ಶಿವಮೊಗ್ಗ : ಪರಿಶಿಷ್ಟ ಸಮುದಾಯಕ್ಕೆ ಸುಮಾರು ೫೧ ಜಾತಿ ಇದ್ದು, ಪ್ರಸ್ತುತ ಗೊಂಡ, ಕುರುಬ, ಕೋಲಿ ಮತ್ತು ಕಬ್ಬಲಿಗ ಸಮುದಾಯವನ್ನು ಪರಿಶಿಷ್ಟ ಸಮುದಾಯಕ್ಕೆ ಸೇರಿಸುವದಕ್ಕೆ ಸಿದ್ದರಾಮಯ್ಯನವರ ನೇತ್ರತ್ವದ ಸರ್ಕಾರವು ಪ್ರಸ್ತಾವನೆಯನ್ನು ಮಾಡಿರುವುದು ಖಂಡನೀಯ, ಇದನ್ನು ತಕ್ಷಣದಲ್ಲಿ ಕೈ ಬಿಡುವಂತೆ ದಿಶಾ ಸಮಿತಿ ಸದಸ್ಯರಾದ ಗಿರೀಶ್ ಈ ಭದ್ರಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಸೌಲಭ್ಯಗಳನ್ನು ಪರಿಶಿಷ್ಟ ಸಮುದಾಯದಿಂದ ಕಸಿದುಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದರಿಂದ ರಾಜ್ಯದಲ್ಲಿ ಕುರುಬ ಸಮಾಜ ಮತ್ತು ಪರಿಶಿಷ್ಟ ಸಮುದಾಯವರು ಅಣ್ಣ-ತಮ್ಮಂದಿರಂತೆ ಇದ್ದು ಸಂಬಂಧ ನಡುವೆ ವಿಷ ಬೀಜ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.
ಪರಿಶಿಷ್ಟ ಸಮುದಾಯಕ್ಕೆ ಸೇರಿದ ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಆದಂತಹ ಸತೀಶ ಎಲ್. ಜಾರಕಿಹೊಳಿ ಪರಿಶಿಷ್ಟ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ತಿಳಿದರು ಕೂಡ ಯಾವುದೇ ರೀತಿಯಲ್ಲಿ ವಿರೋದ ವ್ಯಕ್ತಪಡಿಸುತ್ತಿಲ್ಲ. ಇದ್ದರಿಂದ ಅವರಿಗೆ ಮುಂದಿನ ರಾಜಕೀಯ ಭವಿಷ್ಯ ಕುತ್ತ ಬರುವ ಸಾಧ್ಯತೆಯಿದೆ, ಮುಂದಿನ ದಿನಗಳಲ್ಲಿ ಈ ಅನ್ಯಾಯವು ಮುಂದುವರೆದರೇ ನಮ್ಮ ಸಮುದಾಯದ ಶ್ರೀ ವಾಲ್ಮೀಕಿ ಮಹಾಸಂಸ್ಥಾನದ ಗುರುಗಳಾದ ಪ್ರಸನ್ನನಂದ ಸ್ವಾಮೀಜಿಯವರ ನೇತ್ರತ್ವದಲ್ಲಿ ರಾಜ್ಯಾದಂತಹ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
====================================================
ಮಾಜಿ ಮುಖ್ಯ ಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರ ನೇತ್ರತ್ವದ ಸರ್ಕಾರ ಆಡಳಿತ ಸಮಯದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅನುಕೂಲವಾಗಿಲಿ ಎಂದು ಶೇಕಡ ೩% ರಷ್ಟು ಇದ್ದ ಮೀಸಲಾತಿಯನ್ನು ಶೇಕಡ ೭% ರಷ್ಟು ಹೆಚ್ಚು ಮಾಡಿದ್ದರು. ಹಾಗೇ ಸರ್ಕಾರದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲು ಸರಕಾರಿ ರಜೆ ಘೋಷಿಸಿದ್ದು, ಹಾಗೂ ಪರಿಶಿಷ್ಟ ಸಮುದಾಯಕ್ಕೆ ಪ್ರತ್ಯೇಕ ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿಯನ್ನು ಸ್ತಾಪಿಸಿ ಸಮುದಾಯಕ್ಕೆ ಅನುಕೂಲವಾಗಿ ಸಮಾಜದ ಮುಖ್ಯವಾಹಿನಿ ಬರಬೇಕೆಂದು ಪ್ರಯತ್ನ ಪಟ್ಟಿದ್ದು ಇಲ್ಲಿ ಸ್ಮರಿಸಿಬಹುದು.
: ಗಿರೀಶ್ ಈ ಭದ್ರಾಪುರ
ದಿಶಾ ಸದಸ್ಯ
=====================================================
Subscribe to Updates
Get the latest creative news from FooBar about art, design and business.