ಮೋದಿಯ ೭೫ ವರ್ಷದ ಹುಟ್ಟುಹಬ್ವದ ಪ್ರಯುಕ್ತ ರಾಜ್ಯದಲ್ಲಿ ಎರಡು ಕಡೆ ಮ್ಯಾರಥಾನ್
ಶಿವಮೊಗ್ಗ : ನರೇಂದ್ರ ಮೋದಿಯ ೭೫ ವರ್ಷದ ಹುಟ್ಟುಹಬ್ವದ ಪ್ರಯುಕ್ತ ರಾಜ್ಯದಲ್ಲಿ ಎರಡು ಕಡೆ ಮ್ಯಾರಥಾನ್ ಹಮ್ಮಿಕೊಳ್ಳಲಿದೆ. ನಮೋ ಯುವ ರನ್ ಎಂಬ ಹೆಸರಿನಲ್ಲಿ ಈ ಮ್ಯಾರಥಾನ್ ನಡೆಸಯಲಿದೆ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಕುಕ್ಕೆ ಪ್ರಶಾಂತ್ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡುತ್ತಾ ಸೆ. ೨೧ ರಂದು ಬೆಳಿಗ್ಗೆ ಶಿವಮೂರ್ತಿ ಸರ್ಕಲ್ ನಿಂದ ೩.೫ ಕಿಮಿ ಮ್ಯಾರಥಾನ್ ಆರಂಭಿಸಿ ಶಿವಮೂರ್ತಿ ವೃತ್ತ, ಮಹಾವೀರ, ಡಿವಿಎಸ್, ಬಿಹೆಚ್ ರಸ್ತೆ, ಸಾವರ್ಕರ್ ವೃತ್ತ, ಗೋಪಿವೃತ್ತ, ಜೈಲ್ ವೃತ್ತ, ಕುವೆಂಪು ರಸ್ತೆ ಮೂಲಕ ಶಿವಮೂರ್ತಿ ವೃತ್ತಕ್ಕೆ ತಲುಪಲಿದೆ ಎಂದರು.
ಇದಕ್ಕೆ ಆನ್‌ಲೈನ್ ೪೭೦೦ ಜನ ನೋಂದಣಿ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿಯೇ ಬಂದು ಭಾಗಿವಹಿಸಿಬಹುದು. ದೇಶದಲ್ಲಿ ೧೦೦ ನಗರದಲ್ಲಿ ನಮೋ ಯುವ ರನ್ ನಡೆಯಲಿದೆ. ಆರು ವಿಭಾಗದಲ್ಲಿ ಮ್ಯಾರಥಾನ್ ನಡೆಯಲಿದೆ ಪ್ರತಿಯೊಂದು ಹಂತದಲ್ಲಿ ಮಹಿಳೆ ಮತ್ತು ಪುರಷರ ವಿಭಾಗವಿದ್ದು. ಪ್ರತಿ ವಿಭಾಗಕ್ಕೂ ಮೊದಲ ಬಹುಮಾನ ೫೦೦೦ ದ್ವಿತೀಯ ಬಹುಮಾನವಾಗಿ ೩೦೦೦ ಹಾಗೂ ೨೦೦೦ ರೂ ಬಹುಮಾನವಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈ ಕಾರ್ಯಕ್ರಮ ಉದ್ಗಾಟಿಸಲಿದ್ದಾರೆ. ಸಂಸದರಾದ ಬಿ.ವೈ.ರಾಘವೇಂದ್ರ. ಶಾಸಕರಾದ ಚನ್ನಬಸಪ್ಪ, ಎಲ್ಲಾ ಜನಪ್ರತಿನಿಧಿಗಳು, ಸಿನಿಮಾ ನಟಿ ಕಾರುಣ್ಯ ರಾಮ್, ಸಿನಿಮಾ ನಟ ಗೌರಿಶಂಕರ್, ರಾಷ್ಟ್ರೀಯ ಅಥ್ಲೆಟಿಕ್, ಸೌಮ್ಯ ಸಾವಂತ್ ಮತ್ತು ಸ್ಟ್ಯಾನಿ ಭಾಗವಹಿಸಲಿದ್ದಾರೆಂದರು.
ಇದೇ ಸಂದರ್ಭದಲ್ಲಿ ನಶೆಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ಸಂಸದರಾದ ರಾಘವೆಂದ್ರ ಚಾಲನೆ ನೀಡಲಿದ್ದಾರೆ.
ಸಂದರ್ಭದಲ್ಲಿ ಧೃವ ಕುಮಾರ್, ದರ್ಶನ್, ರಾಹುಲ್ ಬಿದರೆ, ಅನಿಲ್ ಲಕ್ಕಿನ್ ಕೊಪ್ಪ, ಸಂತೋಷ್, ಜಯರಾಮ್ ಮೊದಲಾದವರು ಉಪಸ್ಥಿತರಿದ್ದರು.