ಶಿವಮೊಗ್ಗ : ಈ ಬಾರಿ ಪಾಲಿಕೆಯ ಆಶ್ರಯದಲ್ಲಿ ನಡೆಯುತ್ತಿ ರುವ ರಂಗದಸರಾ ಕಾರ್ಯಕ್ರಮವನ್ನು ಅತ್ಯಂತ ವಿಶಿಷ್ಟ-ವಿಭಿನ್ನ, ಅರ್ಥ ಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕಲಾವಿದರ ಒಕ್ಕೂಟದ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ರಂಗದಸರಾ ಕಾರ್ಯಕ್ರಮದಲ್ಲಿ ಒಟ್ಟು ೩೦ ನಾಟಕ ತಂಡಗಳು ೪೧ ಪ್ರದರ್ಶನಗಳನ್ನು ಆಯೋಜಿಸಿವೆ. ಜೊತೆಗೆ ರಂಗಗೀ ತೆ ಹಾಗೂ ಉಪನ್ಯಾಸ ಸೇರಿ ೫೨ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸುಮಾರು ೩೦೦ ಕಲಾವಿದರು ಈ ನಾಟಕ ಗಳಲ್ಲಿ ಅಭಿನಯಿಸಲಿದ್ದಾರೆ ಎಂದರು.
ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿಗಳು, ಕುಟುಂಬಗಳು, ಸಮುದಾಯಗಳು ಇದರಲ್ಲಿ ಭಾಗವಹಿಸುತ್ತಿವೆ. ಕುಟುಂಬ ರಂಗ ಎಂಬ ಕಾರ್ಯಕ್ರಮವನ್ನು ಈ ಬಾರಿಯೂ ಮುಂದುವ ರಿಸಲಾಗಿ ದೆ. ೧೫ ಕುಟುಂಬಗಳ ಮನೆಗಳ ಬಳಿಯೇ ನಾಟಕ ಪ್ರದರ್ಶನವಿ ರುತ್ತದೆ. ಇವುಗಳಲ್ಲಿ ಆಯ್ಕೆಮಾಡಿದ ನಾಲ್ಕು ನಾಟಕಗಳನ್ನು ಕುಟುಂಬ ರಂಗಮಂದಿರದಲ್ಲಿ ಪ್ರದರ್ಶಿಸಲಾ ಗುವುದು. ಶಾಲಾ ಶಿಕ್ಷಕರಿಗೆ ಪ್ರಸಾದನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಕರ್ತವ್ಯರಂಗ ಎಂಬ ನೂತನ ಕಾರ್ಯಕ್ರಮವನ್ನು ಈ ಬಾರಿ ಸೇರಿಸಲಾಗಿದೆ. ವಾಹನ ಮಾರುಕಟ್ಟೆ, ರಿಪೇರಿ ಕ್ಷೇತ್ರ, ಶಿಕ್ಷಕರು, ಅಲೆಮಾರಿ ಸಮುದಾಯಗಳಿಗೆ ಒಂದು ಕಿರುನಾಟಕ ಕಲಿಸಲಾಗುತ್ತದೆ ಎಂದು ತಿಳಿಸಿದರು.
ಸೆ. ೨೪ರಂದು ಬೆಳಿಗ್ಗೆ ೧೦.೩೦ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ಖ್ಯಾತ ರಂಗ ನಿರ್ದೇಶಕ ಗಣೇಶ್ ಮಂದಾರ್ತಿ ಅವರು ರಂಗ ದಸರಾ ಉದ್ಘಾಟಿಸು ವರು. ನಂತರ ಕಾಲೇಜು ವಿದ್ಯಾರ್ಥಿ ಗಳು ಅಭಿನಯಿಸುವ ಮೂರು ನಾಟಕಗಳು ಪ್ರದರ್ಶನವಾಗುವವು. ಗೋಪಾಳದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ತಂಡವು ಕೆ.ವೈ. ನಾರಾಯಣ ಸ್ವಾಮಿ ಅವರ ರಚನೆ, ಮಾನಸ ಸಂತೋಷ್ ಅವರ ನಿರ್ದೇಶನದಲ್ಲಿ ಬಾರಮ್ಮ ಭಾಗೀರಥಿ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ತಂಡವು ಶ್ರೀನಿವಾಸ ವೈದ್ಯ ಅವರ ರಚನೆ, ವಿಜಯ್ ನೀನಾಸಂ ಅವರ ನಿರ್ದೇಶನದಲ್ಲಿ ದತ್ತೋಪಂತದ ಪತ್ತೆದಾರಿ, ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ನಡೆಯಲಿದ ಎಂದರು.
ಸೆ.೨೫ರಂದು ಶಿವಮೊಗ್ಗದ ವಿವಿಧ ಸ್ಥಳಗಳಲ್ಲಿ ಡಿವಿಎಸ್ (ಸ್ವ) ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಮಟೆ ಜಗದೀಶ್ ರಚನೆ ಹಾಗೂ ಗಿರಿಧರ ಎಂ. ದಿಣ್ಣೆಮನೆ ಅವರ ನಿರ್ದೇಶನದಲ್ಲಿ ಬಾಲ್ಯಜೋಪಾನ ಬೀದಿ ನಾಟಕ ಪ್ರದರ್ಶನ ಮಾಡುವರು. ಸಂಜೆ ೬ ಗಂಟೆಗೆ ಸುವರ್ಣ ಸಂಸ್ಕೃತಿ ಭವನದಲ್ಲಿ ಕರ್ತವ್ಯ ರಂಗ ಕಾರ್ಯಕ್ರಮ ನಡೆಯುವುದು. ಶಿವಮೊಗ್ಗದ ಶಿಕ್ಷಕರು ಡಾ. ಸಾಸ್ತೆಹಳ್ಳಿ ಸತೀಶ್ ಅವರ ರಚನೆ, ಗಂಗಮ್ಮ ಅವರ ನಿರ್ದೇಶನದಲ್ಲಿ ಆನು ಒಲಿದಂತೆ ಹಾಡುವೆ ನಾಟಕ, ಅಲೆಮಾರಿ ಕ್ಯಾಂಪಿನ ನಿವಾಸಿಗಳು ಮಂಜುನಾಥ್ ಎ.ಸಿ. ಅವರ ನಿರ್ದೇ ಶನದಲ್ಲಿ ಭಾಸ ಮಹಾಕವಿಯ ಮಧ್ಯಮ ವ್ಯಾಯೋಗ ನಾಟಕ, ಅಸಂಘಟಿತ ಕಾರ್ಮಿಕ ವರ್ಗದವರು ಬಿ.ಆರ್. ರೇಣುಕಪ್ಪ ಅವರ ನಿರ್ದೇಶನದಲ್ಲಿ ವಿ.ಎನ್. ಅಶ್ವತ್ ಅವರ ಶ್ರೀಕೃಷ್ಣ ಸಂಧಾನ ನಾಟಕ ಪ್ರದರ್ಶನ ಮಾಡುವರು. ಸಂಜೆ ೬.೩೦ಕ್ಕೆ ಪೊಲೀಸ್ ಸಮುದಾಯ ಭವನದಲ್ಲಿ ಟಿ.ಜೆ. ನಾಗರತ್ನ ಮತ್ತು ತಂಡದ ವರು ರಂಗಗೀತೆ ಹಾಡಲಿದ್ದು, ಎಸ್ಪಿ ಮಿಥುನ್ ಕುಮಾರ್ ಉದ್ಘಾಟಿ ಸುವರು ಎಂದರು.

ಸೆ. ೨೬ರಂದು ಬೆಳಿಗ್ಗೆಯಿಂದ ಶಿವಮೊಗ್ಗದ ವಿವಿಧೆಡೆ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ತಂಡವು ಹಲವು ಲಾವಣಿ ಹಾಗೂ ಜಾನಪದ ಕಥೆಯಾದಾರಿತ ಬೀದಿ ನಾಟಕ ಹಲಗಲಿ ನಾಟಕವನ್ನು ಚಂದನ್ ಎನ್. ಅವರ ನಿರ್ದೇಶನದಲ್ಲಿ ಪ್ರದರ್ಶಿಸುವರು. ಸಂಜೆಯಿಂದ ಶಿವಮೊಗ್ಗದ ಕುವೆಂಪು ರಂU ಮಂದಿರದಲ್ಲಿ ರಂಗ ಛಾಯಾಚಿತ್ರ ಪ್ರದರ್ಶನ, ರಂಗ ಪರಿಕರಗಳ ಪ್ರದರ್ಶನ ನಡೆಯುವುದು. ನಂತರ ಕಲಾಜ್ಯೋತಿ ತಂಡವು ಹರಿಗೆ ಗೋಪಾಲಸ್ವಾಮಿ ಅವರ ನಿರ್ದೇಶನದಲ್ಲಿ ಪ್ರೊ. ಬಿ.ಎಸ್. ಚಂದ್ರಶೇಖರ್ ಅವರ ಪರಹಿತ ಪಾಷಾಣ ನಾಟಕ ಪ್ರದರ್ಶನ ಮಾಡುವರು. ಸಂಜೆ ೬.೩೦ಕ್ಕೆ ಕೋಟೆ ಮಾರಿಕಾಂಬ ದೇವಾಲಯ ಆವರಣದಲ್ಲಿ ರಂಗಗೀತೆ ಕಾರ್ಯಕ್ರಮ ನಡೆಯುವುದು ಎಂದು ತಿಳಿಸಿದರು.
ಸೆ ೨೭ರಂದು ಶಿವಮೊಗ್ಗದ ವಿವಿಧ ಸ್ಥಳದಲ್ಲಿ ಮೈತ್ರಿ ಕಾಲೇಜ್ ಆಫ್ ಎಜ್ಯುಕೇಷನ್ ತಂಡವು ಮಂಜು ರಂಗಾಯಣ ಅವರ ನಿರ್ದೇಶನದಲ್ಲಿ ಆರೋಗ್ಯ ನಮ್ಮ ಕೈಯಲ್ಲಿ ಎಂಬ ಬೀದಿ ನಾಟಕವನ್ನು ಶಿವಮೊಗ್ಗದ ವಿವಿಧೆಡೆ ಪ್ರದರ್ಶನ ಮಾಡುವರು. ಸಂಜೆ ೬.೩೦ಕ್ಕೆ ಶರಾವತಿ ನಗರದಲ್ಲಿ ರಂಗಗೀತೆ ಗಾಯನ ನಡೆಯುವುದು. ಸಂಜೆ ೭ಕ್ಕೆ ಕುವೆಂಪು ರಂಗಮಂದಿರದಲ್ಲಿ ಜೋಗಿ ಅವರು ರಚಿಸಿರುವ ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ ಆಸ್ಟ್ ಮಿಸ್ಟರ್ ವೈಎನೈ ನಾಟಕವನ್ನು ಆರ್.ಎಸ್. ಹಾಲಸ್ವಾಮಿ ಅವರ ನಿರ್ದೇಶನ ದಲ್ಲಿ ನೇಟಿವ್ ಥಿಯೇಟರ್ ಕಲಾವಿದರು ಅಭಿನಯಿಸುವರು ಎಮದರು.
ಸೆ.೨೮ಕ್ಕೆ ಸಂಜೆ ಕಾಂತೇಶ್ ಕದರಮಂಡಲಗಿ ನಿರ್ದೇಶನದ ರಾವೀನದಿ ದಂಡೆಯಲ್ಲಿ ನಾಟಕ ಪ್ರದರ್ಶನ ಇರುತ್ತದೆ, ಸೆಪ್ಟೆಂಬರ್ ೨೯ರಂದು ಕಟೀಲ್ ಅಶೋಕ್ ಪೈ ಮೆಮೋರಿಯಲ್ ಕಾಲೇಜಿನ ತಂಡವು ಉಮೇಶ್ ರಚನೆ. ಮಂಜುನಾಥ ಸ್ವಾಮಿ ಅನುವಾದ, ಶಂಕರ್ ಕೆ. ನಿರ್ದೇಶನದಲ್ಲಿ ಬಾಲ್ಯ ವಿವಾಹ ಬೀದಿ ನಾಟಕವನ್ನು ಶಿವಮೊಗ್ಗದ ವಿವಿದೆಡೆ ಪ್ರದರ್ಶನ ಮಾಡುವರು. ಸಂಜೆ ೬ ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ರಂಗಗೀತೆ ಗಾಯನ, ನಂತರ ಡಾ. ಚಂದ್ರಶೇಖರ ಕಂಬಾರ ಅವರ ಜೋಕುಮಾರಸ್ವಾಮಿ ನಾಟಕವನ್ನು ಸಹ್ಯಾದ್ರಿ ಕಲಾ ತಂಡದ ಕಲಾವಿದರು ಜಿ.ಆರ್. ಲವ ಅವರ ನಿರ್ದೇಶನ ದಲ್ಲಿ ಅಭಿನಯಿಸುವರು ಎಂದರು.
ಸೆ.೩೦ಕ್ಕೆ ರಂಗದಸರಾ ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯ ಕಲಾವಿದ ಪ್ರಕಾಶ್‌ರಾವ್ ಸಮಾರೋಪ ಭಾಷಣ ಮಾಡುವರು. ಅಂದು ಕೂಡ ಡಾ. ಚಂದ್ರಶೇಖರ್ ಕಂಬಾರ ಅವರ “ಡಾ. ಜೋಕುಮಾರ ಸ್ವಾಮಿ” ನಾಟಕ ಪ್ರದರ್ಶನಗೊ ಳ್ಳಲಿದೆ ಎಂದರು.
ಸಂದರ್ಭದಲ್ಲಿ ಪಾಲಿಕೆಯ ಕಿರಿಯ ಅಭಿಯಂತರ ಹಾಗೂ ರಂಗದಸರಾ ಸಮಿತಿಯ ಸದಸ್ಯ ಕಾರ್ಯದರ್ಶಿ ಮಧುನಾಯಕ್ ಎನ್., ನಿರ್ದೇಶಕ ಆರ್.ಎಸ್. ಹಾಲಸ್ವಾಮಿ, ಮಂಜುನಾಥ್, ಚಂದನ್, ಅಭಿ, ಸುರೇಶ್, ಉಪಸ್ಥಿತರಿದ್ದರು.
