ಕೇಂದ್ರ ಸರ್ಕಾರ ದಸರಾ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ದಸರಾ ಹಬ್ಬದ ಹೊತ್ತಲಿ ಸರ್ಕಾರಿ ನೌಕರರಿಗೆ ಸರ್ಕಾರಿ ಬಂಪರ್ ಗಿಫ್ಟ್ ನೀಡಿದ್ದು, ಸರ್ಕಾರವು ತನ್ನ ಉದ್ಯೋಗಿಗಳಿಗೆ ಬೋನಸ್ ನೀಡಲಿದೆ. ಆದಾಯ ಇಲಾಖೆ ಗ್ರೂಪ್ ಸಿ ಮತ್ತು ನಾನ್-ಗೆಜೆಟೆಡ್ ಗ್ರೂಪ್ ಬಿ ಉದ್ಯೋಗಿಗಳಿಗೆ ಉತ್ಪಾದಕತೆ-ಸಂಬಂಧಿತ ಬೋನಸ್ ರೂಪದಲ್ಲಿ 30 ದಿನಗಳ ಸಂಬಳಕ್ಕೆ ಸಮಾನವಾದ ಅಡ್-ಹಾಕ್ ಬೋನಸ್ ಅನ್ನು ಘೋಷಿಸಿದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿಯನ್ನ ಸರ್ಕಾರ ನೀಡಿದೆ. ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ್ದು,
ಕೇಂದ್ರ ಸರ್ಕಾರಿ ನೌಕರರ ಹಬ್ಬದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರೊಡಕ್ಟ್ವಿಟಿ ಆಧಾರಿತ ಬೋನಸ್ ಅನ್ನು ಘೋಷಿಸಿದೆ. ಕೇಂದ್ರ ಸರ್ಕಾರಿ ಗ್ರೂಪ್ ಸಿ ಮತ್ತು ನಾನ್-ಗೆಜೆಟೆಡ್ ಗ್ರೂಪ್ ಬಿ ಉದ್ಯೋಗಿಗಳು 2024-25ನೇ ಸಾಲಿಗೆ 30 ದಿನಗಳ ಸಂಬಳಕ್ಕೆ ಸಮಾನವಾದ ಅಡ್-ಹಾಕ್ ಬೋನಸ್ ಅನ್ನು ಪಡೆಯುತ್ತಾರೆ ಎಂದು ಹಣಕಾಸು ಸಚಿವಾಲಯ ಸೋಮವಾರ ಆದೇಶ ಹೊರಡಿಸಿದೆ.
ಕೇಂದ್ರದ ಸೂಚನೆ ಪಾಲಿಸದ BMRCL ಹಣಕಾಸು ಸಚಿವಾಲಯ ಸೋಮವಾರ ಹೊರಡಿಸಿದ ಆದೇಶದಲ್ಲಿ 2024-25 ರ ಬೋನಸ್ ಮೊತ್ತವನ್ನು 6,908 ಕ್ಕೆ ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ. ಮಾರ್ಚ್ 31, 2025 ರವರೆಗೆ ಸೇವೆಯಲ್ಲಿ ಉಳಿದಿರುವ ಮತ್ತು ಕನಿಷ್ಠ ಆರು ಸತತ ತಿಂಗಳು ಕೆಲಸ ಮಾಡಿದ ಎಲ್ಲಾ ಉದ್ಯೋಗಿಗಳಿಗೆ ಈ ಬೋನಸ್ ನೀಡಲಾಗುತ್ತದೆ. ಯಾರಾದರೂ ಪೂರ್ಣ ವರ್ಷ ಕೆಲಸ ಮಾಡದಿದ್ದರೆ, ಬೋನಸ್ ಅನ್ನು ಅನುಪಾತದ ಆಧಾರದ ಮೇಲೆ ಪಾವತಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಗ್ರೂಪ್ ’ಸಿ’ ಯಲ್ಲಿರುವ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಗ್ರೂಪ್ ’ಬಿ’ ಯಲ್ಲಿರುವ ಎಲ್ಲಾ ನಾನ್-ಗೆಜೆಟೆಡ್ ಕೇಂದ್ರ ಸರ್ಕಾರಿ ನೌಕರರಿಗೆ ಉತ್ಪಾದಕತೆ ಆಧಾರಿತ ಬೋನಸ್ ಯೋಜನೆಯ ವ್ಯಾಪ್ತಿಗೆ ಒಳಪಡದವರಿಗೆ 2024-25 ರ ಲೆಕ್ಕಪತ್ರ ವರ್ಷಕ್ಕೆ 30 ದಿನಗಳ ವೇತನಕ್ಕೆ ಸಮಾನವಾದ ಉತ್ಪಾದಕತೆ ಆಧಾರಿತ ಬೋನಸ್ (ಅಡ್-ಹಾಕ್ ಬೋನಸ್) ನೀಡಲು ರಾಷ್ಟ್ರಪತಿಗಳ ಅನುಮೋದನೆಯನ್ನು ತಿಳಿಸಬೇಕೆಂದು ಸಚಿವಾಲಯವು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಕಚೇರಿ ಜ್ಞಾಪಕ ಪತ್ರದಲ್ಲಿ ತಿಳಿಸಿದೆ.
ಆದಾಯ ಇಲಾಖೆ ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ, ಬೋನಸ್ ಗ್ರೂಪ್ ’ಸಿ’ ನಲ್ಲಿರುವ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಗ್ರೂಪ್ ’ಬಿ’ ಯಲ್ಲಿರುವ ಎಲ್ಲಾ ನಾನ್-ಗೆಜೆಟೆಡ್ ಉದ್ಯೋಗಿಗಳಿಗೆ ಅನ್ವಯಿಸುತ್ತದೆ, ಅವರು ಯಾವುದೇ ಉತ್ಪಾದಕತೆ ಲಿಂಕ್ಡ್ ಬೋನಸ್ (PLB) ಯೋಜನೆಯಡಿಯಲ್ಲಿ ಒಳಗೊಳ್ಳುವುದಿಲ್ಲ. ಈ ಆದೇಶವು ಕೇಂದ್ರ ಪ್ಯಾರಾ-ಮಿಲಿಟರಿ ಪಡೆಗಳು, ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸರ್ಕಾರದ ವೇತನ ಮಾದರಿಯನ್ನು ಅನುಸರಿಸುವ ಕೇಂದ್ರಾಡಳಿತ ಪ್ರದೇಶಗಳ ಆಡಳಿತದ ನೌಕರರಿಗೂ ಅನ್ವಯಿಸುತ್ತದೆ. ಬೋನಸ್ ಅನ್ನು ಗರಿಷ್ಠ ಮಾಸಿಕ ವೇತನ 7,000 ಮೇಲೆ ಲೆಕ್ಕಹಾಕಲಾಗುತ್ತದೆ. ಉದಾಹರಣೆ: 7,000*3030.4=6,907.89 (6,908 ಕ್ಕೆ ಪೂರ್ಣಾಂಕಗೊಳಿಸಲಾಗಿದೆ). ಸರ್ಕಾರದ ಈ ನಿರ್ಧಾರವು ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಭದ್ರತಾ ಪಡೆಗಳ ಸಿಬ್ಬಂದಿಗೆ ನೇರವಾಗಿ ಪ್ರಯೋಜನವಾಗಲಿದೆ.
