ಶಿವಮೊಗ್ಗ : ಶಿವಮೊಗ್ಗ ದಸರಾ -೨೦೨೫ರ ಚಲನಚಿತ್ರ ದಸರಾವನ್ನು ಸೆ. ೨೪ ರಂದು ಬೆಳಗ್ಗೆ ೯.೩೦ಕ್ಕೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪರವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಶರಣ್ ಹಾಗೂ ನಟಿ ಕು. ಕಾರಣ್ಯರಾಮ್ ಪಾಲ್ಗೊಳ್ಳಲಿದ್ದಾರೆ. ಹಾಗೂ ಬೆ. ೧೧.೩೦ಕ್ಕೆ ಚಲನಚಿತ್ರ ಸಂಪನ್ಮೂಲ ವ್ಯಕ್ತಿಗಳಿಂದ ಚಲನಚಿತ್ರ ರಸಗ್ರಹಣ ಕಾರ್ಯಗಾರವನ್ನು ಏರ್ಪಡಿಸಲಾಗಿದ್ದು, ನಿರ್ದೇಶಕ, ನಿರ್ಮಾಪಕ ಹಾಗೂ ಚಿತ್ರಸಾಹಿತಿ ಸಾಯಿ ಪ್ರಕಾಶ್ ಉದ್ಘಾಟಿಸಲಿದ್ದಾರೆ.
ಶಿವಮೊಗ್ಗ : ಮಹಾನಗರ ಪಾಲಿಕೆ ವತಿಯಿಂದ ಸೆ.೨೪ ಬುಧವಾರದಂದು ಪರಿಸರ ದಸರಾವನ್ನು ಆಚರಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಪಾಲಿಕೆ ಯೊಂದಿಗೆ
ಶಿವಮೊಗ್ಗ ನಗರದ ಪರಿಸರಾಸಕ್ತ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯ ಲ್ಲಿ ಭಾಗವಹಿಸಲಿದ್ದಾರೆ.
ಸೈಕಲ್ ಜಾಥಾ ಹಾಗೂ ಹಸಿರೀಕಣ ಕಾರ್ಯದ ಮೂಲಕ ಪರಿಸರ ದಸರಾ-೨೦೨೫ನ್ನು ಮಾದರಿ ಹಾಗೂ ಹೆಚ್ಚು ಅರ್ಥಪೂರ್ಣವಾಗಿ ಆಚರಿಸುವ ಪಾಲಿಕೆಯ ನಿರ್ಧಾರವನ್ನು ನಗರದ ವಿವಿಧ ಸಂಘ ಸಂಸ್ಥೆಗಳು ಸ್ವಾಗತಿಸಿವೆ.
ಬುಧವಾರ ಬೆಳಿಗ್ಗೆ ೦೭.೩೦ಕ್ಕೆ ಮಹಾನಗರಪಾಲಿಕೆ ಆವರಣದಲ್ಲಿ ಬೃಹತ್ ಸೈಕಲ್ ಜಾಥಾಕ್ಕೆ ಚಾಲನೆ ದೊರೆಯಲಿದ್ದು,
ಸೈಕಲ್ ಜಾಥಾವು ಮಹಾನಗರ ಪಾಲಿಕೆ ಆವರಣ ದಿಂದ ಸೀನಪ್ಪ ಶೆಟ್ಟಿ ವೃತ್ತ, ಅಂಬೇಡ್ಕ ರ್ ವೃತ್ತ, ಕುವೆಂಪು ರಸ್ತೆ, ಪ್ರವಾಸಿ ಮಂದಿರ ರಸ್ತೆ, ಆಯನೂರು ಗೇಟ್, ದ್ರೌಪದಮ್ಮ ವೃತ್ತ, ರಾಮಕೃಷ್ಣ ಶಾಲೆ ಮುಖಾಂತರ ಮಹಿಳಾ ಪಾಲಿಟೆಕ್ನಿಕ್ ಹಿಂಭಾಗದ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಬಳಿ ಸೇರುವುದು.
ನಂತರ ಈ ಸ್ಥಳದಲ್ಲಿ ಒಂದು ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಪರಿಸರ ತಜ್ಞ ಡಾ. ಶ್ರೀಪತಿ ಎಲ್.ಕೆ. ರವರು ಚಾಲನೆ ನೀಡಲಿದ್ದಾರೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಅಧಿಕಾರಿ ಶಿಲ್ಪಾ ಕೆ.ರವರು, ಪಾಲಿಕೆ ಅಧಿಕಾರಿಗಳು , ಜನಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ.ಶಿವಮೊಗ್ಗ : ಹಿರಿಯ ಪತ್ರಿಕಾ ವಿತರಕರರಾದ ದೇವರಾಜ ಶೆಟ್ಟಿ ಇಂದು ವಯೋಸಹಜದಿಂದ ನಿಧನರಾಗಿದ್ದಾರೆ. ಸುಮಾರು ೫೦ ವರ್ಷದಿಂದ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಇಬ್ಬರು ಮಕ್ಕಳು, ಪತ್ನಿಯನ್ನು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಇವರ ಅಂತ್ಯ ಸಂಸ್ಕಾರ ಸೆ.೨೩ ಸಂಜೆ ೫ಕ್ಕೆ ರೋಟರಿ ಶವಗಾರದಲ್ಲಿ ನೆರವೇರಿತ್ತು. ಇವರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷರಾದ ಎನ್, ಮಾಲತೇಶ್, ಉಪಾಧ್ಯಕ್ಷರಾದ ರಾಮು ಜಿ, ನಾಗಭೂಷಣ್, ಪ್ರಧಾನ ಕಾರ್ಯದರ್ಶಿಯಾದ ಮುಕ್ತಾ ರ್ ಹಮದ್( ನಜೀರ್, ಹುಲಿಗಿ ಕೃಷ್ಣ, ಪರಶುರಾಮ್, ಮಲ್ಲಿಕಾರ್ಜುನ್, ಗಜೇಂದ್ರ, ವಿನಯ್ ವಾಲಿ, ರಾಜ ವರ್ಮ ಜೈನ್,ಹರ್ಷ, ಪಾರ್ಥಿಬನ್ , ಯುವರಾಜ್, ಉಮೇಶ್, ಸತೀಶ್, ಯೋಗೇಶ್, ಮಂಜುನಾಥ್, ಪ್ರವೀಣ, ಪ್ರಾಣೇಶ್, ಮೌಲಾನಾ, ಪ್ರಶಾಂತ್ ಸಂತಾಪ ಸೂಚಿಸಿದ್ದಾರೆ.
Subscribe to Updates
Get the latest creative news from FooBar about art, design and business.
