ಶಿವಮೊಗ್ಗ : ಪ್ರೀತ್ಸೆ ಅಂತ ಹೇಳಿ.. ಚಾನೆಲ್‌ಗೆ ತಳ್ಳಿ ಬಿಟ್ಟೆನಾ…! ಹೌದು ಅಂತಹ ಒಂದು ಘಟನೆ ಶಿವಮೊಗ್ಗದ ಭದ್ರಾವತಿಯಲ್ಲಿ ನಡೆದಿದೆ. ಪ್ರೀತ್ಸೆ… ಪ್ರೀತ್ಸೆ ಅಂತ ದಿನ ನಿತ್ಯ ಜೀವ ತಿನ್ನುತ್ತಿದ್ದ, ಮದುವೆ ಅಗು ಅಂತ ಇದ್ದ, ಆದರೆ ಹುಡುಗಿ ಇಷ್ಟವಿಲ್ಲದಿದ್ದರೂ ನಿನ್ನ ಕೆಲವು ಪೋಟೋಗಳು ನನ್ನ ಬಳಿಯಿದೆ ಎಂದು ಹೆದರಿಸುತ್ತಿದ್ದ ಅದನ್ನೇ ಬಂಡಾಳ ಮಾಡಿಕೊಂಡು ಕೊಲೆ ಮಾಡಿಬಿಟ್ಟ ಎಂದು ತಾಯಿ ಭದ್ರಾವತಿ ಠಾಣೆ ದೂರು ದಾಖಲಿಸಿದ್ದಾರೆ.
ಚಾನಲ್‌ನಲ್ಲಿ ನಾಪತ್ತೆಯಾಗಿದ್ದ ಯುವತಿ ಮಂಗಳವಾರ ರಾತ್ರಿ ಶವವಾಗಿ ಪತ್ತೆಯಾದ ಬೆನ್ನಲ್ಲೇ ಭದ್ರಾವತಿಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಯುವಕ ಹಾಗು ಯುವಕನ ತಂದೆಯ ವಿರುದ್ಧ ದೂರು ದಾಖಲಾಗಿದ್ದು ಯುವಕನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಬಂಧಿಸಲಾಗಿದೆ.
ಪ್ರೀತಿ ಪ್ರೇಮ ಎಂದು ಈ ಹಿಂದೆ ಸ್ಥಳೀಯ ಮಾಹಿತಿಯಿಂದ ಸುದ್ದಿ ಮಾಡಲಾಗಿತ್ತು ಆದರೆ ಎಫ್‌ಐಆರ್ ನಲ್ಲಿ ಯುವತಿ ಮಹಾಲಕ್ಷ್ಮಿ ಯಾನೆ ಸ್ವಾತಿಯನ್ನ ಪ್ರೀತಿಸುವಂತೆ ಯುವಕ ಸೂರ್ಯ ಬೆನ್ನುಬಿದ್ದು ಕಿರುಕುಳ ನೀಡಿದ್ದರ ಪರಿಣಮದಿಂದಾಗಿ ಯುವತಿಯ ಜೀವ ಹಾರಿ ಹೋಗಿದೆ. ಮತ್ತು ಈ ಕಿರುಕುಳಕ್ಕೆ ಯುವಕ ತಂದೆಯೂ ಕುಮ್ಮಕ್ಕು ನೀಡಿದ್ದರಿಂದ ತಂದೆ ಮತ್ತು ಮಗನ ಒಳಸಂಚುವಿನಿಂದ ಯುವತಿ ಸಾವನ್ನಪ್ಪಿರುವುದಾಗಿ ಎಫ್‌ಐಆರ್ ದಾಖಲಾಗಿದೆ.
ಯುವಕ ಸೂರ್ಯ ಯುವತಿ ಸ್ವಾತಿಗೆ ಕಾಲೇಜಿಗೆ ಯೋಗುವಾಗ ಬರುವಾಗ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಈ ವಿಷಯ ಮನೆಯಲ್ಲಿ ಗೊತ್ತಾಗಿ ೬ ತಿಂಗಳ ಹಿಂದೆ ಯುವತಿಯ ಮನೆಯವರು ಯುವಕನ ತಂದೆ ಸ್ವಾಮಿ ಮತ್ತು ಸೂರ್ಯನಿಗೆ ಬುದ್ದಿವಾದ ಹೇಳಿ ಪ್ರೀತಿ ಪ್ರೇಮ ಬೇಡ ಎಂದು ಬುದ್ದಿವಾದ ಹೇಳಿದ್ದರು. ಆದರೆ ತಂದೆ ಸ್ವಾಮಿಯ ಕಾರಣದಿಂದ ಯುವತಿಗೆ ಸೂರ್ಯ ಕಾಟ ಮುಂದುವರೆದಿತ್ತು.
ಸೂರ್ಯ ಯುವತಿಗೆ ನಿನ್ನ ಆಸ್ಲೀಲ ಫೋಟೊ ನನ್ನ ಬಳಿಯಿದೆ. ನೀನು ಮದುವೆಯಾಗದೆ ಹೋದರೆ ಸಾಮಾಜಿಕ ಜಾಲತಾಣದಲ್ಲಿ ಬಿಡುವುದಾಗಿ ಹೆದರಿಸಿದ್ದ. ಸೆ.೨೧ ರಂದು ಮನೆಯಲ್ಲಿದ್ದ ಸ್ವಾತಿ ಕಾಣೆಯಾಗಿದ್ದಳು. ಸ್ವಾತಿಯ ತಾಯಿ ಸೂರ್ಯನ ಮನೆಗೆ ಹೋಗಿ ತಂದೆ ಸ್ವಾಮಿಗೆ ಮಗಳು ಕಾಣೆಯಾಗಿರುವುದಾಗಿ ಹೇಳಿಕೊಂಡಿದ್ದಳು. ಅದಕ್ಕೆ ಸ್ವಾಮಿಯವರು ಅವ್ಯಾಚ್ಯ ಶಬ್ದಗಳಿಂದ ಬೈದಿರುವುದಾಗಿ ಆರೋಪಿಸಲಾಗಿದೆ. ನಂತರ ವಿಚಾರಿಸಿದಾಗ ಸೂರ್ಯ ಸ್ವಾತಿಯನ್ನ ಬೈಕ್ ನಲ್ಲಿ ಕೂರಿಸಿಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.
ಸೆ.೨೧ ರಿಂದ ಚಾನೆಲ್ ಬಳಿ ಕಾದುಕುಳಿತಿರುವುವಾಗ ಸೆ.೨೩ ರಂದು ಸ್ವಾತಿ ಚಾನೆಲ್ ನಲ್ಲಿ ಶವವಾಗಿ ತೇಲಿ ಬಂದಿದ್ದಾಳೆ. ಸೂರ್ಯ ಬಲವಂತವಾಗಿ ಕರೆದುಕೊಂಡು ಹೋಗಿ ಮದುವೆಗೆ ಒಪ್ಪದ ಸ್ವಾತಿಯನ್ನ ಸಂಚು ನಡೆಸಿ ಬಲವಂತವಾಗಿ ಬೈಕ್ ನಲ್ಲಿ ಕೂರಿಸಿಕೊಂಡು ಹೋಗಿ ಭದ್ರ ನಾಲೆಗೆ ತಳ್ಳಿ ಕೊಲೆ ಮಾಡಿರುವುದಾಗಿ ಮೃತ ಸ್ವಾತಿ ತಾಯಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಸ್ಪತ್ರೆಗೆ ದಾಖಲಾಗಿದ್ದ ಸೂರ್ಯನನ್ನ ಡಿಸ್ಚಾರ್ಜ್ ಮಾಡಿ ಬುಧವಾರ ಬೆಳಗಿನ ಜಾವ ಪೊಲೀಸರು ಬಂಧಿಸಿದ್ದಾರೆ. ಸೂರ್ಯನ ತಂದೆ ಸ್ವಾಮಿ ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ.
Subscribe to Updates
Get the latest creative news from FooBar about art, design and business.
