ಶಿವಮೊಗ್ಗ : ರಾಷ್ಟ್ರೀಯ ಆರೋಗ್ಯ ಅಭಿ ಯಾನದಡಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಅಧೀನದಲ್ಲಿ ಬರುವ ವಿವಿಧ ಕಾರ್ಯಕ್ರಮದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆರ್ಹ ರಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಿದೆ.
ಎನ್‌ಪಿಎನ್‌ಸಿಸಿ ಕಾರ್ಯಕ್ರಮದಡಿ ಎಂಬಿಬಿಎಸ್ ವೈದ್ಯರ ೧೦ ಹುದ್ದೆಗಳಿಗೆ ೩ ವರ್ಷ ಕೆಲಸ ಮಾಡಿದ ಅನುಭವವಿರುವ ಎಂಬಿಬಿಎಸ್ ವಿದ್ಯಾರ್ಹತೆಯಿರಬೇಕು. ಶುಶ್ರೂಷಾಧಿಕಾರಿಯ ೧ ಹುದ್ದೆಗೆ ಜಿಎನ್‌ಎಂ ವಿದ್ಯಾರ್ಹತೆ ಮತ್ತು ೨ ವರ್ಷ ಕೆಲಸ ಮಾಡಿದ ಅನುಭವವಿರಬೇಕು.
ಎನ್‌ಪಿಹೆಚ್‌ಸಿಇ ಕಾರ್ಯಕ್ರಮದಡಿ ತಜ್ಞವೈದ್ಯರ (ಎಂ.ಡಿ. ಇಂಟರ್ನಲ್ ಮೆಡಿಸಿನ್/ಜನರಲ್ ಮೆಡಿಸಿನ್) ೧ ಹುದ್ದೆಗೆ ಎಂಬಿ ಬಿಎಸ್-ಎಚಿಡಿ(ಇಂಟರ್ನಲ್ ಮೆಡಿಸಿನ್/ಜಿಎಂ) ವಿದ್ಯಾರ್ಹತೆ ಹಾಗೂ ೩ ವರ್ಷ ಕಾರ್ಯ ನಿರ್ವಹಿಸಿದ ಅನುಭವವಿರಬೇಕು.
ಆಸಕ್ತರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಬಿ.ಹೆಚ್.ರಸ್ತೆ ಇಲ್ಲಿ ಸೆ. ೨೨ ರಂದು ನಡೆಯುವ ನೇರ ಸಂದರ್ಶನಕ್ಕೆ ಬೆಳಗ್ಗೆ ೧೧.೦೦ಕ್ಕೆ ದಾಖಲೆಗಳ ಮೂಲ ಪ್ರತಿ ಮತ್ತು ಛಾಯಾಪ್ರತಿಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಕೆಲಸದ ವೇಳೆಯಲ್ಲಿ ಕಚೇರಿಯನ್ನು ಸಂಪರ್ಕಿಸುವುದು.
ಎಂಬಿಬಿಎಸ್ ವೈದ್ಯರಿಗೆ ವಿಶೇಷ ಸೂಚನೆ : ಎನ್.ಸಿ.ಡಿ ಕ್ಲಿನಿಕ್ ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇದ್ದಲ್ಲಿ ಪ್ರತಿ ತಿಂಗಳ ೩ನೇ ಸೋಮವಾರದಂದು ವೈದ್ಯರ ಮತ್ತು ತಜ್ಞ ವೈದ್ಯರ ಹುದ್ದೆಗೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
Subscribe to Updates
Get the latest creative news from FooBar about art, design and business.