಚಿವ ಮಧುಬಂಗಾರಪ್ಪ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಜಿಲ್ಲೆಯ ಮೂರು ಕಡೆಯೆಂದರೇ ತೀರ್ಥಹಳ್ಳಿ ಸೊರಬ, ಶಿವಮೊಗ್ಗದಲ್ಲಿ ದಸರಾ ಸಂಭ್ರಮದಲ್ಲಿ ಖುದ್ದಾಗಿ ಪಾಲ್ಗೊಂಡಿರುವುದು ನನ್ನ ಸಂಭ್ರಮ ಹೆಚ್ಚಿಸಿದೆ ಹಾಗೇ ಎಲ್ಲರಿಗೂ ಚಾಮುಂಡೇಶ್ವರಿ ತಾಯಿ ಒಳ್ಳೆದು ಮಾಡಲಿ ಎಂದರು.
ಪ್ರಜಾಪ್ರಭುತ್ವ ಎತ್ತು ಹಿಡಿಯುವ ಕೆಲಸ ಪ್ರತಿಯೊಬ್ಬರು ಮಾಡಬೇಕು, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ತುಂಬಾ ಚನ್ನಾಗಿ ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು, ನಮ್ಮ ಸಂವಿಧಾನ ಎತ್ತು ಹಿಡಿಯಬೇಕು ಎಂಬುವುದೇ ಕಾಂಗ್ರೆಸ್ ಸರ್ಕಾರ ಉದ್ದೇಶವಾಗಿದೆ. ಆ ಉದ್ದೇಶದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದ್ದೇವೆ. ಉತ್ತಮ ಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಶೇಕಡಾ ೫೬ ರಷ್ಟು ಯಶಸ್ವಿಯಾಗಿದೆ ಎಂದರು.
![]()
ಅ.೭ರೊಳಗೆ ಸಂಪೂರ್ಣವಾಗಿ ಸಮೀಕ್ಷೆ ಮುಗಿಯಲಿದೆ. ಶೇಕಡಾವಾರು ೯೫% ಯಶಸ್ವಿಯಾಗಲಿದೆ ಎಂದರು. ಇದ್ದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಲಿದ ಎಂದರು.
ಜೋಷಿ ಇಲ್ಲಿ ಮಾತನಾಡದನ್ನು ಮೋದಿಗೆ ಎದುರಿಗೆ ಹೋಗಿ ಮಾತನಾಡಲಿ ಅದನ್ನು ಅನವಶ್ಯಕ ಜನರಲ್ಲಿ ಗೊಂದಲ ಸೃಷ್ಟಿಸುವ ಹೇಳಿಕೆ ನೀಡುವುದನ್ನು ಬಿಟ್ಟು ಸಾಮಾನ್ಯರ ಬಗ್ಗೆ ಸ್ವಲ್ಪ ಯೋಚಿಸಿ ಎಂದರು. ವಿರೋಧ ಪಕ್ಷದ ನಾಯಕರಾದ ಅಶೋಕ್ ಸಮೀಕ್ಷೆ ಡೇಟ್‌ವನ್ನು ಕಳ್ಳತನ ಮಾಡ್ತಾರೆ ಎನ್ನುವ ಯಾವುದಕ್ಕೆ ಏನು ಮಾತನಾಡುತ್ತಾರೋ ಎನ್ನುವುದೇ ಅವರಿಗೆ ತಿಳಿಯುವುದಿಲ್ಲ ಎಂದರು.
ಯಾರು ವಿರೋಧ ಮಾಡ್ತಾರೆ, ಅವರಿಗೆ ಶಿಕ್ಷೆ ಕೊಡಬೇಕು, ಸುಪ್ರೀಂ ಕೋರ್ಟ್ ಸುಮೋಟ್ ಪ್ರಕರಣ ದಾಖಲು ಮಾಡಿಕೊಳ್ಳಬೇಕು ಎಂದರು. ಜೋಷಿ ಮತ್ತು ವಿಜಯೇಂದ್ರಗೆ ಬಡವರು ಬಡವರಿಗೆ ಆಗಿ ಇರಬೇಕು ಎನ್ನುವ ಮಹಾದಾಸೆಯಿದೆ ಆದ್ದರಿಂದ ಬಾಯಿಗೆ ಬದ್ದಂತೆ ಮಾತನಾಡಿಕೊಳ್ಳುತ್ತಾರೆ ಎಂದರು.
ಜಾತಿ, ಧರ್ಮ ಮದ್ಯ ಬೆಂಕಿ ಹಚ್ಚುತ್ತಿದ್ದಾರೆ ಎನ್ನುವ ಹೇಳಿಕೆಗೆ ಜಾತಿ, ಧರ್ಮ ಹುಟ್ಟಿಹಾಕಿದ್ದು ಯಡಿಯೂರಪ್ಪನವರು ಅದನ್ನು ನಾವು ಸರಿದೂಗಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ವಿಜಯೇಂದ್ರ, ಅಶೋಕ್, ಜೋಷಿ ಸಾರ್ವಜನಿಕರ ಕ್ಷೇಮೆ ಕೇಳಬೇಕು. ಇಲ್ಲವೆಂದರೇ ಮುಂದಿನ ದಿನಗಳಲ್ಲಿ ನಿಮಗೆ ಸಾರ್ವಜನಿಕರೇ ಛೀಮಾರಿ ಹಾಕುವು ಸನ್ನಿವೇಶ ಉಂಟಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹಾಗೂ ಜೋಷ್ ನಿಮ್ಮ ಹೇಳಿಕೆ ವಾಪಸ್ಸು ತೆಗೆದುಕೊಳ್ಳಿ ಎಂದರು
ಸಿದ್ದರಾಮಯ್ಯ ಮಾಡಿದರೆ ಸಿದ್ದರಾಮಯ್ಯ ಸಮೀಕ್ಷೆ, ಮೋದಿ ಮಾಡಿದರೇ ಏನೂ ಅದು ಎಂದು ಪ್ರಶ್ನಿಸಿದರು., ಮಾನವೀಯತೆ ಮೆರೆಯುತ್ತಿರುವ ಮೊದಲ ಕೆಲಸ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಗುವುದು ಎಂದರು.
ಬಡವರನ್ನು ತುಳಿಯುವುದು ಬಿಜೆಪಿ ಕೆಲಸ , ಸಂವಿಧಾನ ಎತ್ತು ಹಿಡಿಯವುದು ಬಡವರಿಗೆ ಕೆಲಸ ಮಾಡುವುದು ಕಂಡರೇ ಇವರಿಗೆ ಹೊಟ್ಟೆ ಉರಿ ಆರಂಭವಾಗುತ್ತದೆ. ಕಾಂಗ್ರೆಸ್ ಮೊದಲಿನಿಂದ ಹಿಂದುಳಿದ ವರ್ಗದವರ ಪರವಾಗಿ ಧ್ವನಿಯಾಗಿ ಕೆಲಸ ನಿರ್ವಹಿಸುತ್ತದೆ ಎಂದರು.
ಸಮೀಕ್ಷೆಯಲ್ಲಿ ೧ ಲಕ್ಷ ೫೬ ಸಾವಿರ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕರಿಗೆ ಸನ್ಮಾನ ಮಾಡಿದ್ದು. ಅಂಬೇಡ್ಕರ್‌ಗೆ ಸನ್ಮಾನ ಮಾಡಿದಷ್ಟು ಖುಷಿ ಅಯ್ತು ಎಂದರು.ರಾಜಕೀಯ ವಿಚಾರವಾಗಿ ಏನೂ ಮಾತನಾಡುವುದಿಲ್ಲ, ಹೈಕಮಾಂಡ್ ಹೇಳಿದ್ದಾರೆ. ಬಾಯಿ ಮುಚ್ಚಿಕೊಂಡು ಇರೀ ಎಂದು ಅದರಂರೆ ನಡೆದುಕೊಳ್ಳುತ್ತಾನೆ. ನಮ್ಮ ಸರ್ಕಾರ ಬಡವರ ಪರವಾಗಿ ಇದೆ. ಮುಂದೆ ಬಡವರ ಪರವಾಗಿ ಕೆಲಸ ಮಾಡುತ್ತೇ ಎಂದರು.\
ಸಂಸದರಾದ ರಾಘವೇಂದ್ರ ನೆಟ್ ವರ್ಕ್ ಮೇಲೆ ಕುಳಿತು ಕೊಂಡು ೧೦ ವರ್ಷವಾಯಿತು. ಆದರೂ ಕೂಡ ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಸರಿಪಡಿಸಲು ಸಾಧ್ಯವಾಗಿಲ್ಲ, ಒಟ್ಟಾಗಿ ಕಾರ್ಯನಿರ್ವಹಿಸಲು ಅವರು ರೈಲು ಬಿಡುವು, ನೆಟ್‌ವರ್ಕ್ ಹತ್ತುವುದು ನಿಲ್ಲಿಸಿದ ಮೇಲೆ ಎಂದರು.
ದೇಶ ದ್ರೋಹೀಗಳೇ ಬಿಜೆಪಿಯವರು, ಇದು ಸಮಾನತೆಯ ಹಕ್ಕು ಸಾಮಾಜಿಕ ಮತ್ತು ಶೈಕ್ಷಣಿಕ ಸಮಸ್ಯೆಯಿಂದ ಸಾಧ್ಯವಾಗತ್ತದೆ ಎಂದರು. ಬಿಜೆಪಿ ಪ್ರಣಾಳಿಕೆ ಯಲ್ಲಿ ಅಂಬಾನಿ ಅದಾನಿ ಇಬ್ಬರೇ ಇರುವುದು, ಮಾನವೀಯತೆಗೆ ಗೌರವ ಕೊಟ್ಟಿದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ, ಸಮಾನತೆ ತರಬೇಕು ಎನ್ನುವುದೇ ನಮ್ಮ ಉದ್ದೇಶ ಎಂದರು.
ಸರ್ವೇ ಜನಾಂಗದ ಶಾಂತಿಯ ತೋಟ ಎನ್ನುವುದು ನಮ್ಮ ದ್ಯೇಯ, ಸಮಾನತೆ ಬೇಡ ಎನ್ನುವುದಕ್ಕೆ ವಿರೋಧ ವ್ಯಕ್ತ ಪಡಿಸಿದವರಿಗೆ ತಕ್ಕ ಉತ್ತರ ಕೊಟ್ಟಿದ್ದೇವೆ. ಆರ್‌ಎಸ್‌ಎಸ್ ರವರು ಈ ದೇಶದ ಪ್ರಜೆಗಳು, ಅಂದುಕೊಂಡಿದ್ದೇನೆ ಅದನ್ನು ಶಾಶ್ವತವಾಗಿ ಕಾಪಾಡಿಕೊಳ್ಳಲಿ ಎಂದರು.
ಕಾಂಗ್ರೆಸ್ ಯೋಜನೆಗಳನ್ನು ವಿರೋಧ ಮಾಡುವುದು ಮತ್ತು ಅದನ್ನು ಕಾಫಿ ಮಾಡುವುದು ಬಿಜೆಪಿ ನಾಯಕರ ಗುಟ್ಟಾಗಿದೆ ಎಂದರು.
ವೋಟ್‌ಚೋರಿ ನಾಳೆ ಶಿವಮೊಗ್ಗ ಹೋರಾಟ ನಡೆಯಲಿದೆ , ಆ.೭ ರ ಒಳಗೆ ಸಮೀಕ್ಷೆ ನಡೆಯಲಿದೆ ದಿನಾಂಕ ಮುಂದೆ ಹೋಗಲ್ಲ ಎಂದರು.
ಸಂದರ್ಭದಲ್ಲಿ ಆಯನೂರು ಮಂಜುನಾಥ್, ರಮೇಶ್ ಶೆಟ್ಟಿ ಶಂಕರಘಟ್ಟ, ಆರ್.ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ಚಂದ್ರಭೂಪಾಲ್, ಹಾಲಪ್ಪ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.


